China: ಬೆಂಕಿ ಜೊತೆ ಆಟ ಆಡಬೇಡಿ, ಅಮೆರಿಕಗೆ ವಾರ್ನಿಂಗ್ ಕೊಟ್ಟ ಚೀನಾ!
ತೈವಾನ್ ವಿಚಾರದಲ್ಲಿ ಚೀನಾ & ಅಮೆರಿಕದ ನಡುವೆ ನಡೆಯುತ್ತಿರುವ ಫೈಟಿಂಗ್, ಇವತ್ತು ಅಥವಾ ನಿನ್ನೆಯದ್ದಲ್ಲ. ಚೀನಾ & ಅಮೆರಿಕ ನಡುವೆ ಸುಮಾರು ವರ್ಷಗಳಿಂದ ಕೂಡ ಈ ವಿಚಾರದಲ್ಲಿ ಕಿರಿಕ್ ನಡೆಯುತ್ತಾ ಬಂದಿದೆ. ಈ ವಿಚಾರದಲ್ಲಿ ಚೀನಾ ಪದೇ ಪದೇ ತನ್ನದೇ ವಾದ ಮಂಡನೆ ಮಾಡುತ್ತಾ, ತೈವಾನ್ ಕೂಡ ಚೀನಾ ಭಾಗ ಅಂತಾ ಹೇಳುತ್ತಿದೆ. ಆದ್ರೆ ಈ ಮಾತು ಒಪ್ಪದ ಅಮೆರಿಕ ಮಾತ್ರ ತೈವಾನ್‌ಗೆ ಸಹಾಯ ಮಾಡುತ್ತಿದೆ!
ಅಮೆರಿಕ ಮಾಡುತ್ತಿರುವ ಸಹಾಯ ಕಂಡು ಚೀನಾ ಕೂಡ ರೊಚ್ಚಿಗೆದ್ದಿದೆ. ಅದರಲ್ಲೂ ಈಗ ನೇರವಾಗಿಯೇ ಅಮೆರಿಕಗೆ ಚೀನಾ ವಾರ್ನಿಂಗ್ ಕೊಡುತ್ತಿದೆ. ಜಾಗತಿಕ ಮಟ್ಟದಲ್ಲಿ ರಷ್ಯಾ & ಉಕ್ರೇನ್ ಯುದ್ಧ ಸೇರಿದಂತೆ ಇಸ್ರೇಲ್ & ಗಾಜಾ ನಡುವೆ ಕೂಡ ವಾರ್ ಆಗುತ್ತಿದೆ. ಹೀಗಾಗಿ ದೊಡ್ಡ ತಲ್ಲಣ ಕೂಡ ಸೃಷ್ಟಿ ಆಗುತ್ತಿದೆ. ಹೀಗಿದ್ದಾಗಲೇ ಚೀನಾ & ಅಮೆರಿಕ ಕೂಡ ಪರಸ್ಪರ ಫೈಟ್ ಮಾಡಲು ಸಜ್ಜಾದಂತೆ ಕಾಣುತ್ತಿದ್ದು, ಬೆಂಕಿ ಜೊತೆ ಆಟ ಆಡಬೇಡಿ ಅಂತಾ ಇದೀಗ ಅಮೆರಿಕಗೆ ವಾರ್ನಿಂಗ್ ಕೊಟ್ಟಿದೆ ಚೀನಾ!

ತೈವಾನ್ ವಿಚಾರದಲ್ಲಿ ಅಮೆರಿಕ ಕಿರಿಕ್!
ಅಮೆರಿಕ ಪದೇ, ಪದೇ ಚೀನಾ ಮಾತು ಕೇಳದೆ ತೈವಾನ್ ಬೆನ್ನಿಗೆ ನಿಲ್ಲುತ್ತಿದೆ ಎಂಬ ಭಾರಿ ಗಂಭೀರ ಆರೋಪ ಇದೆ. ಅದರಲ್ಲೂ ತೈವಾನ್ ಎಂಬ ಪುಟಾಣಿ ದ್ವೀಪರಾಷ್ಟ್ರಕ್ಕೆ ಅಮೆರಿಕ ಭಾರಿ ಪ್ರಮಾಣದಲ್ಲಿ ಸೇನಾ ನೆರವು ನೀಡುತ್ತಾ ಬರುತ್ತಿದೆ. ಆದರೆ ತನ್ನದೇ ದೇಶದ ಭಾಗ ಈ ತೈವಾನ್ ಎಂಬ ಮಾತನ್ನು ಹೇಳುತ್ತಾ ಬಂದಿರುವ ಚೀನಾಗೆ ಇದನ್ನ ನೋಡಿ ಕೆಟ್ಟ ಕೋಪ ಬರುತ್ತಿದೆ. ಇದೇ ಕಾರಣಕ್ಕೆ ಇದೀಗ ಮತ್ತೊಮ್ಮೆ ಬೆಂಕಿ ಜೊತೆ ಆಟ ಆಡಬೇಡಿ ಎಂದು ಭಾರಿ ಖಡಕ್ ಆಗಿ ಎಚ್ಚರಿಸಿದೆ ಚೀನಾ!
571 ಮಿಲಿಯನ್ ಡಾಲರ್ ನೆರವು!
ತೈವಾನ್ ದೇಶಕ್ಕೆ ಅಮೆರಿಕ ಇತ್ತೀಚೆಗೆ 571 ಮಿಲಿಯನ್ ಡಾಲರ್ ಅಂದ್ರೆ ಹತ್ತಿರ, ಹತ್ತಿರ 5,000 ಕೋಟಿ ರೂಪಾಯಿ ಸೇನಾ ನೆರವು & ವ್ಯಾಪಾರಕ್ಕೆ ಮುಂದಾಗಿತ್ತು. ಈ ಪೈಕಿ 300 ಟ್ಯಾಕ್ಟಿಕಲ್ ರೇಡಿಯೋ ಸಿಸ್ಟಮ್ ಪ್ರಮುಖವಾಗಿದ್ದವು. ಇದರ ಜೊತೆಗೆ ಇನ್ನೂ ಹಲವು ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಅಮೆರಿಕ ಸಿದ್ಧತೆ ಮಾಡಿಕೊಂಡಿದೆ. ಬೈಡನ್ ಸರ್ಕಾರ ಈ ನಿರ್ಧಾರವನ್ನ ಕೈಗೊಂಡಿತ್ತು.
ಇದೇ ವಿಚಾರ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಇನ್ನೇನು ಅಧಿಕಾರದಿಂದ ಕೆಳಗೆ ಇಳಿಯುವ ಮೊದಲು ಇಂತಹ ದೊಡ್ಡ ನಿರ್ಧಾರ ಕೈಗೊಂಡಿದ್ದಾರೆ. ಈ ವಿಚಾರ ಸಂಚಲನ ಸೃಷ್ಟಿಸಿ ಚೀನಾ ಎಚ್ಚರಿಕೆ ಕೊಡುವಷ್ಟರ ಮಟ್ಟಿಗೆ ಬಂದು ನಿಂತಿದೆ. ಹೀಗಾಗಿ ಚೀನಾ & ಅಮೆರಿಕ ನಡುವಿನ ಕಿರಿಕ್ ಭಾರಿ ಕುತೂಹಲದ ಘಟ್ಟ ತಲುಪುತ್ತಿದೆ.












Click it and Unblock the Notifications