ಒಬಾಮಾ ಸರ್ಕಾರಕ್ಕೆ ಹಿನ್ನಡೆ, ಹೇಗಲ್ ರಾಜೀನಾಮೆ

ವಾಷಿಂಗ್ಟನ್, ನ.25: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮತ್ತು ರಿಪಬ್ಲಿಕನ್ ಪಕ್ಷದ ಏಕೈಕ ಸದಸ್ಯ ಚಕ್ ಹೇಗಲ್ ರಾಜಿನಾಮೆಯಿಂದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಅಚ್ಚರಿ, ಆಘಾತ ಉಂಟಾಗಿದೆ. ಒಬಾಮಾ ತಂಡದ ಪ್ರಮುಖ ವ್ಯಕ್ತಿಯಾಗಿದ್ದ ಹಗೇಲ್ ಅವರ ರಾಜೀನಾಮೆ ಬಗ್ಗೆ ಕಳೆದ ಕೆಲದಿನಗಳಿಂದ ಸುದ್ದಿ ಹರಡಿತ್ತು.

ಒಬಾಮಾ ಅವರು ತಮ್ಮ ಅಧಿಕಾರ ಅವಧಿಯ ಕೊನೆ ಎರಡು ವರ್ಷಗಳಲ್ಲಿ ಹೊಸ ತಂಡವನ್ನು ನೇಮಿಸಿಕೊಳ್ಳಲು ಬಯಸಿದ್ದರು. ಒಬಾಮಾ ಅವರ ಇಂಗಿತವನ್ನು ಅರಿತುಕೊಂಡ ಹಗೇಲ್ ಅವರು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇರಾಕಿ ಬಂಡುಕೋರರ ಸಂಘಟನೆ ಐಎಸ್ಐಎಸ್ ವಿರುದ್ಧ ಹೋರಾಟಕ್ಕೆ ಪೆಂಟಗನ್ ಸಜ್ಜಾಗುತ್ತಿದ್ದಂತೆ ಈ ಬೆಳವಣಿಗೆ ನಡೆದಿರುವುದು ಹಲವರ ಹುಬ್ಬೇರಿಸಿದೆ.

Chuck Hagel quits as US defense secretary

ಸ್ವತಃ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಚುಟುಕು ಸುದ್ದಿಗೋಷ್ಥಿ ನಡೆಸಿ ಹಗೆಲ್ ಅವರ ರಾಜೀನಾಮೆ ಬಗ್ಗೆ ತಿಳಿಸಿ ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

ಹೇಗಲ್ ಭಾರತದ ರಕ್ಷಣಾ ಸಚಿವ ಮನೋಹರ್ ಪಾರಿಕ್ಕಾರ್ ಅವರನ್ನು ಮುಂದಿನ ವಾರ ಭೇಟಿಯಾಗುವ ಕಾರ್ಯಕ್ರಮವಿತ್ತು. ಮೋದಿ ಸರ್ಕಾರ 100 ದಿನ ಪೂರ್ತಿಗೊಳಿಸಿದ ವೇಳೆ ಭಾರತಕ್ಕೆ ಭೇಟಿ ನೀಡಿದ್ದ ಮೂವರು ಪ್ರಮುಖರಲ್ಲಿ ಹೇಗಲ್ ಒಬ್ಬರಾಗಿದ್ದರು. ಬರಾಕ್ ಒಬಾಮಾ ಅವರು ಭಾರತ ಪ್ರವಾಸ ಕೈಗೊಳ್ಳುವ ಮುನ್ನ ಸುರಕ್ಷಿತೆ ಬಗ್ಗೆ ಪರಿಶೀಲನೆ ನಡೆಸಲು ಹೇಗಲ್ ಅವರು ಭಾರತಕ್ಕೆ ಬರಬೇಕಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+