133 ಜನರಿದ್ದ ವಿಮಾನ ಪತನ; ಸುರಕ್ಷತೆಯಲ್ಲಿ ಉತ್ತಮ ಎನಿಸಿಕೊಂಡ ರಾಷ್ಟ್ರದಲ್ಲಿ ಇದೇನಾಯಿತು?
ಬೀಜಿಂಗ್, ಮಾರ್ಚ್ 21: ಚೀನಾದ ಪೂರ್ವ ಪ್ರದೇಶದ ಪ್ರಯಾಣಿಕರನ್ನು ಹೊತ್ತು ಪ್ರಯಾಣಿಸಿದ್ದ ಬೋಯಿಂಗ್ 737 ವಿಮಾನವು ದಕ್ಷಿಣದ ಪರ್ವತ ಪ್ರದೇಶದಲ್ಲಿ ಪತನವಾಗಿದೆ. ಈ ಘಟನೆಯಲ್ಲಿ ಯಾವುದೇ ಸಾವು-ನೋವಿನ ಕುರಿತು ಅಂಕಿ-ಅಂಶಗಳು ಪತ್ತೆಯಾಗಿಲ್ಲ ಎಂದು ಚೀನಾದ ವಿಮಾನಯಾನ ಆಡಳಿತ ಮಂಡಳಿ ತಿಳಿಸಿದೆ.
ಚೀನಾದಲ್ಲಿ ಸಂಭವಿಸಿದ ವಿಮಾನ ಪತನದ ಕುರಿತು ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಹೇಗೆ ಆಯಿತು ಎಂಬುದರ ಕುರಿತು ತನಿಖೆ ನಡೆಸುವಂತೆ ಕ್ಸಿ ಜಿನ್ ಪಿಂಗ್ ಆದೇಶ ನೀಡಿದ್ದಾರೆ.
ವಿಮಾನ ಪತನ ಹಾಗೂ ಅದರ ಸುತ್ತಮುತ್ತಲು ನಡೆದಿರುವ ಪ್ರಮುಖ ಬೆಳವಣಿಗೆಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ.
ಚೀನಾ ವಿಮಾನ ಪತನದ ಸುತ್ತಲಿನ ಬೆಳವಣಿಗೆಗಳು:
- ಇದು 6 ವರ್ಷ ಹಳೆಯ ಬೋಯಿಂಗ್ 737-800 ಎನ್‌ಜಿ ವಿಮಾನವಾಗಿದ್ದು, ಒಟ್ಟು 132 ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿ 123 ಪ್ರಯಾಣಿಕರಾಗಿದ್ದರೆ, 9 ಸಿಬ್ಬಂದಿ ಆಗಿದ್ದರು.
- ಚೀನಾದಲ್ಲಿ ನಡೆದಿರುವ ವಿಮಾನ ಪತನಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆತಂಕ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎಂದು ವರದಿ ಆಗಿದೆ.

- ಪರ್ವತನದಲ್ಲಿನ ಬೆಂಕಿಯ ಕಾರಣದಿಂದಾಗಿ ಚೀನಾದ ಗುವಾಂಗ್ಕ್ಸಿ ಪ್ರದೇಶದ ವುಝೌ ನಗರದ ಸಮೀಪವಿರುವ ಗ್ರಾಮೀಣ ಭಾಗದಲ್ಲಿ ವಿಮಾನ ಪತನಗೊಂಡಿದೆ ಎಂದು ಚೀನಾದ ರಾಜ್ಯ ಮಾಧ್ಯಮ ಸಿಸಿಟಿವಿ ಹೇಳಿದೆ. ಅಪಘಾತದಲ್ಲಿ ಭಾಗಿಯಾದ ವಿಮಾನವು "ಸಂಪೂರ್ಣವಾಗಿ ಬಿದ್ದಿದೆ" ಮತ್ತು ವಿಮಾನವು ಪರ್ವತದ ಮೇಲೆ ಅಪ್ಪಳಿಸಿದಾಗ ಉಂಟಾದ ಬೆಂಕಿಯಿಂದ ಹತ್ತಿರದ ಅರಣ್ಯ ಪ್ರದೇಶ ನಾಶವಾಗಿದ್ದನ್ನು ನೋಡಿರುವುದಾಗಿ ಸ್ಥಳೀಯರೊಬ್ಬರು ಹೇಳಿದ್ದಾರೆ.
- ಚೀನಾದಲ್ಲಿ ಪತನಗೊಂಡಿರುವ ವಿಮಾನವು ಹಳೆ ತಲೆಮಾರಿನದ್ದಾಗಿದೆ. ಇದು ಹೊಸ ತಲೆಮಾರಿನ ಬೋಯಿಂಗ್ ಮ್ಯಾಕ್ಸ್ ಜೆಟ್ ಆಗಿರಲಿಲ್ಲ. ಈ ಹಿಂದಿನ ನಡೆದ ವಿಮಾನ ಅಪಘಾತಗಳಲ್ಲಿ ಇಂಥದ್ದೇ ಮಾದರಿಯ ವಿಮಾನಗಳಿದ್ದವು. ಇಂಡೋನೇಷ್ಯಾ ಮತ್ತು ಇಥಿಯೋಪಿಯಾದಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತಗಳಿಗೆ ಇದೇ ಹಳೆ ಮಾದರಿ ವಿಮಾನಗಳು ಕಾರಣವಾಗಿದ್ದವು.
- ವಿಮಾನ ಪತನಗೊಂಡಿರುವ ಸ್ಥಳಕ್ಕೆ ತುರ್ತು ರಕ್ಷಣಾ ಸಿಬ್ಬಂದಿಯು ತೆರಳಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಚೀನಾದ ವಿಮಾನಯಾನ ಸಂಸ್ಥೆಯು ತಿಳಿಸಿದೆ.
- ಚೀನಾ ಪೂರ್ವ ವಿಮಾನ MU5735 ಕುನ್ಮಿಂಗ್‌ನಿಂದ ಗುವಾಂಗ್‌ಝೌಗೆ ಸ್ಥಳೀಯ ಸಮಯ ಮಧ್ಯಾಹ್ನ 1.11 ಕ್ಕೆ (0511 GMT) ಹೊರಟಿತ್ತು ಎಂದು FlightRadar24 ಅಂಕಿ-ಅಂಶಗಳು ಹೇಳುತ್ತವೆ
- ಫ್ಲೈಟ್-ಟ್ರ್ಯಾಕಿಂಗ್ ಸ್ಥಳೀಯ ಸಮಯ ಮಧ್ಯಾಹ್ನ 2.22ಕ್ಕೆ (0622 GMT) 3225 ಅಡಿ ಎತ್ತರದಲ್ಲಿ 376 ವೇಗದಲ್ಲಿ ಕಾಣದೇ ಹೋಯಿತು. ಇದು ಪೂರ್ವ ಕರಾವಳಿಯ ಗುವಾಂಗ್‌ಝೌನಲ್ಲಿ ಮಧ್ಯಾಹ್ನ 3:05ಕ್ಕೆ ಲ್ಯಾಂಡ್ ಆಗಬೇಕಿತ್ತು (0705 GMT).
- ಚೀನಾದ ಪೂರ್ವ ವಿಮಾನಯಾನ ವೆಬ್‌ಸೈಟ್ ಅನ್ನು ಕಪ್ಪು ಮತ್ತು ಬಿಳುಪು ಬಣ್ಣದಲ್ಲಿ ಪ್ರಸ್ತುತಪಡಿಸಲಾಯಿತು. ಸಾಮಾನ್ಯವಾಗಿ ವಿಮಾನವೊಂದು ಪತನಗೊಂಡ ಸಂದರ್ಭದಲ್ಲಿ ಸಂತ್ರಸ್ತರಿಗೆ ಗೌರವ ಸೂಚಿಸುವ ಸಮಯದಲ್ಲಿ ಈ ರೀತಿ ಮಾಡಲಾಗುತ್ತದೆ.
- ಯುಎಸ್ ಷೇರು ಮಾರುಕಟ್ಟೆಯಲ್ಲಿ ಬೋಯಿಂಗ್‌ನ ಷೇರುಗಳು ಶೇ.6.8ರಷ್ಟು ಕುಸಿದಿದ್ದು, 179.97ರಲ್ಲಿ ವಹಿವಾಟು ನಡೆಸುತ್ತಿವೆ. ಅದೇ ರೀತಿ ಶಾಂಘೈ ಮೂಲದ ಚೀನಾ ಈಸ್ಟರ್ನ್‌ನಲ್ಲಿನ ಷೇರುಗಳು ಹಾಂಗ್ ಕಾಂಗ್‌ನಲ್ಲಿ ತಡವಾಗಿ ವಹಿವಾಟು ಆರಂಭಿಸಿದ್ದು, ಶೇ.6.4ರಷ್ಟು ಕುಸಿದಿವೆ.
- ಕಳೆದೊಂದು ದಶಕದಲ್ಲಿ ಇಡೀ ಜಗತ್ತಿನಲ್ಲಿಯೇ ವಿಮಾನಯಾನ ಉದ್ಯಮದ ಸುರಕ್ಷತೆಯಲ್ಲಿ ಚೀನಾ ಅತ್ಯುತ್ತಮ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ವಿಮಾನಯಾನ ಸುರಕ್ಷತೆ ನೆಟ್‌ವರ್ಕ್ ಪ್ರಕಾರ, ಚೀನಾದ ಕೊನೆಯ ಮಾರಣಾಂತಿಕ ಜೆಟ್ ಅಪಘಾತವು 2010 ರಲ್ಲಿ ಸಂಭವಿಸಿತ್ತು. ಹೆನಾನ್ ಏರ್‌ಲೈನ್ಸ್ ಸಂಸ್ಥೆಯ ಎಂಬ್ರೇರ್ ಇ-190 ಪ್ರಾದೇಶಿಕ ಜೆಟ್ ಕಡಿಮೆ ಗೋಚರತೆಯಲ್ಲಿ ಯಿಚುನ್ ವಿಮಾನ ನಿಲ್ದಾಣಕ್ಕೆ ಸಮೀಪಿಸಿದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದ್ದು, ಅಂದು ವಿಮಾನದಲ್ಲಿದ್ದ 96 ಜನರಲ್ಲಿ 44 ಪ್ರಯಾಣಿಕರು ಮೃತಪಟ್ಟಿದ್ದರು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications