ಆಸ್ಟ್ರೇಲಿಯಾದಿಂದ ಗೋಮಾಂಸ ಆಮದಿಗೆ ಚೀನಾ ತಡೆ
ಬೀಜಿಂಗ್, ಆಗಸ್ಟ್ 28: ಆಸ್ಟ್ರೇಲಿಯಾದಿಂದ ಆಮದಾಗುತ್ತಿದ್ದ ಗೋಮಾಂಸಕ್ಕೆ ಚೀನಾ ತಡೆಯೊಡ್ಡಿದೆ. ಆಸ್ಟ್ರೇಲಿಯಾದ ಜಾನ್ ಡೀ ವಾರ್ವಿಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ತರಿಸಿಕೊಳ್ಳುತ್ತಿದ್ದ ಗೋಮಾಂಸದಲ್ಲಿ ಮದ್ದಿನ ಅಂಶ ಪತ್ತೆಯಾಗಿತ್ತು.
Recommended Video
ಚೀನಾ ಕೈಗೊಂಡಿರುವ ಕ್ರಮ ಸರಿ ಇದೆ. ಕಾನೂನು ಬದ್ಧವಾಗಿಯೂ ಇದೆ. ಗೋಮಾಂಸದಲ್ಲಿ ಮದ್ದಿನ ಅಂಶ ಹೇಗೆ ಸೇರ್ಪಡೆಯಾಗಿದೆ ಎಂಬುದನ್ನು ಪತ್ತೆ ಹೆಚ್ಚುವ ಕೆಲಸಕ್ಕೆ ಕೈಹಾಕಲಾಗಿದೆ.
ರಾಸುಗಳಿಗೆ ನೀಡುವ ಆಹಾರದಲ್ಲಿ ಅದು ಸ್ವಾಭಾವಿಕವಾಗಿ ಸೇರ್ಪಡೆಯಾಗುವ ಸಾಧ್ಯತೆಯೂ ಇದೆ. ಈ ಕುರಿತು ಬೀಜಿಂಗ್‌ನ ಅಧಿಕಾರಿಗಳೊಂದಿಗೆ ಮಾತುಕತೆಯೂ ನಡೆದಿದೆ.

ಈ ಉಂಟಾಗಿರುವ ಬಿಕ್ಕಟ್ಟನ್ನು ಶೀಘ್ರವೇ ಶಮನಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಆಸ್ಟ್ರೇಲಿಯಾದ ಕೃಷಿ ಸಚಿವ ಡೇವಿಡ್ ಲಿಟಲ್ ಪ್ರೌಡ್ ತಿಳಿಸಿದ್ದಾರೆ.
ಜಾನ್ ಡೀ ವಾರ್ವಿಕ್ ಸಂಸ್ಥೆ ಪೂರೈಕೆ ಮಾಡುತ್ತಿದ್ದ ಗೋಮಾಂಸದಲ್ಲಿ ಕ್ಲೋರಾಮ್ ಪೆನಿಕಲ್ ಎಂಬ ಮದ್ದಿನ ಅಂಶ ಪತ್ತೆಯಾಗಿದೆ. ಅವುಗಳನ್ನು ನಾಶಪಡಿಸಲಾಗಿದೆ ಎಂದು ಚೀನಾದ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ ಹೇಳಿದೆ.












Click it and Unblock the Notifications