G20 Summit: ಚೀನಾ ಅಧ್ಯಕ್ಷರು ಭಾರತಕ್ಕೆ ಬರೋದಿಲ್ಲ, ಇದು ಗ್ಯಾರಂಟಿ!

ಬೀಜಿಂಗ್‌: ಬಹುನಿರೀಕ್ಷಿತ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ, ಭಾರತದ ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷರು ಬರುತ್ತಿಲ್ಲ. ಈ ವಿಚಾರವನ್ನು ಚೀನಾ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಈ ಮೂಲಕ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬದಲು ಚೀನಾ ಪ್ರಧಾನಿ ಲಿ ಕ್ವಿಯಾಂಗ್‌ ಅವರ ಎಂಟ್ರಿ ಗ್ಯಾರಂಟಿ ಆಗಿದೆ.

ಕಳೆದ ಕೆಲವು ದಿನಗಳಿಂದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಬರ್ತಾರಾ? ಇಲ್ವಾ? ಅನ್ನೋ ಪ್ರಶ್ನೆ ಕಾಡುತ್ತಿತ್ತು. ಅದರಲ್ಲೂ ಕಾಶ್ಮೀರದಲ್ಲಿ ನಡೆದಿದ್ದ ಜಿ20 ಗುಂಪಿನ ಸಭೆಗೆ ಚೀನಾ ಗೈರು ಹಾಜರಾದ ನಂತರ ಈ ಪ್ರಶ್ನೆ ಇನ್ನಷ್ಟು ತೀವ್ರವಾಗಿತ್ತು. ಇದೇ ವಾರ ಜಿ20 ಶೃಂಗಸಭೆ ನಡೆಯಲಿದೆ. ಆದರೆ ಇದೀಗ ಚೀನಾ ವಿದೇಶಾಂಗ ಸಚಿವಾಲಯವು ಮಹತ್ವದ ಮಾಹಿತಿ ನೀಡಿದ್ದು, ಜಿನ್‌ಪಿಂಗ್ ಬರಲ್ಲ ಅನ್ನೋದು ಪಕ್ಕಾ ಆಗಿದೆ. ಈ ಮೂಲಕ ಭಾರತ ಹಾಗೂ ಚೀನಾ ನಡುವೆ ಉಂಟಾಗಿರುವ ಕಂದಕ ಮತ್ತಷ್ಟು ದೊಡ್ಡದಾಗಿದೆ ಎಂಬ ಮಾತು ಕೇಳಿಬರುತ್ತಿದೆ.

china-president-will-not-attend-the-g-20-summit

ಪುಟಿನ್ ಬಳಿಕ ಚೀನಾ ನಿರ್ಧಾರ

ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲೇ ಭಾರತದಲ್ಲಿ 18ನೇ ಶೃಂಗಸಭೆ ನಡೆಯುತ್ತಿದೆ. ಸೆಪ್ಟೆಂಬರ್ 9 & 10 ರಂದು ನಡೆಯುವ ಈ ಜಿ20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಜಗತ್ತಿನ ಘಟಾನುಘಟಿ ದೇಶಗಳ ಮುಖ್ಯಸ್ಥರು ಬರುತ್ತಿದ್ದಾರೆ. ಆದರೆ ದಿಢೀರ್ ಚೀನಾ ಅಧ್ಯಕ್ಷರ ಗೈರು ಹಾಜರಿ ಸಹಜವಾಗಿ ಗೊಂದಲದ ವಾತಾವರಣ ಸೃಷ್ಟಿಸಿದೆ. ಇದಕ್ಕೂ ಮೊದಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಭಾರತಕ್ಕೆ ಬರಲ್ಲ, ಜಿ20 ಶೃಂಗಸಭೆಯಲ್ಲಿ ನಾನು ಭಾಗವಹಿಸಲು ಆಗುತ್ತಿಲ್ಲ ಎಂದಿದ್ದರು. ಈಗ ಚೀನಾ ಅಧ್ಯಕ್ಷರು ಕೂಡ ಬರಲ್ಲ ಅನ್ನೋದು ಗ್ಯಾರಂಟಿ ಆಗಿದೆ.

ಚೀನಾ ಅಧ್ಯಕ್ಷರ ಗೈರು ಏಕೆ?

ಹೀಗೆ ಚೀನಾ ಅಧ್ಯಕ್ಷರು ಭಾರತದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಯಾಕೆ ಬರ್ತಿಲ್ಲ? ಅನ್ನೋ ಪ್ರಶ್ನೆಗೆ ಸೂಕ್ತ ಉತ್ತರ ಸಿಕ್ಕಿಲ್ಲ. ಯಾಕಂದ್ರೆ ಕ್ಸಿ ಜಿನ್‌ಪಿಂಗ್ ಗೈರಾಗುತ್ತಿರುವ ಬಗ್ಗೆ ಕಾರಣ ಬಹಿರಂಗಪಡಿಸಿಲ್ಲ. ಗಡಿಯಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ, ಅದರಲ್ಲೂ ಭಾರತ ಮತ್ತು ಚೀನಾ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಇದೆ. ಹೀಗೆ ಚೀನಾ ಹಾಗೂ ಭಾರತ ನಡುವೆ ಉದ್ಭವಿಸಿರುವ ಉದ್ವಿಗ್ನಿತೆ ವೇಳೆ ದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಜಿನ್‌ಪಿಂಗ್ ಪಾಲ್ಗೊಳ್ಳುತ್ತಿಲ್ಲ. ಅವರ ಬದಲಾಗಿ ಪ್ರಧಾನಿ ಲಿ ಕಿಯಾಂಗ್‌ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡೆದರೂ ಚೀನಾ ನಡೆ ಬಗ್ಗೆ ಕಾರಣ ಸ್ಪಷ್ಟವಾಗಿಲ್ಲ.

ಅಮೆರಿಕ ಅಧ್ಯಕ್ಷ ಬೈಡನ್ ಬೇಸರ

ಜಗತ್ತಿನಾದ್ಯಂತ ಈಗ ಒಂದೇ ಚರ್ಚೆ ಅದು ಜಿ20 ಶೃಂಗಸಭೆಯ ಬಗ್ಗೆ. ಇಡೀ ಪ್ರಪಂಚವೇ ಭಾರತದ ಕಡೆ ಗಮನ ಇಟ್ಟು ಕೂತಿದೆ. ಆದರೆ ಭಾರತದಲ್ಲಿ ನಡೆಯುತ್ತಿರುವ ಮಹತ್ವದ ಸಭೆಗೆ ಚೀನಾ ಅಧ್ಯಕ್ಷರು ಬರಲ್ಲ ಅನ್ನೋದು ಗ್ಯಾರಂಟಿ ಆಗಿದೆ. ಈ ಹಿನ್ನೆಲೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ನನಗೆ ಇದರಿಂದ ಬೇಸರವಾಗಿದೆ. ಆದರೆ ನಾನು ಅವರನ್ನು ನೋಡಿಯೇ ಬರುತ್ತೇನೆ ಎಂದಿದ್ದಾರೆ ಬೈಡನ್. ಈ ನಡುವೆ ಅಮೆರಿಕ ಹಾಗೂ ಚೀನಾ ಸಂಬಂಧವು ಹಳಸಿ ಹೋಗುತ್ತಿದೆ. ಹೀಗಾಗಿ ಅಮೆರಿಕ ಅಧ್ಯಕ್ಷರು ಭಾರತದಲ್ಲಿ ಜಿ20 ಸಭೆ ಸಂದರ್ಭದಲ್ಲೇ ಚೀನಾ ಅಧ್ಯಕ್ಷರ ಜತೆ ಸಭೆಗೆ ಪ್ಲ್ಯಾನ್ ಮಾಡಿದ್ದರು ಎನ್ನಲಾಗಿತ್ತು.

ಯಾವ ದೇಶಗಳ ನಾಯಕರು ಬರ್ತಾರೆ?

ಇನ್ನು ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಬಲಶಾಲಿ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸುತ್ತಾರೆ. ಈ ಪೈಕಿ ಅಮೆರಿಕ ಅಧ್ಯಕ್ಷ ಬೈಡನ್, ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರಾನ್, ಆಸ್ಟ್ರೇಲಿಯಾ ಪ್ರಧಾನಿ ಆಂಥೊಣಿ ಆಲ್ಬನೆಸ್‌, ಜರ್ಮನ್ ಚಾನ್ಸಲರ್‌ ಒಲಾಫ್‌ ಸ್ಕೋಲ್ಜ್‌, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಷಿದಾ ಹಾಗೂ ಬ್ರಜಿಲ್ ಅಧ್ಯಕ್ಷ ಲ್ಯೂಜ್‌ ಇನಾಸಿಯೊ ಲುಲಾ ಡಿಸಿಲ್ವಾ ಸೇರಿದಂತೆ ಮತ್ತಿತರರು ಹಾಜರಾಗಿ ಚರ್ಚೆ ನಡೆಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+