Coffee Pod: ಜೈವಿಕವಾಗಿ ಕರಗೋ ಕಾಫಿ ಪಾಡ್‌ ಆವಿಷ್ಕಾರ ; 21 ಲಕ್ಷ ಗೆದ್ದ ಭಾರತೀಯ ಮೂಲದ ವಿದ್ಯಾರ್ಥಿಗಳು

Coffee Pod: ಇದು ಅಮೆರಿಕದಲ್ಲಿರುವ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳ ಸಾಧನೆ. ಹೈಸ್ಕೂಲ್ ವಿದ್ಯಾರ್ಥಿಗಳಾದ ಆದಿತ್ಯ ಹೆರೆಕರ್ ಮತ್ತು ಕರಣ್ ವರ್ಮಾ ಪರಿಸರ ಸ್ನೇಹಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಜೈವಿಕವಾಗಿ ಕರಗುವ ಕಾಫಿ ಪಾಡ್‌ಗಳನ್ನು ಆವಿಷ್ಕರಿಸಿದ್ದು, ತಮ್ಮ ವಿಭಿನ್ನ ಉತ್ಪನ್ನಕ್ಕೆ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

Coffee Pod Indian Origin Students From America Built Biodegradable Cofee Pod And Won 21 Lakh For Their Invention

ಕ್ಲಾಸ್‌ ಪ್ರಾಜೆಕ್ಟ್‌ನಿಂದ ಸಂಶೋಧನೆವರೆಗೆ :

ಕೆಮಿಸ್ಟ್ರಿ ಕ್ಲಾಸ್‌ ಪ್ರಾಜೆಕ್ಟ್‌ ಅವರ ಈ ಸಂಶೋಧನೆಗೆ ಕಾರಣ. ಇವರಿಗೆ ಶಾಲೆಯಲ್ಲಿ ಗೃಹೋಪಯೋಗಿ ತ್ಯಾಜ್ಯ ನಿರ್ವಹಣೆ ಕುರಿತು ಪ್ರಾಜೆಕ್ಟ್‌ ಮಾಡಲು ಹೇಳಿದ್ದರು. ಇದಕ್ಕೆ ವರ್ಕ್ ಮಾಡುತ್ತಿವಾಗ ಸುತ್ತಿದ್ದಾಗ ಇವರ ತಲೆಗೆ ಬಂದ ಯೋಚನೆಯೇ ಈ ಕಾಫಿ ಕ್ಯಾಪ್ಸುಲ್.‌ ಸಾಮಾನ್ಯವಾಗಿ ಬಳಸೋ ಕ್ಯಾಪ್ಸುಲನ್ನು ಪ್ಲಾಸ್ಟಿಕ್ ಮತ್ತು ಅಲ್ಯೂಮಿನಿಯಂ ಮಿಶ್ರಣದಿಂದ ಮಾಡಲಾಗ್ತದೆ. ಇದನ್ನು ಬಹಳ ಕಾಲದವರೆಗೆ ಸ್ಟೋರ್‌ ಮಾಡಿಡಲು ಸಹಾಯ ಆಗೋ ರೀತಿಯಲ್ಲಿ ಡಿಸೈನ್‌ ಮಾಡಲಾಗಿದೆ. ಈ ಕಾಫಿ ಕ್ಯಾಪ್ಸುಲ್ ವೇಸ್ಟನ್ನು ರಿಸೈಕಲ್‌ ಮಾಡೋದು ಬಹಳ ಕಷ್ಟ. ಅದು ನ್ಯಾಚ್ಯುರಲ್‌ ಆಗಿ ಕರಗುವುದೂ ಇಲ್ಲ. ಹಾಗಾಗಿ ಪ್ರಕೃತಿ ಪಾಲಿಗೆ ಇದೊಂದು ರೀತಿ ವಿಷವೇ.

ಅಡುಗೆ ಮನೆಯಿಂದಲೇ Coffee Pod ಆವಿಷ್ಕಾರ ಶುರು :

ಆದಿತ್ಯ ಮತ್ತು ಕರಣ್‌ ಈ ಕಾಫಿ ಕ್ಯಾಪ್ಸುಲ್‌ ಪರಿಸರಕ್ಕೆ ಹಾನಿ ಆಗದ ರೀತಿಯಲ್ಲಿ ವಿಲೇವಾರಿ ಮಾಡುವ ರೀತಿ ಯಾವುದು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಈ ಸಮಸ್ಯೆಗೊಂದು ಪರಿಹಾರ ಕಂಡುಕೊಂಡರೆ ತಮ್ಮ ಪ್ರಾಜೆಕ್ಟ್‌ನಲ್ಲಿ ನಾವು ಗೆದ್ದಂತೆಯೇ ಎನ್ನುವುದು ಪಕ್ಕಾ ಆಗುತ್ತದೆ. ಹಾಗಾಗಿ ಈ ಕಾಫಿ ಪಾಡ್‌ ಅನ್ನೇ ಬೇರೆಯೇ ರೀತಿಯಲ್ಲಿ ತಯಾರಿಸುವ ಕೆಲಸಕ್ಕೆ ಮುಂದಾಗ್ತಾರೆ.

ಒಂದೇ ಸಲಕ್ಕೆ ಸಿಕ್ಕಿರುವ ಯಶಸ್ಸಲ್ಲ ಇದು :

ಈ ಪ್ರಯೋಗಕ್ಕೆ ಇಳಿದಾಗ ಮೊದಲು ಮನೆಯಲ್ಲಿಯೇ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸುವುದಕ್ಕೆ ಶುರು ಮಾಡ್ತಾರೆ. ನಂತರ ಬಯೋಫಿಲ್ಮ್, ಬಯೋ ಪಾಲಿಮರ್‌ಗಳನ್ನು ಹೊರಗಿನಿಂದ ತರಿಸಿಕೊಳ್ತಾರೆ. ಮೋಲ್ಡ್‌ಗಳನ್ನು ತಯಾರಿಸ್ತಾರೆ. ಕಾಫಿ ಮತ್ತು ಬಿಸಿ ನೀರನ್ನು ಹಾಕಿ ಟೆಸ್ಟ್‌ ಮಾಡ್ತಾರೆ. ಹೀಗೆ ಟ್ರೈ ಮಾಡ್ತಾ ಮಾಡ್ತಾ 200ಕ್ಕೂ ಹೆಚ್ಚು ಸಲ ವೈಫಲ್ಯವನ್ನೇ ನೋಡ್ತಾರೆ. ಆದ್ರೂ ಇಬ್ಬರೂ ಸುಮ್ಮನಾಗುವುದಿಲ್ಲ. ಮರಳಿ ಯತ್ನವ ಮಾಡು ಅನ್ನೋ ಹಾಗೆ ಮತ್ತೆ ಮತ್ತೆ ಟ್ರೈ ಮಾಡ್ತಾನೇ ಇರ್ತಾರೆ.

ಮೋಡಿ ಮಾಡಿದ ಜೋಡಿ :

ಕೊನೆಗೆ ಈ ಜೋಡಿ ಮೋಡಿ ಮಾಡಿಯೇ ಬಿಡುತ್ತದೆ. ಬಿಸಿ ನೀರಿನಲ್ಲಿ ಸುಲಭವಾಗಿ ಕರಗಬಲ್ಲ ಪುಲ್ಲುಲನ್ ಬಳಸುವ ನಿರ್ಧಾರಕ್ಕೆ ಬರ್ತಾರೆ. ಪುಲ್ಲುಲನ್ ಪ್ಲಾಸ್ಟಿಕ್‌ ಅಲ್ಯೂಮಿನಿಯಂ ಮುಕ್ತ. ಸೂಕ್ಷ್ಮಜೀವಿಗಳಿಂದ ಉತ್ಪತ್ತಿಯಾಗುವ ಪಾಲಿಸ್ಯಾಕರೈಡ್ . ಮೆಡಿಸಿನಲ್‌ ಪ್ರಾಡಕ್ಟ್‌ಗಳಲ್ಲಿಯೂ ಇದನ್ನು ಬಳಸ್ತಾರೆ. ಬಿಸಿ ನೀರಿನಲ್ಲಿ ಬಹಳ ಬೇಗನೆ ಮತ್ತು ಪೂರ್ತಿಯಾಗಿ ಕರಗಿ ಬಿಡುತ್ತದೆ. ತಮ್ಮ ಪ್ರಾಜೆಕ್ಟ್‌ಗೆ ನ್ಯಾಚುರಿಸ್ಟಾ ಎನ್ನುವ ಹೆಸರು ಕೊಡ್ತಾರೆ. ಈಗ ನ್ಯಾಚುರಿಸ್ಟಾ ಕಾಫಿ ಪಾಡ್‌ನ ಹೀರೋ ಇದೇ ಪುಲ್ಲುಲನ್. ಇದು ಬಿಸಿ ನೀರು ಅಥವಾ ಹಾಲಿನಲ್ಲಿ ಸಂಪೂರ್ಣವಾಗಿ ಕರಗುತ್ತದೆ. ಪ್ಲಾಸ್ಟಿಕ್‌ ತ್ಯಾಜ್ಯ ಉಳಿಯೋದೇ ಇಲ್ಲ.

ಇನ್ನು ಇದರ ಪ್ಯಾಕೇಜಿಂಗ್‌ ಕೂಡಾ ಬಹಳ ಮುಖ್ಯ. ಇಲ್ಲೂ ಇದೇ ರೀತಿಯ ಮಾಸ್ಟರ್‌ ಪ್ಲಾನ್‌ ಮಾಡ್ತಾರೆ. ವರ್ಷಗಳ ಕಾಲ ಸ್ಟೋರ್‌ ಮಾಡಿಡುವ ಕಾಫಿ ಪಾಡ್ ಮಾಡುವ ಬದಲು, ಕುದಿಸುವ ಪ್ರಕ್ರಿಯೆಗೆ ಅಗತ್ಯವಿರುವವರೆಗೆ ಮಾತ್ರ ಬಾಳಿಕೆ ಬರುವ ಕಾಫಿ ಪಾಡ್ ಹೊರ ತರಲು ಮುಂದಾಗ್ತಾರೆ.

ಸಿಗುತ್ತದೆ ಪ್ರೊಫೆಸರ್‌ಗಳ ಸಾಥ್‌ :

ಈ ಪ್ರಯೋಗ ಶುರು ಮಾಡಿದ್ದು ಇಬ್ಬರು ವಿದ್ಯಾರ್ಥಿಗಳೇ. ಆದ್ರೆ ಈ ಪ್ರಾಜೆಕ್ಟ್‌ ಮುಂದುವರೀತಾ ಇದ್ದ ಹಾಗೆ ಕ್ಲಾಸ್‌ನಲ್ಲಿ ಕಲಿತಿರುವ ಪುಸ್ತಕ ಜ್ಞಾನವನ್ನು ಮೀರಿ ಇದನ್ನು ತೆಗೆದುಕೊಂಡು ಹೋಗ್ತಾರೆ. ಇದು ಈಗ ಬರೀ ಪ್ರಾಜೆಕ್ಟ್‌ ಆಗಿ ಉಳಿಯುವುದಿಲ್ಲ. ತಮ್ಮ ವಿದ್ಯಾರ್ಥಿಗಳು ಯಾವುದೋ ಒಂದು ಸಂಶೋಧನೆಯ ಹಾದಿಲಿ ಇರೋದು ಟೀಚರ್‌ಗಳಿಗೂ ಮನದಟ್ಟಾಗ್ತದೆ. ಹಾಗಾಗಿ ನಂತರ ಮೆಟೀರಿಯಲ್ ಸೈನ್ಸ್ ಮತ್ತು ಫುಡ್ ಸೈನ್ಸ್ ಪ್ರೊಫೆಸರ್‌, ಶೆಲ್ಫ್-ಲೈಫ್ ಎಕ್ಸ್‌ಪರ್ಟ್‌ಗಳ ಸಹಾಯ ಇವರಿಗೆ ಸಿಗ್ತದೆ. ಹಾಗಾಗಿ ನ್ಯಾಚುರಿಸ್ಟಾ ಮೂಲಮಾದರಿಯ ಹಂತವನ್ನು ಮೀರಿ ಬೆಳೀತದೆ. ನಂತರ ಈ ಯೋಜನೆಯ ಪೇಟೆಂಟ್‌ಗೆ ಅರ್ಜಿ ಹಾಕಲಾಗ್ತದೆ. ಪ್ರಬಂಧ ಕೂಡಾ ಪ್ರಕಟವಾಗ್ತದೆ.

ಎರಡು ರೀತಿಯ ಪಾಡ್‌ :

ನ್ಯಾಚುರಿಸ್ಟಾ ಇಲ್ಲಿ ಎರಡು ರೀತಿಯ ಕಾಫಿ ಕ್ಯಾಪ್ಸುಲ್‌ಗಳನ್ನು ಹೊರ ತರಲಾಗಿದೆ. ಒಂದು ಇನ್ಸ್ಟಂಟ್‌ ಪಾಡ್‌ ಇನ್ನೊಂದು ಮೆಷಿನ್‌ ಪಾಡ್.‌ ಇನ್ಸ್ಟಂಟ್‌ ಪಾಡ್‌ ಅನ್ನು ಸಿಂಗಲ್-ಸರ್ವ್ ಪಾಡ್‌ನ ಆಯಾಮಗಳಲ್ಲಿ ಡಿಸೈನ್‌ ಮಾಡಲಾಗಿದೆ. ಇದನ್ನು ಬಿಸಿ ನೀರು ಅಥವಾ ಹಾಲಿಗೆ ಹಾಕಿದ್ರೆ ಪೂರ್ತಿಯಾಗಿ ಕರಗಿ ಕಾಫಿ ನೀರು ಮತ್ತು ಹಾಲಿನಲ್ಲಿ ಮಿಕ್ಸ್‌ ಆಗ್ತದೆ. ಇನ್ನು ಮೆಷಿನ್‌ ಪಾಡ್‌ಗಾಗಿ ಬೇರೆಯೇ ಮೆಷಿನ್‌ ಕೊಳ್ಳುವ ಅಗತ್ಯ ಇಲ್ಲ. ಇದು ಯಾವ ಮೆಷಿನ್‌ನಲ್ಲಿ ಕೂಡಾ ಕೆಲಸ ಮಾಡುವ ರೀತಿ ಡಿಸೈನ್‌ ಮಾಡಲಾಗಿದೆ.

ಪರಿಸರ ಸ್ನೇಹಿ Coffee Pod :

ಜಗತ್ತಿನಾದ್ಯಂತ ವರ್ಷಕ್ಕೆ 80 ಶತಕೋಟಿಗೂ ಹೆಚ್ಚು ಪ್ಲಾಸ್ಟಿಕ್ ಕಾಫಿ (coffee) ಪೋಡ್‌ಗಳು ತ್ಯಾಜ್ಯವಾಗಿ ಹೊರ ಬರ್ತಾ ಇದೆ. ಈ ಕಾಫಿ ಪಾಡ್‌ಗಳು ಅಥವಾ ಕ್ಯಾಪ್ಸುಲ್‌ಗಳು ಪ್ಲಾಸ್ಟಿಕ್ ಮತ್ತು ಅಲ್ಯೂಮಿನಿಯಂ ಮಿಶ್ರಣ ಹೊಂದಿದೆ. ಆದಿತ್ಯ ಮತ್ತು ಕರಣ್ ಮಾಡಿರುವ ಈ ಆವಿಷ್ಕಾರ ಪ್ಲಾಸ್ಟಿಕ್‌ನಿಂದ ಆಗಬಹುದಾದ ಪ್ರಕೃತಿ ಮಾಲಿನ್ಯ ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ನ್ಯಾಚ್ಯುರಿಸ್ಟಾ ಕಾಫಿ ಪಾಡ್‌ ಪಾತ್ರ ಬಹಳ ದೊಡ್ಡದು.

21 ಲಕ್ಷ ಗೆದ್ದ ಆವಿಷ್ಕಾರ :

ಇವರಿಬ್ಬರು ತಮ್ಮ ಈ ಆವಿಷ್ಕಾರವನ್ನು (research) ಮೋಟ್ ಮಿಲಿಯನ್ ಡಾಲರ್ ಚಾಲೆಂಜ್‌ನಲ್ಲಿ ಇಟ್ಟಿದ್ಧಾರೆ. ಈ ಸ್ಪರ್ಧೆಯಲ್ಲಿ ನ್ಯಾಚುರಿಸ್ಟಾ 25,000 ಅಮೆರಿಕನ್ ಡಾಲರ್ ಅಂದ್ರೆ ಸರಿ ಸುಮಾರು 21 ಲಕ್ಷ ರೂಪಾಯಿಗಳ ಬಹುಮಾನ ಗೆದ್ದಿದೆ. ಒಟ್ಟಿನಲ್ಲಿ ಒಂದು ಸಣ್ಣ ಕ್ಲಾಸ್‌ ರೂಮ್‌ ಪ್ರಾಜೆಕ್ಟ್‌ ಇಷ್ಟು ದೊಡ್ಡ ಸಾಧನೆಗೆ ಕಾರಣವಾಯ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+