ಕೊರೊನಾ ಕಾಟ: ಫಿಲಿಫೈನ್ಸ್ ನಲ್ಲಿ ಇರುವಂತಿಲ್ಲ, ಭಾರತಕ್ಕೆ ಬರುವಂತಿಲ್ಲ

ವಾಶಿಂಗ್ ಟನ್, ಮಾರ್ಚ್.18: ಕೊರೊನಾ ವೈರಸ್ ಭೀತಿಯಲ್ಲಿ ವಿಶ್ವವೇ ನಲುಗಿ ಹೋಗಿದೆ. ಫಿಲಿಫೈನ್ಸ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನೂರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ತಮ್ಮನ್ನು ಸ್ವದೇಶಕ್ಕೆ ವಾಪಸ್ ಕರೆ ತರುವಂತೆ ಭಾರತ ಕೇಂದ್ರ ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.

ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮಂಗಳವಾರವಷ್ಟೇ ಅಫ್ಘಾನಿಸ್ತಾನ್, ಫಿಲಿಫೈನ್ಸ್ ಹಾಗೂ ಮಲೇಶಿಯಾದಿಂದ ಆಗಮಿಸುವ ಪ್ರಯಾಣಿಕರ ಪ್ರವೇಶಕ್ಕೆ ತತ್ ಕ್ಷಣದಿಂದಲೇ ಜಾರಿಗೆ ಬರವಂತೆ ನಿರ್ಬಂಧ ವಿಧಿಸಿತ್ತು.

ಭಾರತಕ್ಕೆ ಆಗಮಿಸುವುದಕ್ಕಾಗಿ ಫಿಲಿಫೈನ್ಸ್ ನಲ್ಲಿ ಇರುವ 200ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸ್ ಆಗಲು ಏರ್ ಟಿಕೆಟ್ ಗಳನ್ನು ಬುಕ್ ಮಾಡಿದ್ದರು. ಆದರೆ, ಕೇಂದ್ರ ಸರ್ಕಾರದ ನಿಯಮದಿಂದ ವಿದ್ಯಾರ್ಥಿಗಳು ಬುಕ್ ಮಾಡಿದ್ದ ಟಿಕೆಟ್ ಗಳೆಲ್ಲ ಕ್ಯಾನ್ಸಲ್ ಆಗಿವೆ.

ಸ್ವದೇಶಕ್ಕೆ ಹೊರಟು ನಿಂತವರ ಏರ್ ಟಿಕೆಟ್ ರದ್ದು

ಸ್ವದೇಶಕ್ಕೆ ಹೊರಟು ನಿಂತವರ ಏರ್ ಟಿಕೆಟ್ ರದ್ದು

ಮಾರ್ಚ್.17, 18 ಮತ್ತು 19ರಂದು ಭಾರತಕ್ಕೆ ವಾಪಸ್ ಆಗುವುದಕ್ಕಾಗಿ 200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಏರ್ ಟಿಕೆಟ್ ಬುಕ್ ಮಾಡಿದ್ದರು. ಕೇಂದ್ರ ಸರ್ಕಾರದ ನೀತಿಯಿಂದಾಗಿ ಆ ಏರ್ ಟಿಕೆಟ್ ಗಳೆಲ್ಲ ರದ್ದಾಗಿದ್ದು, ವಿದ್ಯಾರ್ಥಿಗಳು ಆತಂಕಕ್ಕೆ ಗುರಿಯಾಗಿದ್ದಾರೆ. ಇದರ ನಡುವೆ ಮನೇಲಿ ಸೇರಿದಂತೆ ಹಲವು ರಾಷ್ಟ್ರಗಳು ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ರದ್ದುಗೊಳಿಸಿವೆ.

ವಿಮಾನ ನಿಲ್ದಾಣಗಳಲ್ಲೇ ಕಾಯುತ್ತಿರುವ ಪ್ರಯಾಣಿಸಕರು

ವಿಮಾನ ನಿಲ್ದಾಣಗಳಲ್ಲೇ ಕಾಯುತ್ತಿರುವ ಪ್ರಯಾಣಿಸಕರು

ಏರ್ ಟಿಕೆಟ್ ಬುಕ್ ಮಾಡಿದ್ದ 100ಕ್ಕೂ ಹೆಚ್ಚು ಭಾರತೀಯರು ಸ್ವದೇಶಕ್ಕೆ ಆಗಮಿಸುವುದಕ್ಕಾಗಿ ಮಂಗಳವಾರ ಏರ್ ಪೋರ್ಟ್ ಗೆ ಆಗಮಿಸಿದ್ದರು. ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಿಂದ ವಿಮಾನ ಹಾರಾಟ ರದ್ದಾಗಿದ್ದು, ವಿಮಾನಯಾನ ಪ್ರಾಧಿಕಾರದ ಅಧಿಕಾರಿದಳು ಪ್ರಯಾಣಿಕರು ವಾಪಸ್ ಮನೆಗೆ ತೆರಳುವಂತೆ ಸೂಚಿಸಿದೆ. ಆದರೆ, ಮನೆಗೆ ವಾಪಸ್ ಆಗಲು ಟ್ಯಾಕ್ಸ್ ಗಳಿಲ್ಲದೇ ಏರ್ ಪೋರ್ಟ್ ಗಳಲ್ಲಿಯೇ ಜನರು ಕಾಲ ಕಳೆಯುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.

ಫಿಲಿಫೈನ್ಸ್ ತೊರೆಯಲು ಮೂರೇ ದಿನ ಅವಕಾಶ

ಫಿಲಿಫೈನ್ಸ್ ತೊರೆಯಲು ಮೂರೇ ದಿನ ಅವಕಾಶ

ಕಳೆದ ಮಾರ್ಚ್.16ರಂದೇ ಫಿಲಿಫೈನ್ಸ್ ನಲ್ಲಿ ವ್ಯಾಪಾರ-ವಹಿವಾಟು ಸಂಚಾರವೆಲ್ಲ ಸ್ತಬ್ಧಗೊಂಡಿದೆ. ವಿದೇಶಿಗರು ದೇಶ ತೊರೆಯಲು ಅಲ್ಲಿನ ಸರ್ಕಾರವು 72 ಗಂಟೆಗಳ ಅಂದರೆ ಮೂರು ದಿನಗಳ ಅವಕಾಶ ನೀಡಿತ್ತು. ಇದರಲಲ್ಲಿ ಎರಡು ದಿನಗಳು ಈಗಾಗಲೇ ಕಳೆದು ಹೋಗಿವೆ. ಮುಂದೇನು ಎಂಬ ಆತಂಕ ಭಾರತೀಯರನ್ನು ಕಾಡುತ್ತಿದೆ.

1000ಕ್ಕೂ ಅಧಿಕ ಭಾರತೀ ವಿದ್ಯಾರ್ಥಿಗಳಿಗೆ ಸಂಕಷ್ಟ

1000ಕ್ಕೂ ಅಧಿಕ ಭಾರತೀ ವಿದ್ಯಾರ್ಥಿಗಳಿಗೆ ಸಂಕಷ್ಟ

ಮನೇಲಿಯಲ್ಲಿ ಇರುವ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ಅಲ್ಲಿ ಇರುವುದಕ್ಕೂ ಆಗದೇ ಸ್ವದೇಶಕ್ಕೆ ಬರುವುದಕ್ಕೂ ಆಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಮನೇಲಿಯಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+