ಒಂದು ಲಕ್ಷ ಲೀ.ಹಾಲು ಕೊಡುವ 'ಸೂಪರ್ ಹಸು'ಗಳನ್ನು ಸೃಷ್ಟಿಸಿದ ಚೀನಾ..!
ಚೀನಾ ದೇಶದ ವಿಜ್ಞಾನಿಗಳು ಅತ್ಯಧಿಕ ಪ್ರಮಾಣದಲ್ಲಿ ಹಾಲು ನೀಡಬಹುದಾದ ಹಸುಗಳನ್ನು ಸೃಷ್ಟಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಈ ಸೂಪರ್ ಹಸುಗಳು ಯಾವವು ಎಂದು ತಿಳಿಯಲು ಮುಂದೆ ಓದಿ.
ಹಾಂಕಾಂಗ್, ಫೆಬ್ರವರಿ 06: ಚೀನಾ ದೇಶದ ವಿಜ್ಞಾನಿಗಳು ಅತ್ಯಧಿಕ ಪ್ರಮಾಣದಲ್ಲಿ ಹಾಲು ನೀಡಬಹುದಾದ ಹಸುಗಳನ್ನು ಸೃಷ್ಟಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು, ಈ ಚೀನಾ ದೇಶದ ನಿಂಗ್‌ಕ್ಸಿಯಾ ಹುಯಿ ಸ್ವಾಯತ್ತ ಪ್ರದೇಶದ ವಿಜ್ಞಾನಿಗಳು ಅಸಾಧಾರಣ ಪ್ರಮಾಣದಲ್ಲಿ ಹಾಲು ನೀಡುವ ಮೂರು ಸೂಪರ್ ಹಸುಗಳನ್ನು ಸೃಷ್ಟಿಸಿದ್ದಾರೆ. ಇವುಗಳು ಹತ್ತಾರು ಸಾವಿರ ಹಾಲು ಒದಗಿಸುವ ಸಾಮರ್ಥ್ಯ ಹೊಂದಿವೆ ಎಂದು ಸ್ವತಃ ಸೃಷ್ಟಿಕರ್ತ ವಿಜ್ಞಾನಿಗಳೇ ತಿಳಿಸಿದ್ದಾರೆ.
ಹಸುಗಳ ಸೃಷ್ಟಿಯಿಂದಾಗಿ ಚೀನಾ ದೇಶವು ಡೇರಿ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಲು ಮುಂದಾಗಿದೆ. ಆ ಮೂಲಕ ಹಾಲಿಗಾಗಿ ವಿದೇಶಿ ತಳಿಗಳ ಮೇಲಿನ ಅವಲಂಬನೆಗೆ ಅಂತ್ಯ ಹಾಡಿ ಸ್ವಾವಲಂಬಿಗಳಾಗಲಿದ್ದಾರೆ. ಹಾಲಿ ಬೇಡಿಕೆ ಸಹ ತಗ್ಗಿಸಲಿದ್ದಾರೆ ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಕೃಷಿ ಮತ್ತು ಅರಣ್ಯ ವಿಜ್ಞಾನ ಹಾಗೂ ತಂತ್ರಜ್ಞಾನದ ನಾರ್ತ್ ವೆಸ್ಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಾಸಿಕವಾಗಿ ಸಾವಿರಾರು ಲೀಟರ್ ಹಾಲು ನೀಡಬಲ್ಲ ಅಸಾಮಾನ್ಯ ಹಸುಗಳನ್ನು ನಿರ್ಮಿಸಿದ್ದಾರೆ. ಸಮ್ಯಾಟಿಕ್ ಸೇಲ್ ನ್ಯೂಕ್ಲಿಯರ್ ವರ್ಗಾವಣೆ ತಂತ್ರಜ್ಞಾನ ಬಳಸಿಕೊಂಡು ಮೂರು ತದ್ರೂಪಿ ಕರುಗಳನ್ನು ನಿಂಗ್‌ಕ್ಸಿಯಾ ಪ್ರದೇಶದಲ್ಲಿ ಸೃಷ್ಟಿಸಿದ್ದಾರೆ. ಇವುಗಳ ಮುಂದೆ ಬೆಳೆದ ಬಳಿಕ ತಮ್ಮ ಇಡಿ ಜೀವಿತಾವಧಿಯಲ್ಲೇ ಒಂದು ಲಕ್ಷ ಲೀಟರ್ ಹಾಲು ನೀಡಬಲ್ಲ ಸಾಮರ್ಥ್ಯ ಹೊಂದಿವೆ ಎನ್ನಲಾಗಿದೆ.
ಹಸುಗಳ ಸೃಷ್ಟಿ ಹೇಗೆ
ಮೊದಲು ಅಬೀಜ ತಂತ್ರಜ್ಞಾನ ಬಳಸಿ ಈ ಮೂರು ತದ್ರೂಪಿ ಹಸುಗಳ ಸಂತಾನೋತ್ಪತ್ತಿ ಮಾಡಲಾಗಿದೆ. ನೆದರ್‌ಲ್ಯಾಂಡ್ ಮೂಲದ ಹಾಲ್‌ಸ್ಟೀನ್ ಫ್ರೀಸಿಯನ್ ತಳಿಯ ಅಧಿಕ ಹಾಲು ಉತ್ಪಾದನಾ ಸಾಮರ್ಥ್ಯದ ಹಸುಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಆ ಹಸುಗಳಿಂದ ಅಬೀಜ ಸಂತಾನ ಸೃಷ್ಟಿ ಮಾಡಲಾಗಿದೆ. ಈ ಹಸುಗಳು ತಮ್ಮ ಜೀವಿತಾವಧಿಯಲ್ಲಿ 1 ಲಕ್ಷ ಲೀಟರ್ ಹಾಲು ಒದಗಿಸುತ್ತವೆ. ಈ ಸೂಪರ್ ಹಸುಗಳು ಚೀನಾದಲ್ಲಿ ಡೇರಿ ಕ್ಷೇತ್ರದಲ್ಲಿ/ಹಾಲು ಉತ್ಪಾದನೆಯಲ್ಲಿ ಕ್ರಾಂತಿ ಮಾಡಲಿವೆ. ಇವುಗಳು ವರ್ಷಕ್ಕೆ 18,000 ಲೀಟರ್ ಹಾಲು ನೀಡುತ್ತವೆ ಎಂದು ವರದಿ ಮಾಡಲಾಗಿದೆ.

ಇನ್ನು ಬ್ರಿಟನ್‌ನ ದೇಶದ ಸಾಮಾನ್ಯ ಹಸುಗೆ ವಾರ್ಷಿಕವಾಗಿ ಅಂದಾಜು 8,206 ಲೀಟರ್ ಹಾಲು ಕೊಡುವ ಸಾಮರ್ಥ್ಯ ಇದೆ. ಬೇರೆ ದೇಶಗಳ ವಿವಿಧ ತಳಿಗಳ ಹಸುಗಳಿಗೆ ಹೋಲಿಕೆ ಮಾಡಿದರೆ ಸೃಷ್ಟಿಸಲಾದ ಈ ಮೂರು ಅಸಾಮಾನ್ಯ ಹಸುಗಳು ದುಪ್ಪಟ್ಟು ಪ್ರಮಾಣದಲ್ಲಿ ಹಾಲು ನೀಡಲಿವೆ.
ಒಟ್ಟು ಸುಮಾರು 10 ಸಾವಿರ ಸಾಮಾನ್ಯ ಜಾನುವಾರು ತಳಿಗಳಲ್ಲಿ ಐದು ತಳಿಗಳಲ್ಲಿಮಾತ್ರ ಈ ಹಸುಗಳ ಪ್ರಮಾಣದಷ್ಟು ಭಾರಿ ಪ್ರಮಾಣದಲ್ಲಿ ಹಾಲು ನೀಡಬಲ್ಲವಾಗಿವೆ. ಹಸುಗಳ ಕಿವಿಯ ಅಂಗಾಂಶ ಸಂಗ್ರಹಿಸಿ, ಬ್ಯಾಚ್‌ನಲ್ಲಿ 120 ಅಬೀಜ ಭ್ರೂಣ ಇಡಲಾಗಿತ್ತು. ಅವುಗಳಲ್ಲಿ ಶೇಕಡಾ 42 ರಷ್ಟು ಹಸುಗಳಿಗೆ ಯಶಸ್ವಿ ಗರ್ಭಧಾರಣೆ ಆಯಿತು. ಶೇಕಡಾ 17.5ರಷ್ಟು ಹಸುಗಳಲ್ಲಿ ಸುಮಾರು ಆರು ತಿಂಗಳ ಬಳಿಕ ಗರ್ಭ ಉಳಿಸಿಕೊಂಡಿದ್ದವು. ಭವಿಷ್ಯದಲ್ಲಿ ಈ ಮೂರರಂತೆ ಒಟ್ಟು 1,000ಕ್ಕೂ ಅಧಿಕ ಸೂಪರ್ ಹಸುಗಳನ್ನು ಸೃಷ್ಟಿಸಲು ಚೀನಾ ವಿಜ್ಞಾನಿಗಳು ಯೋಜಿಸಿದ್ದಾರೆ.












Click it and Unblock the Notifications