• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾಗೂ ಮುನ್ನ ವುಹಾನ್‌ ಲ್ಯಾಬ್‌ನ 3 ಸಿಬ್ಬಂದಿ ಅನಾರೋಗ್ಯಕ್ಕೆ ತುತ್ತಾಗಿದ್ದರು

|

ಬೀಜಿಂಗ್, ಮೇ 25: ಕೊರೊನಾ ಸೋಂಕು ವಿವಿಧ ದೇಶಗಳಿಗೆ ಹರಡುವ ಮುನ್ನ ವುನಾಹ್ ಲ್ಯಾಬ್‌ನ 3 ಸಿಬ್ಬಂದಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು ಎನ್ನುವ ಸುದ್ದಿ ಕೇಳಿಬಂದಿದೆ.

ಚೀನಾದ ನಂತರ, ಕೊರೊನಾ ಸಾಂಕ್ರಾಮಿಕವು ಇಡೀ ವಿಶ್ವಾದ್ಯಂತ ಹರಡಿತು, ಅದು ಜನರ ಜೀವನವನ್ನು ಬದಲಾಯಿಸಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದ ವಿಷಯವೇ.

ತುರ್ತು ಬಳಕೆಗಾಗಿ ಚೀನಾದ ಸಿನೊಫಾರ್ಮ್ ಕೊರೊನಾ ಲಸಿಕೆಗೆ WHO ಅನುಮೋದನೆತುರ್ತು ಬಳಕೆಗಾಗಿ ಚೀನಾದ ಸಿನೊಫಾರ್ಮ್ ಕೊರೊನಾ ಲಸಿಕೆಗೆ WHO ಅನುಮೋದನೆ

ಚೀನಾವು ಪ್ರಯೋಗಾಲಯದಲ್ಲಿ ವೈರಸ್ ತಯಾರಿಸಿದೆ ಮತ್ತು ಅದಕ್ಕೆ ಸಂಬಂಧಿಸಿದ ಡೇಟಾವನ್ನು ಮರೆಮಾಚಿದೆ ಎಂದು ಆರಂಭದಿಂದಲೂ ಆರೋಪಿಸಲಾಗುತ್ತಿದೆ. ಈ ಕುರಿತು ಇದೀಗ ವಿಶ್ವ ಆರೋಗ್ಯ ಸಂಸ್ಥೆ ಸಹ ತನಿಖೆ ಮಾಡಿದೆ.

 ಗಂಭೀರ ವಿಷಯ

ಗಂಭೀರ ವಿಷಯ

ಈಗ ಚೀನಾದಲ್ಲಿನ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಬಗ್ಗೆ ಮತ್ತೊಂದು ಗಂಭೀರ ಮತ್ತು ದೊಡ್ಡ ವಿಷಯವೊಂದು ಬಹಿರಂಗವಾಗಿದೆ.

 ಅಮೆರಿಕದ ಕಠಿಣ ನಿಲುವು ಮುಂದುವರಿಕೆ

ಅಮೆರಿಕದ ಕಠಿಣ ನಿಲುವು ಮುಂದುವರಿಕೆ

ವರದಿಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು, ಚೀನಾ ವಿರುದ್ದದ ತಮ್ಮ ಆರೋಪಗಳನ್ನು ಪುನರಾವರ್ತಿಸಿದ್ದಾರೆ. ವೈರಸ್ ಹರಡುವಿಕೆಯಲ್ಲಿ ಸತತವಾಗಿ ಒಪ್ಪಿಕೊಳ್ಳುತ್ತಿರುವ ಬಿಡೆನ್ ಆಡಳಿತ, ವೈರಸ್ ನ ಆರಂಭಿಕ ಹರಡುವಿಕೆಯಲ್ಲಿ ಚೀನಾವನ್ನು ಗಂಭೀರವಾಗಿ ಪ್ರಶ್ನಿಸುತ್ತಿದೆ.

ಈ ಬಗ್ಗೆ ಮಾತನಾಡಿರುವ ವಕ್ತಾರರು ಇನ್ನೂ ಹಲವು ಗಂಭೀರ ಪ್ರಶ್ನೆಗಳ ಉತ್ತರ ಸಿಗುವುದು ಬಾಕಿ ಇದೆ ಎಂದ ಅವರು, ವಿಶ್ವ ಆರೋಗ್ಯ ಸಂಸ್ಥೆ ಕೂಡ ವೈರಸ್ ನ ಉತ್ಪತ್ತಿಯ ಕುರಿತು ತನ್ನ ತನಿಖೆ ಮುಂದುವರೆಸಿದೆ. ಇದೇ ವೇಳೆ ಇದರಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪ ಮಾಡಲಾಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಪಿಡುಗಿನಿಂದ ಪಾರಾದ ಚೀನಾದಲ್ಲಿ ಹೇಗಿದೆ ಪರಿಸ್ಥಿತಿ?ಕೊರೊನಾ ಪಿಡುಗಿನಿಂದ ಪಾರಾದ ಚೀನಾದಲ್ಲಿ ಹೇಗಿದೆ ಪರಿಸ್ಥಿತಿ?

 ಮತ್ತೊಮ್ಮೆ ಚೀನಾ ವಿರುದ್ಧ ಎದ್ದ ಪ್ರಶ್ನೆಗಳು

ಮತ್ತೊಮ್ಮೆ ಚೀನಾ ವಿರುದ್ಧ ಎದ್ದ ಪ್ರಶ್ನೆಗಳು

ಕೊರೊನಾ ಸೋಂಕು ಹರಡುವ ಮುನ್ನ, 2019ರ ನವೆಂಬರ್‌ನಲ್ಲಿ, ವುಹಾನ್ ಲ್ಯಾಬ್‌ನ ಮೂವರು ಸಿಬ್ಬಂದಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಒಂದು ತಿಂಗಳ ನಂತರ, ಚೀನಾ ವತಿಯಿಂದ ಕೊರೊನಾ ಸಾಂಕ್ರಾಮಿಕ ರೋಗ ಹರಡುವ ವಿಷಯವನ್ನು ಅಮೆರಿಕಾದ ಗುಪ್ತಚರ ಇಲಾಖೆಯಮಾಹಿತಿಯ ಆಧಾರದ ಮೇಲೆ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

 ಗುಪ್ತಚರ ವರದಿ

ಗುಪ್ತಚರ ವರದಿ

ಅಮೆರಿಕಾದ ಈ ಗುಪ್ತಚರ ವರದಿಯಲ್ಲಿ ಲ್ಯಾಬ್ ಸಂಶೋಧಕರು ಆಸ್ಪತ್ರೆಗೆ ದಾಖಲಾದ ವೇಳೆ ಹಾಗೂ ಅವರ ದಾಖಲಾತಿಯ ಕುರಿತಾದ ಮಾಹಿತಿ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮುಂದಿನ ಸಭೆಯಲ್ಲಿ ಕೊರೊನಾ ವೈರಸ್‌ನ ಉತ್ಪತ್ತಿಯ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳ ಹಿನ್ನೆಲೆ, ಅಮೆರಿಕಾದ ಗುಪ್ತಚರ ಇಲಾಖೆ ನೀಡಿರುವ ಈ ಮಾಹಿತಿ ಭಾರಿ ಮಹತ್ವ ಪಡೆದುಕೊಂಡಿದೆ.

English summary
China on Monday dismissed as "totally untrue" reports that three researchers in Wuhan went to hospital with an illness shortly before the coronavirus emerged in the city and spread around the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X