ಕೋವಿಡ್‌ ಪ್ರಕರಣ ಪತ್ತೆ: ಹಲವು ಯುಎಸ್‌ ವಿಮಾನ ಸ್ಥಗಿತ

ಬೀಜಿಂಗ್‌, ಜನವರಿ 11: ಚೀನಾಕ್ಕೆ ಆಗಮಿಸಿದ ನಂತರ ಹಲವಾರು ಪ್ರಯಾಣಿಕರಲ್ಲಿ ಕೊರೊನಾ ವೈರಸ್‌ ಪಾಸಿಟಿವ್‌ ಆದ ಬಳಿಕ ಇತ್ತೀಚಿನ ವಾರಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ನಿಂದ ಎರಡು ಡಜನ್‌ಗೂ ಹೆಚ್ಚು ನಿಗದಿತ ವಿಮಾನಗಳನ್ನು ರದ್ದುಗೊಳಿಸಲು ಚೀನಾ ಆದೇಶ ನೀಡಿದೆ.

ಚೀನಾದ ವಿಮಾನಯಾನ regDelta ಏರ್ ಲೈನ್ಸ್ ಮತ್ತು American Airlines.ulator ತನ್ನ ಕೋವಿಡ್‌ ನಿಯಮದ ಅಡಿಯಲ್ಲಿ ಶಾಂಘೈಗೆ ಎಂಟು ಒಟ್ಟು ನಿಗದಿತ ಯುಎಸ್‌ ಪ್ರಯಾಣಿಕ ವಿಮಾನವನ್ನು ರದ್ದು ಮಾಡುವುದು ಕಡ್ಡಾಯಗೊಳಿಸಿದೆ.

ಕಳೆದ ಶುಕ್ರವಾರ ಮತ್ತು ಜನವರಿ 14 ರಂದು ಡೆಟ್ರಾಯಿಟ್‌ನಿಂದ ಶಾಂಘೈ ವಿಮಾನಗಳನ್ನು ರದ್ದುಗೊಳಿಸಿದೆ. ಚೀನಾದ ನಿಯಮದ ಕಾರಣದಿಂದಾಗಿ ತೊಂದರೆ ಉಂಟಾಗಿದೆ. ಈ ನಡುವೆ ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್‌ ಕಂಡು ಬಂದಿದೆ. ಸಿವಿಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಆಫ್ ಚೀನಾ (ಸಿಎಎಸಿ) ಡಿಸೆಂಬರ್‌ನಿಂದ ಚೀನಾದಿಂದ ಕನಿಷ್ಠ 22 ಯುಎಸ್‌ಗೆ ಹೋಗುವ ಇತರ ವಿಮಾನಗಳನ್ನು ಕೋವಿಡ್‌ ಪಾಸಿಟಿವ್‌ ದೃಢಪಟ್ಟ ಬಳಿಕ ರದ್ದು ಮಾಡಲಾಗಿದೆ. ಇದರಲ್ಲಿ ಚೀನಾ ಸದರ್ನ್ ಏರ್‌ಲೈನ್ಸ್ ಕೋ ದ ಎಂಟು ವಿಮಾನಗಳು ಕೂಡಾ ಸೇರಿದೆ.

China suspends some US flights after Covid cases

ಯುನೈಟೆಡ್ ಸ್ಟೇಟ್ಸ್ ಹೆಚ್ಚು ಸಾಂಕ್ರಾಮಿಕವಾಗಿ ಓಮಿಕ್ರಾನ್‌ ಸೋಕನ್ನು ಎದುರಿಸುತ್ತಿದೆ. ಸೋಮವಾರ 132,646 ಜನರು ಕೋವಿಡ್‌ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜನವರಿ 2021 ರಲ್ಲಿ ಸುಮಾರು 132,051 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ದಾಖಲೆಯನ್ನು ಸೋಮವಾರ ಮೀರಲಾಗಿದೆ. ಕಳೆದ 10 ದಿನಗಳಲ್ಲಿ ಏಳು ದಿನಗಳ ಸರಾಸರಿ ಹೊಸ ಪ್ರಕರಣಗಳಲ್ಲಿ ದ್ವಿಗುಣಗೊಂಡಿದೆ.

ಜನವರಿ 15, 19, 22 ಮತ್ತು 26 ರಂದು ವಿಮಾನ ರದ್ದು

ಜನವರಿ 15, 19, 22 ಮತ್ತು 26 ರಂದು ಸ್ಯಾನ್ ಫ್ರಾನ್ಸಿಸ್ಕೋದಿಂದ ಶಾಂಘೈಗೆ ವಿಮಾನಗಳನ್ನು ರದ್ದುಗೊಳಿಸಲು ಒತ್ತಾಯಿಸಲಾಗಿದೆ ಎಂದು ಯುನೈಟೆಡ್ ಹೇಳಿದೆ. ಚಿಕಾಗೋ ಮೂಲದ ಕ್ಯಾರಿಯರ್ ಸ್ಯಾನ್ ಫ್ರಾನ್ಸಿಸ್ಕೋದಿಂದ ಶಾಂಘೈಗೆ ವಾರಕ್ಕೆ ನಾಲ್ಕು ಬಾರಿ ವಿಮಾನ ಸಂಚಾರವಿದೆ. ಆಗಸ್ಟ್‌ನಲ್ಲಿ, ಬೀಜಿಂಗ್ ನಾಲ್ಕು ಯುನೈಟೆಡ್ ಏರ್‌ಲೈನ್ಸ್ ವಿಮಾನಗಳಿಗೆ ಒಂದೇ ರೀತಿಯ ಮಿತಿಗಳನ್ನು ವಿಧಿಸಿದ ನಂತರ ಚೀನಿ ನಾಲ್ಕು ವಿಮಾನಗಳನ್ನು ನಾಲ್ಕು ವಾರಗಳವರೆಗೆ 40 ಪ್ರತಿಶತ ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಹಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಜುಲೈ 21 ರಂದು ಸ್ಯಾನ್ ಫ್ರಾನ್ಸಿಸ್ಕೋದಿಂದ ಶಾಂಘೈಗೆ ಪ್ರಯಾಣಿಸಿದ ಐದು ಪ್ರಯಾಣಿಕರಲ್ಲಿ ಕೊರೊನಾ ಕಾಣಿಸಿಕೊಂಡ ಬಳಿಕ ಚೀನಾ ಕೆಲವು ವಿಮಾನಗಳ ಮೇಲೆ ನಿರ್ಬಂಧಗಳನ್ನು ವಿಧಿಸುತ್ತಿರುವುದಾಗಿ ಆಗಸ್ಟ್‌ನಲ್ಲಿ ಯುನೈಟೆಡ್‌ಗೆ ತಿಳಿಸಿತು.

ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ಗೆ ಕೆಲವೇ ವಾರಗಳ ಮುಂಚೆಯೇ ಚೀನಾದ ಪ್ರಮುಖ ನಗರಗಳಲ್ಲಿ ಕೊವಿಡ್‌ ಪ್ರಕರಣಗಳು ಹೆಚ್ಚಾಗುತ್ತಿದೆ. ವಿಶ್ವದಲ್ಲೇ ಮೊದಲು ಕೊರೊನಾವೈರಸ್‌ ಕಾಣಿಸಿಕೊಂಡ ಚೀನಾದ ಪ್ರಮುಖ ನಗರದಲ್ಲಿ ಕೊರೊನಾ ವೈರಸ್‌ ರೂಪಾಂತರ ಓಮಿಕ್ರಾನ್‌ ಪ್ರಕರಣಗಳು ಅಧಿಕವಾಗಿ ಪತ್ತೆಯಾಗುತ್ತಿರುವ ಹಿನ್ನೆಲೆ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ. ಚೀನಾವು ಜಿರೋ ಕೋವಿಡ್‌ ಪ್ರಕರಣ ದಾಖಲು ಮಾಡುವತ್ತ ಚಿತ್ತ ನೆಟ್ಟಿದೆ. ಆದರೆ ಈ ನಡುವೆ ವೇಗವಾಗಿ ಹರಡುತ್ತಿರುವ ಕೋವಿಡ್‌ ರೂಪಾಂತರವು ಚೀನಾದ ಶೂನ್ಯ ಕೋವಿಡ್‌ ಕಾರ್ಯತಂತ್ರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಈಗಾಗಲೇ ಹಲವಾರು ಪ್ರದೇಶಗಳಲ್ಲಿ ಕೋವಿಡ್‌ ಹೆಚ್ಚಳವಾದ ಹಿನ್ನೆಲೆ ಆ ನಗರಗಳಲ್ಲಿ ನಿರ್ಬಂಧವನ್ನು ಬಿಗಿ ಮಾಡಿದ್ದಾರೆ. ಕ್ಸಿಯಾನ್ ಸೇರಿದಂತೆ 13 ಮಿಲಿಯನ್ ನಗರ ನಿವಾಸಿಗಳು ಇರುವ ನಗರಗಳು ಮೂರನೇ ಲಾಕ್‌ಡೌನ್‌ನಲ್ಲಿ ಇದೆ.

ಉತ್ತರದ ನಗರವಾದ ಟಿಯಾಂಜಿನ್‌ನಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ ಟಿಯಾಂಜಿನ್‌ನಿಂದ ಸುಮಾರು 400 ಕಿಲೋಮೀಟರ್ (250 ಮೈಲುಗಳು) ದೂರದಲ್ಲಿರುವ ಅನ್ಯಾಂಗ್ ನಗರದಲ್ಲಿ ಸೋಮವಾರ ಎರಡು ಓಮಿಕ್ರಾನ್‌ ಪ್ರರಕಣಗಳು ದಾಖಲು ಆಗಿದೆ. ಈ ಹಿನ್ನೆಲೆಯಿಂದಾಗಿ, "ಜನರು ಯಾವುದೇ ತೀರಾ ಅಗತ್ಯವಿಲ್ಲದೆ ಟಿಯಾಂಜಿನ್‌ನಿಂದ ಹೊರಹೋಗಬಾರದು," ಎಂದು ನಗರ ಅಧಿಕಾರಿಗಳು ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

      Dravid ಹಾಗು Virat ಇಬ್ಬರಿಗೂ ಈಗ Pantರದ್ದೇ ಚಿಂತೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+