ಐವರು ಶಾಲಾ ಮಕ್ಕಳ ಬಲಿ ತೆಗೆದುಕೊಂಡ ಕಾರು: ಹೃದಯ ವಿದ್ರಾವಕ ಘಟನೆ
ಬೀಜಿಂಗ್, ನವೆಂಬರ್ 22: ರಸ್ತೆ ದಾಟುತ್ತಿದ್ದ ಶಾಲಾ ಮಕ್ಕಳ ಮೇಲೆ ಕಾರು ಹರಿದು ಐವರು ಮೃತಪಟ್ಟ ಘಟನೆ ಈಶಾನ್ಯ ಚೀನಾದಲ್ಲಿ ಗುರುವಾರ ನಡೆದಿದೆ.
ಲಿಯಾನಿಂಗ್ ಪ್ರಾಂತ್ಯದ ಹುಲುಡಾವೊದಲ್ಲಿ ಈ ದುರಂತ ನಡೆದಿದೆ. ಅಪಘಾತದ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಶಾಲೆಯೊಂದರ ಮುಂಭಾಗದಲ್ಲಿ ಮಕ್ಕಳು ರಸ್ತೆ ದಾಟುತ್ತಿದ್ದರು. ಆಗ ವಿರುದ್ಧ ದಿಕ್ಕಿನಲ್ಲಿ ಅಡ್ಡಾದಿಡ್ಡಿಯಾಗಿ ನುಗ್ಗಿದ ಕಾರು ಅವರ ಮೇಲೆಯೇ ಹರಿದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕೆಲವರು ಹಲವು ಅಡಿಗಳಷ್ಟು ದೂರ ಹಾರಿ ಬಿದ್ದರೆ, ಇನ್ನು ಕೆಲವರು ಚಕ್ರದ ಅಡಿ ಸಿಲುಕಿಕೊಂಡಿದ್ದಾರೆ.
ಅಪಘಾತದಿಂದ ತೀವ್ರ ಗಾಯಗೊಂಡ ಇಬ್ಬರು ಸಣ್ಣ ಮಕ್ಕಳು ರಕ್ತದ ಮಡುವಿನಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು.
Terrible! A car plowed into children outside a primary school in Liaoning Province on Thursday, injuring several of them. https://t.co/Atu1qIc9FV pic.twitter.com/Fh3DQua2MU
— China Plus News (@ChinaPlusNews) 22 November 2018
ಉಳಿದ ಗಾಯಾಳು ಮಕ್ಕಳ ಆಕ್ರಂದನ ಮುಗಿಲುಮುಟ್ಟಿತ್ತು. ಆದರೆ, ದಾರಿಹೋಕರು ಸಹಾಯಕ್ಕೆ ಬಾರದೆ ಮೂಕಪ್ರೇಕ್ಷಕರಾಗಿ ನಿಂತಿದ್ದರು. ಗಾಯಗೊಂಡಿದ್ದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.
18 ವರ್ಷದ ಯುವಕ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಕಾರಿನ ಚಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.












Click it and Unblock the Notifications