ಊಟದ ಬಾಕ್ಸ್‌ನಲ್ಲಿ ಇಲಿಯ ತಲೆ ಪತ್ತೆ: ಒಂದು ತಿಂಗಳಲ್ಲಿ ಎರಡನೇ ಘಟನೆ

ಚೀನಾದಲ್ಲಿ ಮತ್ತೊಮ್ಮೆ ಆಹಾರದಲ್ಲಿ ಇಲಿ ತಲೆ ಸಿಕ್ಕಿದ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಚೀನಾ ಡೈಲಿ ವರದಿ ಪ್ರಕಾರ, ಚೀನಾದ ಕೆಫೆಟೇರಿಯಾದ ಊಟದ ಬಾಕ್ಸ್‌ನಲ್ಲಿ ಇಲಿಯ ತಲೆ ಪತ್ತೆಯಾಗಿದೆ. ಒಂದು ತಿಂಗಳಲ್ಲಿ ಚೀನಾದಿಂದ ಇಂತಹ ಸುದ್ದಿ ಬರುತ್ತಿರುವುದು ಇದು ಎರಡನೇ ಬಾರಿ. ಹೀಗಾಗಿ ಚೀನಾದಲ್ಲಿ ಆಹಾರ ಭದ್ರತೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಪ್ರಾರಂಭವಾಗಿದೆ.

ಈ ಪ್ರಕರಣ ಕ್ಸಿಯುಶನ್ ಕೌಂಟಿಯಿಂದ ಬೆಳಕಿಗೆ ಬಂದಿದೆ. ಚೀನೀ ಔಷಧ ಆಸ್ಪತ್ರೆಯ ಕೆಫೆಟೇರಿಯಾದಲ್ಲಿ ಇಲಿಯ ತಲೆ ಕಂಡುಬಂದಿದೆ. ಬಾತುಕೋಳಿ ಮಾಂಸದಿಂದ ತಯಾರಿಸಿದ ಭಕ್ಷ್ಯದಲ್ಲಿ ಈ ಇಲಿಯ ತಲೆ ಪತ್ತೆಯಾಗಿದೆ.

China: Rat head found in lunch box: Second incident in a month

ಕೆಫೆಟೇರಿಯಾದ ಸಿಬ್ಬಂದಿ ಆರಂಭದಲ್ಲಿ ಇದನ್ನು ಬಾತುಕೋಳಿ ಮಾಂಸ ಎಂದು ಕರೆಯುತ್ತಿದ್ದರು. ಆದರೆ ಗ್ರಾಹಕ ವಿದ್ಯಾರ್ಥಿ ಇಲಿಯ ತಲೆಯ ತುಂಡು ತೆಗೆದು ನೌಕರನಿಗೆ "ಇದು ಇಲಿ ತಲೆಯಲ್ಲವೇ?" ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಿಬ್ಬಂದಿ ಉತ್ತರ, "ಇದು ಬಾತುಕೋಳಿ ಮಾಂಸ" ಎಂದು ವಾದಿಸಿದ್ದಾನೆ. ಬಳಿಕ ವಿದ್ಯಾರ್ಥಿ ನೌಕರನನ್ನು ಬಾತುಕೋಳಿ ಮಾಂಸಕ್ಕೆ ಹಲ್ಲುಗಳು ಹೇಗೆ ಇರುತ್ತವೆ? ಎಂದು ಮರು ಪ್ರಶ್ನೆ ಮಾಡಿದ್ದಾನೆ.

ತೀವ್ರ ಮಾತುಕತೆಯ ನಂತರ ಈ ಆಹಾರವನ್ನು ತಮ್ಮ ಕೆಫೆಟೇರಿಯಾದಲ್ಲಿ ತಯಾರಿಸಲಾಗಿಲ್ಲ ಎಂದು ನೌಕರ ಹೇಳಿಕೊಂಡಿದ್ದಾನೆ. ಅವರ ಕ್ಯಾಂಟೀನ್‌ನಲ್ಲಿ ಸಿಗುವ ಆಹಾರ ಹೊರಗುತ್ತಿಗೆಯಿಂದ ತರಲಾಗುತ್ತದೆ ಎಂದು ಆತ ಹೇಳಿದ್ದಾನೆ. ಇಂತಹ ಸಮಸ್ಯೆ ಕಂಡು ಬರುತ್ತಿರುವುದು ಇದೇ ಮೊದಲು ಎಂದು ಕೂಡ ಆತ ಹೇಳಿದ್ದಾನೆ.

ಈ ಹಿಂದೆ ಜೂನ್ 1ರಂದು ಇದೇ ಪ್ರಕರಣ ಮುನ್ನೆಲೆಗೆ ಬಂದಿತ್ತು. ಆಗಲೂ ಡಕ್ ಡಿಶ್ ನಲ್ಲಿ ಇಲಿ ಪತ್ತೆಯಾಗಿತ್ತು. ಜಿಯಾಂಗ್ಕ್ಸಿ ಇಂಡಸ್ಟ್ರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಶಾಲೆಯ ಕ್ಯಾಂಟೀನ್‌ನಲ್ಲಿ ತನ್ನ ಭಕ್ಷ್ಯದಲ್ಲಿ ವಿಚಿತ್ರವಾದ ತಲೆಯನ್ನು ಕಂಡಿದ್ದನು. ನಂತರ ವಿದ್ಯಾರ್ಥಿಯು ಅದರ ವೀಡಿಯೊವನ್ನು ಚೀನಾದ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದನು. ಆ ವಿಡಿಯೋ ವೈರಲ್ ಆಗಿತ್ತು.

ಇದರಿಂದಾಗಿ ಚೀನಾದಲ್ಲಿ ಆಹಾರ ಸುರಕ್ಷತೆಯ ಬಗ್ಗೆ ಪ್ರಶ್ನೆ ಹುಟ್ಟಿದೆ. ಆದ್ದರಿಂದ ಈ ಎರಡು ಘಟನೆಗಳು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣವಾಗಿವೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ಚೀನಾದ ಸ್ಥಳೀಯ ಸರ್ಕಾರಗಳನ್ನು ಗುರಿಯಾಗಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+