ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು, ಬಹುಮತ ಇಲ್ಲದವರಿಗೆ ಅಧಿಕಾರ!

ಕೊಲಂಬೊ, ಅಕ್ಟೋಬರ್ 27: ಶ್ರೀಲಂಕಾದಲ್ಲಿ ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ಲಂಕಾದ ಪ್ರಧಾನಿಯನ್ನೇ ಪದಚ್ಯುತಿಗೊಳಿ, ಹೊಸ ಪ್ರಧಾನಿಯನ್ನು ನೇಮಕ ಮಾಡಲಾಗಿದೆ ಇದು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿದೆ.

ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಿಗೊಳಿಸಿರುವ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಹೊಸ ಪ್ರಧಾನಿಯಾಗಿ ಮಹಿಂದಾ ರಾಜಪಕ್ಸ ಅವರನ್ನು ನೇಮಕ ಮಾಡಿ ಪ್ರಮಾಣವಚನ ಬೋಧಿಸಿದ್ದಾರೆ. ಆದರೆ ರಾಜಪಕ್ಸೆ ಪಕ್ಷ ಗೆದ್ದಿರುವ ಸೀಟು ಕೇವಲ 96 ಅವರಿಗೆ ಬಹುಮತ ಇಲ್ಲ.

ಈ ಹಿನ್ನೆಲೆಯಲ್ಲಿ ಯುನೈಟೆಡ್‌ ನ್ಯಾಷನಲ್‌ ಪಾರ್ಟಿ ಮತ್ತು ಯುನೈಟೆಡ್ ಪೀಪಲ್‌ ಫ್ರೀಡಂ ಅಲೆಯನ್ಸ್‌ ಮೈತ್ರಿ ಮಾಡಿಕೊಂಡು ರನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಮಾಡಲಾಗಿತ್ತು. ಆದರೆ ಯುನೈಟೆಡ್ ಪೀಪಲ್ ಫ್ರೀಡಂ ಅಲೆಯನ್ಸ್‌ ಮೈತ್ರಿಯಿಂದ ಹೊರಬಂದ ಕಾರಣ ಪ್ರಧಾನಿಯನ್ನು ಪದಚ್ಯುತಗೊಳಿಸಿ ಮಹಿಂದ ರಾಜಪಕ್ಸ ಅವರನ್ನು ಪ್ರಧಾನಿಯನ್ನಾಗಿಸಿದ್ದಾರೆ ಅಧ್ಯಕ್ಷ ಸಿರಿಸೇನ.

constitutional crisis in Sri Lanka, second majority party ruling

2015 ರಲ್ಲಿ ನಡೆದ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ರಚನೆಯಾಗಿತ್ತು. ಆಗ ಮೈತ್ರಿಪಾಲ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ರಾಜಪಕ್ಸ ಅವರ 10 ವರ್ಷದ ಆಡಳಿತಕ್ಕೆ ಆ ಚುನಾವಣೆ ಕೊನೆ ಹಾಡಿತ್ತು. ಆದರೆ ಈಗ ಮತ್ತೆ ರಾಜಪಕ್ಸ ಅವರೇ ಪ್ರಧಾನಿ ಆಗಿದ್ದಾರೆ.

ಇತ್ತೀಚೆಗಷ್ಟೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು 'ನನ್ನನ್ನು ಕೊಲ್ಲಲು ಸಂಚು ನಡೆಸಲಾಗುತ್ತಿದೆ, ವಿಷಯವನ್ನು ಪ್ರಧಾನಿ ಕಾರ್ಯಾಲಯ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ' ಎಂದು ಹೇಳಿದ್ದರು ಇದು ಲಂಕಾದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎಬ್ಬಿಸಿತ್ತು. ಪ್ರಧಾನಿ ಮೇಲಿನ ಅಪನಂಬಿಕೆಯಿಂದಲೇ ಅವರನ್ನು ಸಿರಿಸೇನಾ ಪದಚ್ಯುತ ಗೊಳಿಸಿದ್ದಾರೆ.

ಪದಚ್ಯುತವಾಗಿರುವ ರನಿಲ್ ವಿಕ್ರಮಸಿಂಘೆ ಅವರ ಪಕ್ಷವು ಕಳೆದ ಚುನಾವಣೆಯಲ್ಲಿ 106 ಸೀಟುಗಳನ್ನು ಪಡೆದಿದೆ ಆದರೆ ಏಳು ಸ್ಥಾನಗಳಿಂದ ಅದೂ ಸಹ ಬಹುಮತದಿಂದ ಹಿಂದೆ ಉಳಿದಿದೆ. ಪ್ರಸ್ತುತ ಕಡಿಮೆ ಸ್ಥಾನ ಪಡೆದಿರುವ ಪಕ್ಷವೊಂದು ಶ್ರೀಲಂಕಾದಲ್ಲಿ ಆಡಳಿತ ನಡೆಸುತ್ತಿದ್ದು, ಇದು ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಠಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+