ವಿಮಾನ ಸಿಬ್ಬಂದಿಗೆ ಡೈಪರ್ ಬಳಸುವಂತೆ ಸೂಚನೆ ನೀಡಿದ ಚೀನಾ
ವಿಮಾನ ಸಿಬ್ಬಂದಿಗಳಿಗೆ ಡೈಪರ್ ಬಳಸುವಂತೆ ಚೀನಾ ಸೂಚನೆ ನೀಡಿದೆ.ಇದೇನಪ್ಪ ಚೀನಾ ಹೀಗೆ ಏಕೆ ಹೇಳಿದೆ ಎಂದು ಆಲೋಚಿಸುತ್ತಿದ್ದೀರಾ ಈ ಸುದ್ದಿ ಓದಿ. ಅಪಾಯಕಾರಿ ಪ್ರದೇಶಗಳಿಗೆ ತೆರಳುತ್ತಿದ್ದರೆ ಅಥವಾ ಅಪಾಯಕಾರಿ ಸಂದರ್ಭದಲ್ಲಿ ವಿಮಾನಯಾನ ಸಿಬ್ಬಂದಿಗೆ ಡೈಪರ್‌ಗಳನ್ನು ಬಳಸುವಂತೆ ಸೂಚನೆ ನೀಡಿದೆ.
ಕೊವಿಡ್ ಅಪಾಯ ಹೆಚ್ಚಿರುವುದರಿಂದ ಒಬ್ಬರು ಬಳಸಿರುವ ಬಾತ್‌ರೂಂಗಳನ್ನು ಹೆಚ್ಚು ಬಳಕೆ ಮಾಡಬೇಡಿ, ಅದರಿಂದಾಗಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ.
ಒಟ್ಟು 38 ಪುಟದ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಅದರೊಳಗೆ ಹಲವು ಹಳೆಯ ಮಾರ್ಗಸೂಚಿಗಳನ್ನೇ ಮುಂದುವರೆಸುವಂತೆ ಹೇಳಲಾಗಿದೆ. ಜತೆಗೆ ಹೊಸ ಸೂಚನೆಗಳನ್ನು ನೀಡಲಾಗಿದೆ.
10 ಲಕ್ಷ ಮಂದಿಯಲ್ಲಿ ಕನಿಷ್ಠ 500 ಮಂದಿಗೆ ಕೊರೊನಾ ಸೋಂಕು ಇದ್ದರೂ ಅಂತಹ ಪ್ರದೇಶಗಳಿಗೆ ತೆರಳುವಾಗ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿದೆ.
*ಮೆಡಿಕಲ್ ಪ್ರೊಟೆಕ್ಟೀವ್ ಮಾಸ್ಕ್
*ಎರಡು ಪದರ ಹೊಂದಿರುವ ಗ್ಲೌಸ್
*ಕ್ಯಾಪ್‌ಗಳು
*ಬಿಸಾಡಬಹುದಾದ ಶೂ ಕವರ್
ವಿಮಾನ ಸಿಬ್ಬಂದಿಗಳು ಮಾಸ್ಕ್ ಹಾಗೂ ಕನ್ನಡಕ ಧರಿಸಬೇಕು ಆದರೆ ಡೈಪರ್ ಅಗತ್ಯವಿಲ್ಲ. ವಿಮಾನದಲ್ಲಿ ಕ್ಯಾಬಿನ್ ಅನ್ನು ಕ್ಲೀನ್ ಏರಿಯಾ, ಬಫರ್ ಜೋನ್, ಪ್ತಯಾಣಿಕರು ಕುಳಿತುಕೊಳ್ಳುವ ಪ್ರದೇಶ ಮತ್ತು ಸಂಪರ್ಕತಡೆ ಪ್ರದೇಶ ಎಂದು ವಿಂಗಡಿಸಬೇಕು.

ವುಹಾನ್‌ನಲ್ಲಿ ಏಕಾಏಕಿ ಕೊರೊನಾ ಸೋಂಕು ಆರಂಭವಾದ ಬಳಿಕ ಚೀನಾದ ವಾಯುಯಾನ ಮಾತುಕಟ್ಟೆಗೆ ತೀವ್ರ ಹೊಡೆತ ಬಿದ್ದಿದೆ. ನಂತರದ ದಿನಗಳಲ್ಲಿ ದೇಶಾದ್ಯಂತ ಸೋಂಕು ಹರಡಿತ್ತು.ಇದೀಗ ಚೀನಾದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದ್ದರೂ ಕೂಡ ಇತರೆ ದೇಶಗಳಲ್ಲಿ ಸೋಂಕಿನ ನಿಯಂತ್ರಣಕ್ಕೆ ಹೆಣಗಾಡುವ ಪರಿಸ್ಥಿತಿ ಎದುರಾಗಿದೆ.












Click it and Unblock the Notifications