ಚೀನಾದಲ್ಲಿ ಭಾನುವಾರ 38 ಹೊಸ ಕೇಸ್, 1 ಸಾವು ವರದಿ
ಚೀನಾ, ಏಪ್ರಿಲ್ 6: ಕೊರೊನಾ ವೈರಸ್ ಸೃಷ್ಟಿಗೆ ಕಾರಣವಾದ ಚೀನಾ ದೇಶದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಲಾಗುತ್ತಿದೆ. ಚೀನಾದಲ್ಲಿ ಜನರು ಮತ್ತೆ ಹಳೆಯ ದಿನಗಳಂತೆ ಜೀವಿಸುತ್ತಿದ್ದಾರೆ. ಚೀನಾದಲ್ಲೊ ಕೊವಿಡ್ ಹರಡುವಿಕೆ ಸಂಪೂರ್ಣವಾಗಿ ಕಡಿಮೆಯಾಗಿದ್ದು, ದೈನಂದಿನ ಜೀವನ ಸಹಜ ಸ್ಥಿತಿಯತ್ತ ಬಂದಿದೆಯಂತೆ.
ಹಾಗಂತ, ಚೀನಾದಲ್ಲಿ ಕೊರೊನಾ ಸಂಪೂರ್ಣವಾಗಿ ಮಾಯವಾಗಿಲ್ಲ. ಪ್ರತಿದಿನವೂ ಕೊರೊನಾ ಹೊಸ ಪ್ರಕರಣಗಳು ದಾಖಲಾಗುತ್ತಿದೆ. ಭಾನುವಾರ (ಏಪ್ರಿಲ್ 5) ಚೀನಾದಲ್ಲಿ ಒಟ್ಟು 38 ಹೊಸ ಕೊವಿಡ್ ರೋಗಿಗಳು ಪತ್ತೆಯಾಗಿದ್ದಾರೆ. ಅದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಸೋಮವಾರಕ್ಕೆ ಚೀನಾ ಅಂಕಿ ಅಂಶ ಗಮನಿಸಿದರೆ, ಸೋಂಕಿತರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಒಟ್ಟು 81,708 ಸೋಂಕಿತರನ್ನು ಹೊಂದಿದ್ದ ಚೈನೀಸ್ ದೇಶದಲ್ಲಿ 3,331 ಜನರು ಸಾವನ್ನಪ್ಪಿದ್ದರು. ಇದರಲ್ಲಿ 693 ಕೇಸ್ ಬೇರೆ ದೇಶದಿಂದ ಬಂದವರು ಎಂಬ ವರದಿ ಇದೆ.

ಶನಿವಾರ ಇಡೀ ಚೀನಾ 3 ನಿಮಿಷಗಳ ಕಾಲ ಸ್ತಬ್ದವಾಗಿತ್ತು. ಕೊರೊನಾ ವೈರಸ್ ದಾಳಿಯಿಂದ ಪ್ರಾಣ ಕಳೆದುಕೊಂಡವರಿಗಾಗಿ ಚೀನಾ ಮೂರು ನಿಮಿಷಗಳ ಕಾಲ ಪ್ರಾರ್ಥನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಚೀನಾ ಅಧ್ಯಕ್ಷ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಈ ಸಮಯದಲ್ಲಿ ಇಡೀ ಚೀನಾದ ಜನರು ಇದಕ್ಕೆ ಕೈಜೋಡಿಸಿದ್ದರು. ಕಾರು, ರೈಲು, ವಿಮಾನ ಹಾಗೂ ಮನೆಗಳಲ್ಲಿ ಮೂರು ನಿಮಿಷ ಪ್ರಾರ್ಥನೆ ಸಲ್ಲಿಸಿ ಮೃತಪಟ್ಟವರಿಗೆ ನಮಿಸಿದರು.
ಚೀನಾದಿಂದ ಆರಂಭವಾದ ವೈರಸ್ ಈಗ ಬೇರೆ ದೇಶಗಳಿಗೆ ಕಂಟಕವಾಗಿ ಪರಿಣಮಿಸಿದೆ. ಅದರಲ್ಲು ಯುಎಸ್ ದೇಶಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಅಮೆರಿಕದಲ್ಲಿ ಇದುವರೆಗೂ 336,830 ಸೋಂಕಿತರು ವರದಿಯಾಗಿದ್ದು, 9,618 ಜನರು ಸಾವನ್ನಪ್ಪಿದ್ದಾರೆ.












Click it and Unblock the Notifications