ಸೌದಿ ಸಾಲ ತೀರಿಸಲು ಚೀನಾಗೆ ಬಕೆಟ್ ಹಿಡಿದ ಪಾಕ್ ನಾಯಕರು..!

ಸೌದಿ ಅರೇಬಿಯಾ ಸಾಲ ತೀರಿಸುವುಕ್ಕಾಗಿ ಪಾಕ್‌ಗೆ ಸಹಾಯ ಮಾಡಲು ಚೀನಾ ಮುಂದಾಗಿದೆ. 11 ಸಾವಿರ ಕೋಟಿ ರೂಪಾಯಿ ಹಣವನ್ನು ಪಾಕ್‌ಗೆ ನೀಡಲು ಚೀನಾ ಮುಂದೆ ಬಂದಿದೆ. ಈ ಮೂಲಕ ಉಂಡ ಮನೆಗೆ ದ್ರೋಹ ಬಗೆಯುವುದನ್ನು ಪಾಕಿಸ್ತಾನಿ ನಾಯಕರಿಂದ ಕಲಿಯಬೇಕು ಎಂಬುದು ಸ್ಪಷ್ಟವಾಗಿದೆ.

ಇಷ್ಟು ದಿನ ಸಹಾಯಕ್ಕಾಗಿ ಸೌದಿ ದೊರೆಗಳ ಕಾಲು ಹಿಡಿಯುತ್ತಿದ್ದ ಪಾಕಿಸ್ತಾನಿ ನಾಯಕರು, ಇದೀಗ ಅದೇ ಸೌದಿ ದೊರೆಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಯಾವಾಗ ಸೌದಿ ದೊರೆಗಳು ಮತ್ತೊಮ್ಮೆ ಸಾಲ ಕೊಡಲ್ಲ ಎಂದರೋ, ಅಂದಿನಿಂದಲೂ ಪಾಕ್ ನಾಯಕರಿಗೆ ತುರಿಕೆ ಶುರುವಾಗಿತ್ತು. ಸೇಡನ್ನು ಹೇಗಾದರೂ ತೀರಿಸಿಕೊಳ್ಳಬೇಕು ಅಂತಾ ಹೊಂಚು ಹಾಕಿದ್ದವರಿಗೆ ಹೊಸ ದಾರಿ ಸಿಕ್ಕಿದೆ.

ಚೀನಾ ಈ ಹಿಂದಿನಿಂದಲೂ ಪಾಕ್‌ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಬೇಕು ಎಂದಾಗ ಸಾಲ ಕೊಟ್ಟು, ಪಾಕಿಸ್ತಾನವನ್ನು ತನ್ನ ಬಲೆಗೆ ಬೀಳಿಸುತ್ತಿದೆ. ಈಗಲೂ ಅಷ್ಟೇ ಸೇಮ್ ಸೀನ್ ರಿಪೀಟ್ ಆಗಿದ್ದು, ಪಾಕ್‌ಗೆ ಚೀನಾ ಸಹಾಯ ಮಾಡಲು ಮುಂದಾಗಿದೆ.

ಪಾಕ್ ಪಾಲಿಗೆ ಚೀನಾ ಪರಮಾತ್ಮ..!

ಪಾಕ್ ಪಾಲಿಗೆ ಚೀನಾ ಪರಮಾತ್ಮ..!

ಜಗತ್ತಿಗೆ ಪರಮಾತ್ಮ ಬೇರೆಯಾಗಿದ್ದರೂ ಪಾಕ್‌ ಪಾಲಿಗೆ ಚೀನಾ ಪರಮಾತ್ಮ. ಹಾಗಂತ ಈ ಪರಮಾತ್ಮ ಶಾಶ್ವತ ಎಂದು ತಿಳಿಯಬೇಡಿ. ಪಾಕಿಸ್ತಾನ ಯಾವಾಗ ಬಣ್ಣ ಬದಲಿಸುತ್ತೋ ಗೊತ್ತಿಲ್ಲ. ಈ ಹಿಂದೆ ಅಮೆರಿಕದ ಎದುರು ಕೈ ಮುಗಿದು ಹಣ ಕೀಳುತ್ತಿದ್ದ ಪಾಕಿಗಳು, ಅಮೆರಿಕ ನೀಡಿದ್ದ ಭಾರಿ ಪ್ರಮಾಣದ ಹಣವನ್ನು ಉಗ್ರ ಪೋಷಣೆಗೆ ಬಳಸಿಕೊಳ್ಳುತ್ತಿದ್ದರು. ಇದು ಯಾವಾಗ ಜಗಜ್ಜಾಹೀರಾಯಿತೋ, ಅಂದಿನಿಂದ ಅಮೆರಿಕ ಕೂಡ ಪಾಕಿಸ್ತಾನಕ್ಕೆ ಹಣ ನೀಡುವುದನ್ನ ನಿಲ್ಲಿಸಿತ್ತು.

ಅಲ್ಲಿಯವರೆಗೂ ಅಮೆರಿಕ ತನ್ನ ಪಾಲಿನ ದೇವರು ಎನ್ನುತ್ತಿದ್ದ ಪಾಕಿ ನಾಯಕರು ದಿಢೀರ್ ಬಣ್ಣ ಮತ್ತು ಬಣ ಎರಡನ್ನೂ ಬದಲಿಸಿ ಚೀನಾ ಕಡೆ ಜಂಪ್ ಆಗಿದ್ದರು. ಸುಮಾರು 10 ವರ್ಷದಿಂದ ಪಾಕಿಸ್ತಾನಕ್ಕೆ ಚೀನಾ ಟೆಂಪ್ರವರಿ ಪರಮಾತ್ಮನಾಗಿದ್ದು, ಸಂಕಷ್ಟ ಎದುರಾದರೆ ಚೀನಾ ಕಾಲು ಹಿಡಿಯುತ್ತಿದ್ದಾರೆ. ಇದೀಗ ಸೌದಿ ಸಾಲ ತೀರಿಸುವುದಕ್ಕೂ ಇದೇ ರೀತಿ ಪಾಕ್ ನಾಯಕರು ಚೀನಾಗೆ ಬಕೆಟ್ ಹಿಡಿದಿದ್ದಾರೆ.

ಪಾಕ್-ಚೀನಾ 10 ವರ್ಷದ ಪ್ರೀತಿ

ಪಾಕ್-ಚೀನಾ 10 ವರ್ಷದ ಪ್ರೀತಿ

ಅಂದಹಾಗೆ ಪಾಕ್-ಚೀನಾ ನಡುವೆ ಗುಟ್ಟಾಗಿ ಹುಟ್ಟಿಕೊಂಡಿದ್ದ ಪ್ರೀತಿ ಹೆಚ್ಚಾಗಿ ಸುಮಾರು 10 ವರ್ಷ ಕಳೆದಿದೆ. ಪಾಕಿಸ್ತಾನ ಹಾಗೂ ಚೀನಿ ಗ್ಯಾಂಗ್ ಮೊದಲ ಆರ್ಥಿಕ ಒಪ್ಪಂದ ಮಾಡಿಕೊಂಡಿದ್ದು 2011ರಲ್ಲಿ. ಆಗಿನಿಂದಲೂ ಇಬ್ಬರ ಮಧ್ಯೆ ಹಲವು ಬಾರಿ ಒಪ್ಪಂದಗಳನ್ನ ಮರುಪರಿಶೀಲನೆ ನಡೆದಿದೆ. ಹೀಗೆ 10 ವರ್ಷಗಳ ಅವಧಿಯಲ್ಲಿ ಚೀನಿ ಗ್ಯಾಂಗ್ ಪಾಕಿಸ್ತಾನಕ್ಕೆ ಹತ್ತಾರು ಸಾವಿರಕೋಟಿ ರೂಪಾಯಿಯನ್ನ ಬಳುವಳಿಯಾಗಿ ನೀಡಿದೆ. ಇದಕ್ಕೆಲ್ಲಾ ಪಾಕಿಸ್ತಾನಿ ಸ್ಟೇಟ್ ಬ್ಯಾಂಕ್ ಬ್ರೋಕರ್ ಕೆಲಸ ಮಾಡುತ್ತಾ ಬಂದಿದೆ.

ಜಗತ್ತಿನ ಮುಂದೆ ಭಿಕ್ಷೆ ಬೇಡಿದ್ದ ಪಾಕ್..!

ಜಗತ್ತಿನ ಮುಂದೆ ಭಿಕ್ಷೆ ಬೇಡಿದ್ದ ಪಾಕ್..!

ಇದು ಕೆಲ ದಿನಗಳ ಹಿಂದೆ ನಡೆದಿದ್ದ ಘಟನೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕೊರೊನಾ ಕುರಿತಾದ ವಿಶೇಷ ಚರ್ಚೆ ನಡೆಯುತ್ತಿತ್ತು. ಆಗ ಜಾಗತಿಕ ಸಮುದಾಯದ ಎದುರು ಅಕ್ಷರಶಃ ಭಿಕ್ಷೆ ಬೇಡಿದ್ದವರು ಪಾಕ್ ಪ್ರಧಾನಿ ಇಮ್ರಾನ್ ಖಾನ್. ಕೊರೊನಾ ಪರಿಸ್ಥಿತಿಯನ್ನೇ ನೆಪಮಾಡಿಕೊಂಡು ಪಾಕ್‌ನ ಇಮ್ರಾನ್ ಖಾನ್ ಸರ್ಕಾರ, ಕಡಿಮೆ ಆದಾಯವಿರುವ ಬಡರಾಷ್ಟ್ರಗಳ ಸಾಲಮನ್ನಾ ಮಾಡಿ ಎಂದಿತ್ತು.

ಕಡಿಮೆ ಆದಾಯವಿರುವ ರಾಷ್ಟ್ರಗಳು ಪಡೆದುಕೊಂಡ ಸಾಲವನ್ನು ಕೊರೊನಾ ಪಿಡುಗು ಅಂತ್ಯಗೊಳ್ಳುವವರೆಗೂ ಅಮಾನತು ಮಾಡಿ. ಅಲ್ಲದೆ ತೀರಾ ಹಿಂದುಳಿದಿರುವ ರಾಷ್ಟ್ರಗಳು ಪಡೆದಿರುವ ಸಾಲವನ್ನು ಮನ್ನಾ ಮಾಡಿ ಎಂದು ಜಾಗತಿಕ ಸಮುದಾಯದ ಬಳಿ ಪಾಕ್ ಪಿಎಂ ಇಮ್ರಾನ್‌ ಖಾನ್‌ ಬೇಡಿಕೊಂಡಿದ್ದರು. ತೀರಾ ಹಿಂದುಳಿದಿರುವ ರಾಷ್ಟ್ರಗಳು ಎನ್ನುವ ಮೂಲಕ ಪರೋಕ್ಷವಾಗಿ ತನ್ನ ಬಳಿ ಸಾಲ ವಾಪಸ್ ಕೊಡುವುದಕ್ಕೂ ತಾಕತ್ತಿಲ್ಲ ಎಂದು ಇಮ್ರಾನ್ ಹೇಳಿಕೊಂಡಿದ್ದರು.

ಸಾಲ ವಾಪಸ್ ಕೊಡಲು ಮತ್ತೆ ಸಾಲ..!

ಸಾಲ ವಾಪಸ್ ಕೊಡಲು ಮತ್ತೆ ಸಾಲ..!

ಒಂದು ರಾಷ್ಟ್ರ ಹಾಳಾಗುವುದಕ್ಕೆ ಏನೆಲ್ಲಾ ಮಾಡಬೇಕು ಎಂಬುದನ್ನ ಪಾಕಿಸ್ತಾನದ ನಾಯಕರನ್ನು ನೋಡಿಯೇ ಕಲಿಯಬೇಕು. ನೆಮ್ಮದಿಯಾಗಿದ್ದ ಪಾಕಿಸ್ತಾನವನ್ನು ಅಲ್ಲಿನ ನಾಯಕರು ಹಾಳು ಮಾಡಿದ್ದಾರೆ. ಆದರ್ಥಿಕತೆಯನ್ನ ಬೀದಿಗೆ ತಂದು ನಿಲ್ಲಿಸಿದ್ದಾರೆ.

ಸದ್ಯಕ್ಕೆ ಪಾಕಿಸ್ತಾನದ ಸ್ಥಿತಿ ಹೇಗಿದೆ ಎಂದರೆ, ಈಗ ಇರುವ ಸಾಲಕ್ಕೆ ಬಡ್ಡಿ ಕಟ್ಟಲು ಮತ್ತೆ ಸಾಲ ಮಾಡಬೇಕಾದ ಪರಿಸ್ಥಿತಿ ಇದೆ. ಇನ್ನು ಆ ಸಾಲ ವಾಪಸ್ ಕೊಡಲು ಮತ್ತೆ ಸಾಲ ಮಾಡಬೇಕಿದೆ. ಹೀಗಾಗಿ ಸಾಲದ ಮೇಲೆ ಸಾಲ ಮಾಡುತ್ತಾ ಬೀದಿಗೆ ಬಿದ್ದಿರುವ ಪಾಕಿಸ್ತಾನಕ್ಕೆ ಈ ಸಂಕೋಲೆಯಿಂದ ಹೊರಗೆ ಬರಲು ಯಾವುದೇ ದಾರಿ ಕಾಣದಾಗಿದೆ. ಈ ಕಾರಣಕ್ಕೆ ಭಿಕ್ಷೆ ಪಾತ್ರೆ ಹಿಡಿದು, ಜಗತ್ತಿನ ಮುಂದೆ ಕೈಮುಗಿದು ಕೇಳಿಕೊಳ್ಳುತ್ತಿದೆ. ಆದರೆ ಜಾಗತಿಕ ನಾಯಕರು ಮಾತ್ರ ಪಾಕ್ ಮಾತಿಗೆ ಕೇರ್ ಮಾಡುತ್ತಿಲ್ಲ.

ಪಾಕ್ ಪ್ರಜೆಗಳ ಪರದಾಟ

ಪಾಕ್ ಪ್ರಜೆಗಳ ಪರದಾಟ

ಪಾಕಿಸ್ತಾನದಲ್ಲಿ ಪರಿಸ್ಥಿತಿ ಮೊದಲೇ ಹದಗೆಟ್ಟು ಹೋಗಿತ್ತು. ಇನ್ನು ಕೊರೊನಾ ವಕ್ಕರಿಸಿದ ನಂತರವಂತೂ ಅಲ್ಲಿ ಜನರು ನೆಮ್ಮದಿಯಾಗಿ ಉಸಿರಾಡುವುದು ಕೂಡ ಕಷ್ಟಕರವಾಗಿದೆ. ಪಾಕಿಸ್ತಾನಿ ನಾಯಕರು ಮಾಡಿಕೊಂಡಿರುವ ತಪ್ಪಿಗೆ ಅಲ್ಲಿನ ಪ್ರಜೆಗಳು ನಿತ್ಯ ನರಕ ಕಾಣುತ್ತಿದ್ದಾರೆ. ಒಂದು ಕಡೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಉಗ್ರರ ಉಪಟಳ ಹಾಗೂ ಸರ್ಕಾರದ ಕೆಲಸದಲ್ಲಿ ಅಡ್ಡ ಬರುತ್ತಿರುವ 'ಐಎಸ್‌ಐ' ಏಜೆಂಟರುಗಳಿಂದ ಇಡೀ ಪಾಕ್ ದಿವಾಳಿಯಾಗಿದೆ. ಕೋಟಿ ಕೋಟಿ ಜನರು ತುತ್ತು ಅನ್ನಕ್ಕೂ ನರಳಾಡುವ ಸ್ಥಿತಿ ಇದೆ. ಆದರೆ ಇದನ್ನು ಪಾಕ್ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಮತ್ತೊಂದಿಷ್ಟು ಸಾಲ ಮಾಡಿ, ಅದರಲ್ಲೇ ವೆಪನ್ ಖರೀದಿಸಿ ಶೋಕಿ ಮಾಡುತ್ತಿದೆ. ಇನ್ನಷ್ಟು ಉಗ್ರರನ್ನು ಬೆಳೆಸುವ ಮೂಲಕ ಜಗತ್ತಿಗೆ ಕಂಟಕವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+