ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಕಾಂಗ್ರೆಸ್‌ನ ಸಮಾವೇಶಕ್ಕೂ ಮುನ್ನ ನಡೆದ ಸಭೆಯ ಸೀಕ್ರೆಟ್ ಏನು!?

|
Google Oneindia Kannada News

ಬೀಜಿಂಗ್, ಅಕ್ಟೋಬರ್ 10: ಚೀನಾದ ಅಧ್ಯಕ್ಷ ಸ್ಥಾನಕ್ಕೆ ಕ್ಸಿ ಜಿನ್‌ಪಿಂಗ್ ಮೂರನೇ ಬಾರಿ ಆಯ್ಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಚೀನೀ ಕಮ್ಯುನಿಸ್ಟ್ ಪಕ್ಷ(CCP)ದ 20ನೇ ರಾಜಕೀಯ ಸಭೆ (ಕಾಂಗ್ರೆಸ್) ನಡೆಯಲಿದೆ. ಈ ಸಭೆಗೂ ಮುನ್ನ ನಡೆದ ಪೂರ್ವಭಾವಿ ಸಭೆಯ ಮೇಲೆ ಇದೀಗ ಜಗತ್ತಿನ ದೃಷ್ಟಿ ನೆಟ್ಟಿದೆ.

ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಕಾಂಗ್ರೆಸ್ ಸಭೆಯು ಮೂರನೇ ಅವಧಿಗೆ ಕ್ಸಿ ಜಿನ್‌ಪಿಂಗ್ ಆಯ್ಕೆ ಕುರಿತು ಅಜೆಂಡಾ ಸೆಟ್ ಮಾಡಲಾಗಿದೆ. ಕಳೆದ 19ನೇ ಕೇಂದ್ರ ಸಮಿತಿಯ 300ಕ್ಕೂ ಹೆಚ್ಚು ಸದಸ್ಯರಲ್ಲಿ ಹಲವರು ಅಕ್ಟೋಬರ್ 16ರಂದು ಪ್ರಾರಂಭವಾಗುವ 20ನೇ ಪಕ್ಷದ ಕಾಂಗ್ರೆಸ್‌ನ ಸಭೆಯಲ್ಲಿ ನಿವೃತ್ತರಾಗುತ್ತಾರೆ.

ಚೀನಾದ ಅಧ್ಯಕ್ಷಗಿರಿ ಕುರ್ಚಿ ಗಟ್ಟಿಯಾಗಿಸಿಕೊಳ್ಳಲು ಕ್ಸಿ ಜಿನ್‌ಪಿಂಗ್ ಸೀಕ್ರೆಟ್ ಆಪರೇಷನ್!ಚೀನಾದ ಅಧ್ಯಕ್ಷಗಿರಿ ಕುರ್ಚಿ ಗಟ್ಟಿಯಾಗಿಸಿಕೊಳ್ಳಲು ಕ್ಸಿ ಜಿನ್‌ಪಿಂಗ್ ಸೀಕ್ರೆಟ್ ಆಪರೇಷನ್!

ಆಡಳಿತಾರೂಢ ಚೀನೀ ಕಮ್ಯುನಿಸ್ಟ್ ಪಕ್ಷ ಸಂವಿಧಾನದ ನೀತಿಗಳು ಮತ್ತು ಕರಡು ತಿದ್ದುಪಡಿಗಳನ್ನು ಅನುಮೋದಿಸಲು ಏಳನೇ ಪ್ಲೀನಮ್ ಎಂಬ ವಾರ್ಷಿಕ ಸರ್ವಸದಸ್ಯರ ಅಧಿವೇಶನ ಕರೆಯಲಾಗಿದೆ. ಅದು ಈ ವಾರದ ಕಾಂಗ್ರೆಸ್‌ನಲ್ಲಿ ಔಪಚಾರಿಕವಾಗಿ ಅನಾವರಣಗೊಳ್ಳಲಿದೆ. ಕಾಂಗ್ರೆಸ್ ಸಭೆಯಲ್ಲಿ ತೆಗೆದುಕೊಳ್ಳುವ ಪ್ರಮುಖ ನಿರ್ಣಯಗಳು ಮತ್ತು ನಿರ್ಧಾರಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕ್ಸಿ ಜಿನ್‌ಪಿಂಗ್ ಪುನರ್ ಆಯ್ಕೆಯೇ ಕಾಂಗ್ರೆಸ್ ಸಭೆ ಉದ್ದೇಶ

ಕ್ಸಿ ಜಿನ್‌ಪಿಂಗ್ ಪುನರ್ ಆಯ್ಕೆಯೇ ಕಾಂಗ್ರೆಸ್ ಸಭೆ ಉದ್ದೇಶ

ಚೀನಾದಲ್ಲಿ ಮುಂಬರುವ ಅಕ್ಟೋಬರ್ 16ರಂದು ಶುರುವಾಗಲಿರುವ ಕಾಂಗ್ರೆಸ್ ಪಕ್ಷದ ಸಭೆಯ ಮುಖ್ಯ ಉದ್ದೇಶವೇ ಕ್ಸಿ ಜಿನ್‌ಪಿಂಗ್ ಪುನರ್ ಆಯ್ಕೆ ಆಗಿದೆ. ಮುಂದಿನ ಐದು ವರ್ಷಗಳ ಅವಧಿಗೆ ಪುನರ್ ಆಯ್ಕೆ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ. ಇದರ ಜೊತೆಗೆ ಚೀನಾದ ಸಂವಿಧಾನದಲ್ಲಿನ ಕೆಲವು ಅಂಶಗಳ ತಿದ್ದುಪಡಿ, ರಾಜಕೀಯ ಸಮಿತಿ(ಪೊಲ್ಯೂಟ್ ಬ್ಯೂರೋ) ರಚನೆ ಹಾಗೂ ಕೇಂದ್ರೀಯ ಸಮಿತಿ ರಚನೆ ಕುರಿತು ನಿರ್ಧರಿಸಲಾಗುತ್ತದೆ.

ಭಾನುವಾರದ ಪ್ಲೀನಮ್‌ನಲ್ಲಿ ನಡೆದ ಕಾಂಗ್ರೆಸ್‌ನಲ್ಲಿ ಪ್ರಸ್ತುತಪಡಿಸುವ ಕರಡು ವರದಿ ಬಗ್ಗೆ ಕ್ಸಿ ಜಿನ್‌ಪಿಂಗ್ "ವಿವರಣಾತ್ಮಕ ಟೀಕೆ" ಅನ್ನು ಉಲ್ಲೇಖಿಸಿದರು. ಆದರೆ ಪಾಲಿಟ್‌ಬ್ಯುರೊ ಸ್ಥಾಯಿ ಸಮಿತಿ ಸದಸ್ಯ ವಾಂಗ್ ಹುನಿಂಗ್, ಸಾಂವಿಧಾನಿಕ ಕರಡು ತಿದ್ದುಪಡಿಗಳನ್ನು ವಿವರಿಸಿದರು.

2017ರ ಕಾಂಗ್ರೆಸ್ಸಿನಲ್ಲೂ ಅಗತ್ಯ ತಿದ್ದುಪಡಿ

2017ರ ಕಾಂಗ್ರೆಸ್ಸಿನಲ್ಲೂ ಅಗತ್ಯ ತಿದ್ದುಪಡಿ

ಕಳೆದ 2017ರಲ್ಲಿ ನಡೆದ ಹಿಂದಿನ ಕಾಂಗ್ರೆಸ್‌ನಲ್ಲಿ ಕ್ಸಿ ಜಿನ್‌ಪಿಂಗ್ ಸಿದ್ಧಾಂತವನ್ನು ಸೇರಿಸುವ ಅಂಶಗಳಿಗೋಸ್ಕರ ಸಂವಿಧಾನವನ್ನು ತಿದ್ದುಪಡಿ ಮಾಡಲಾಯಿತು. ಇದನ್ನು ಅಧಿಕೃತವಾಗಿ "ಹೊಸ ಯುಗಕ್ಕಾಗಿ ಚೀನೀ ಗುಣಲಕ್ಷಣಗಳೊಂದಿಗೆ ಸಮಾಜವಾದದ ಕುರಿತು ಕ್ಸಿ ಜಿನ್‌ಪಿಂಗ್ ಚಿಂತನೆ" ಎಂದು ಕರೆಯಲಾಯಿತು. ಅವರನ್ನು ಮಾವೋ ಝೆಡಾಂಗ್ ಮತ್ತು ಡೆಂಗ್ ಕ್ಸಿಯಾಪಿಂಗ್‌ಗೆ ಸಮಾನವಾಗಿ ಉನ್ನತೀಕರಿಸಲಾಯಿತು. ಸಂವಿಧಾನದಲ್ಲಿ ನಾಮಸೂಚಕ ಸಿದ್ಧಾಂತಗಳೊಂದಿಗೆ ಮಾವೋ ಮತ್ತು ಕ್ಸಿ ಅವರಿಗೆ ಮಾತ್ರ ಅಧಿಕಾರದಲ್ಲಿದ್ದಾಗ ಆ ಗೌರವಗಳನ್ನು ನೀಡಲಾಯಿತು.

ಕಮ್ಯೂನಿಸ್ಟ್ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ

ಕಮ್ಯೂನಿಸ್ಟ್ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ

ನವೆಂಬರ್ 2021ರಲ್ಲಿ ಕೇಂದ್ರ ಸಮಿತಿಯು ಹೊಸ ಯುಗಕ್ಕಾಗಿ ಚೀನೀ ಗುಣಲಕ್ಷಣಗಳೊಂದಿಗೆ ಕ್ಸಿ ಜಿನ್‌ಪಿಂಗ್ ಚಿಂತನೆಯನ್ನು ಅಂಗೀಕರಿಸಿತು. ಇದು "ನಮ್ಮ ಕಾಲದಲ್ಲಿ ಅತ್ಯುತ್ತಮವಾದ ಚೀನೀ ಸಂಸ್ಕೃತಿ ಮತ್ತು ನೀತಿಯನ್ನು ಸಾಕಾರಗೊಳಿಸುತ್ತದೆ ಮತ್ತು ಚೀನೀ ಸಂದರ್ಭಕ್ಕೆ ಮಾರ್ಕ್ಸ್‌ವಾದವನ್ನು ಅಳವಡಿಸಿಕೊಳ್ಳುವಲ್ಲಿ ಹೊಸ ಪ್ರಗತಿಯನ್ನು ಪ್ರತಿನಿಧಿಸುತ್ತದೆ" ಎಂದು ಪ್ರತಿಪಾದಿಸಿತು. ಮುಂದಿನ ತಿಂಗಳು ಪಕ್ಷದ ಸಂವಿಧಾನಕ್ಕೆ ಈ ಕುರಿತು ತಿದ್ದುಪಡಿ ತರುವುದು ಖಚಿತವಾಗಿದೆ.

ಈ ನಿರೀಕ್ಷಿತ ತಿದ್ದುಪಡಿಗಳು "ಕಾಮ್ರೇಡ್ ಕ್ಸಿ ಜಿನ್‌ಪಿಂಗ್ ಸ್ಥಾನವನ್ನು ಭದ್ರಪಡಿಸುತ್ತವೆ. "ಹೊಸ ಯುಗಕ್ಕಾಗಿ ಚೀನೀ ಸಮಾಜವಾದವು ಕ್ಸಿ ಜಿನ್ ಪಿಂಗ್ ಅತಿಕ್ರಮಣ ಸ್ಥಿತಿಯನ್ನು ಪಾಲಿಸುವ ಲೆಕ್ಕಾಚಾರವನ್ನು ಹಾಕಿಕೊಳ್ಳುತ್ತಿವೆ. ಇತರೆ ತಿದ್ದುಪಡಿಗಳು ಚೈನೀಸ್ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಸಿಎಂಸಿ ಅಧ್ಯಕ್ಷರ ಅವಧಿಗೆ ನಿಗದಿಪಡಿಸಿದ್ದ ಸಮಯ ಮಿತಿಯನ್ನು ತೆಗೆದು ಹಾಕಿದೆ. ಅದೇ ರೀತಿ 2018ರಲ್ಲಿ ಎರಡೂ ಹುದ್ದೆಗಳಿಗೆ ನಿಗದಿಪಡಿಸಿದ್ದ ಐದು ವರ್ಷಗಳ ಮಿತಿಯನ್ನು ರದ್ದುಗೊಳಿಸಿದ್ದು, ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಹೊಸ ಕಾಲಮಿತಿಯನ್ನು ನಿಗದಿಪಡಿಸಿಲ್ಲ.

ಚೀನಾ ಅಧ್ಯಕ್ಷ ಸ್ಥಾನಕ್ಕೆ ಕ್ಸಿ ಜಿನ್ ಪಿಂಗ್ ನಂತರ ಯಾರು?

ಚೀನಾ ಅಧ್ಯಕ್ಷ ಸ್ಥಾನಕ್ಕೆ ಕ್ಸಿ ಜಿನ್ ಪಿಂಗ್ ನಂತರ ಯಾರು?

ಚೀನಾದ ಗಣ್ಯರು ಕ್ಸಿ ವಿರುದ್ಧ ದಂಗೆ ಏಳುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಿದೆ. ಆದರೆ ವಾಸ್ತವದಲ್ಲಿ ಗಣ್ಯರು ದೇಶದಿಂದ ಪಲಾಯನ ಮಾಡುವ ಸಾಧ್ಯತೆಯಿದ್ದು, ದಂಗೆ ಏಳುವುದರ ಬದಲಿಗೆ ತಮ್ಮನ್ನು ತಾವು ಬೇರೆಡೆ ಸ್ಥಾಪಿಸಿಕೊಳ್ಳುತ್ತಾರೆ. ಅದೇ ರೀತಿ ಎಲ್ಲರ ಮೇಲೆ ಕ್ಸಿ ಜಿನ್ ಪಿಂಗ್ ಕಣ್ಗಾವಲು ಇರಿಸಿದ್ದಾರೆ. ಆಂತರಿಕ ಭದ್ರತಾ ಪಡೆಗಳೊಂದಿಗೆ ಸುತ್ತುವರಿದುಕೊಂಡಿದ್ದಾರೆ. ಆದ್ದರಿಂದ 1989ರಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನಾ ಚಳುವಳಿಗಳನ್ನು ನಡೆಸುವುದು ಕಷ್ಟವಾಗುತ್ತದೆ. ಮುಂದಿನ ಅವಧಿಯಲ್ಲಿ ಕ್ಸಿ ವಿರುದ್ಧ ಸಾರ್ವಜನಿಕ ಕುಂದುಕೊರತೆಗಳು ಬೆಳೆಯುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. 69 ವರ್ಷ ವಯಸ್ಸಿನ ಕ್ಸಿ ಕನಿಷ್ಠ ಇನ್ನೂ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯುತ್ತಾರೆ. 2022 ಅಲ್ಲದೇ 2032ರವರೆಗೂ ಅಧಿಕಾರದಲ್ಲಿ ಉಳಿಯುವ ಸಂಭವಗಳು ಹೆಚ್ಚಾಗಿವೆ. ಆದ್ದರಿಂದಲೇ ತಮ್ಮ ಉತ್ತರಾಧಿಕಾರಿ ಯಾರು ಎಂಬುದನ್ನು ಘೋಷಿಸುವುದಕ್ಕೆ ಸಾಕಷ್ಟು ಸಮಯವಿದ್ದು, ಸದ್ಯಕ್ಕೆ ತನ್ನ ನಂತರದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರು ಎಂಬುದನ್ನು ಹೇಳುವುದಕ್ಕೆ ಅವರು ಧೈರ್ಯ ಮಾಡಿಲ್ಲ.

English summary
China’s Communist Party holds key meet ahead of congress on Oct 16. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X