ಚೀನಾದಲ್ಲಿ ಮತ್ತೆ ಹೆಚ್ಚಿದ ಕೊರೊನಾ ಸೋಂಕು, ವಿಮಾನಗಳ ಹಾರಾಟ ಸ್ಥಗಿತ

ಶಾಂಘೈ, ಮೇ 31: ಚೀನಾದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಚೀಣಾದ ಗುವಾಂಗ್‌ಜೌನಲ್ಲಿ ಏಕಾಏಕಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದು, ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಗುವಾಂಗ್‌ಜೌನಲ್ಲಿ 18 ಪ್ರಕರಣಗಳು ದಾಖಲಾಗಿರುವ ಕುರಿತು ವರದಿಯಾಗಿದೆ.

ಚೀನಾದಲ್ಲಿ 27 ಪ್ರಕರಣಗಳು ವರದಿಯಾಗಿವೆ, ಇದರಲ್ಲಿ 18 ಪ್ರಕರಣಗಳು ಗುವಾಂಗ್‌ಜೌ ಮತ್ತು ಎರಡು ಪ್ರಕರಣಗಳು ಪೋಶನ್ ನಗರದಲ್ಲಿ ವರದಿಯಾಗಿದೆ. ಈ ಕುರಿತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮಾಹಿತಿ ನೀಡಿದ್ದು, ಗ್ವಾಂಗ್‌ಡಂಗ್ ಪ್ರದೇಶದಲ್ಲಿ ಈ ನಗರವಿದ್ದು ಇದು ಹಾಂಗ್‌ಕಾಂಗ್ ಸಮೀಪದಲ್ಲಿದೆ ಎಂದು ತಿಳಿದುಬಂದಿದೆ.

China Reports Surge Of New Covid-19 Cases In Guangzhou City, Triggering Flight Cancellations

ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 11.40ರಿಂದ ಈವರೆಗೆ ಗುವಾಂಗ್‌ಜೌಬೈಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 519 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಗುವಾಂಗ್‌ಜೌ ನಗರದ ನಿವಾಸಿಗಳು ಮನೆಯಿಂದ ಹೊರ ಬಾರದಂತೆ ಸ್ಥಳೀಯ ಸರ್ಕಾರ ಸೂಚನೆ ನೀಡಿದೆ, ಹಾಗೆಯೇ ಮಾರುಕಟ್ಟೆ, ಮನರಂಜನಾ ತಾಣಗಳನ್ನು ಕೂಡ ಬಂದ್ ಮಾಡಲಾಗಿದೆ.

ಸರ್ಕಾರವು ಗುವಾಂಗ್‌ಜೌ ನಗರದಲ್ಲಿ ಪ್ರಯಾಣ ನಿರ್ಬಂಧ ಹೇರಿದೆ, ವಿಮಾನ, ರೈಲು ಅಥವಾ ಖಾಸಗಿ ವಾಹನಗಳ ಮೂಲಕ ಗುವಾಂಗ್‌ಜೌ ನಗರದಿಂದ ಬೇರೆಕಡೆಗೆ ಪ್ರಯಾಣಿಸುವವರು ಕಡ್ಡಾಯವಾಗಿ 72 ಗಂಟೆಯೊಳಗಿನ ವರದಿಯನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+