ಮತ್ತೊಂದು ಮಹಾಯುದ್ಧ ಶುರುವಾಯ್ತಾ? ಚೀನಾ ಮಾಡಿದ್ದೇನು?
ಪ್ರಪಂಚ ಈಗ ಮತ್ತೊಂದು ವಿನಾಶದ ಕಡೆಗೆ ಹೆಜ್ಜೆ ಹಾಕುತ್ತಿದ್ದು, ದಿನದಿಂದ ದಿನಕ್ಕೆ ರಕ್ತ & ಯುದ್ಧದ ಹಸಿವು ಮನುಷ್ಯನಿಗೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಈಗಾಗಲೇ 2 ಘೋರ ಯುದ್ಧಗಳು ನಡೆಯುತ್ತಿವೆ. ಇದೇ ಸಮಯದಲ್ಲಿ ಈಗ ಚೀನಾ ಕೈಗೊಂಡ ಕ್ರಮ ಭಯ ಹುಟ್ಟಿಸಿದ್ದು, ಮತ್ತೊಂದು ಮಹಾಯುದ್ಧದ ಆತಂಕವನ್ನು ಹುಟ್ಟುಹಾಕಿದೆ.
ಹೌದು, ತೈವಾನ್ ವಿಚಾರವಾಗಿ ಮತ್ತೊಮ್ಮೆ ಚೀನಾ ಉಗ್ರ ಕ್ರಮ ಕೈಗೊಂಡಿದೆ. ಅದ್ರಲ್ಲೂ ಇಷ್ಟುದಿನ ತೈವಾನ್ ದ್ವೀಪ ರಾಷ್ಟ್ರದ ಮೇಲೆ ಚೀನಾ ತನ್ನ ಹಕ್ಕು ಪ್ರತಿಪಾದನೆ ಮಾಡ್ತಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಚೀನಾ, ಪಾಶ್ಚಿಮಾತ್ಯ ದೇಶಗಳಿಗೂ ಶಾಕ್ ಕೊಡುವ ಜೊತೆಗೆ ತೈವಾನ್‌ಗೂ ಆಘಾತ ನೀಡಿದೆ. ಇದು ಮತ್ತೊಂದು ಯುದ್ಧದ ಭಯವನ್ನ ಈಗ ಹುಟ್ಟುಹಾಕಿದೆ. ಹಾಗಾದ್ರೆ ಅಸಲಿಗೆ ಆಗಿದ್ದಾದರೂ ಏನು? ಚೀನಾದ ನಡೆಯಿಂದ ಈಗ ಯುದ್ಧದ ಆತಂಕ ಶುರುವಾಗಿರುವುದು ಏಕೆ? ಬನ್ನಿ ತಿಳಿಯೋಣ.

ಮಿಲಿಟರಿ ವಿಮಾನ, ಹಡಗುಗಳಿಂದ ಅಟ್ಯಾಕ್?
ಅಂದಹಾಗೆ ಈಗ ಚೀನಾದ 7 ಮಿಲಿಟರಿ ವಿಮಾನಗಳು & 5 ಯುದ್ಧನೌಕೆಗಳು ತೈವಾನ್ ಸುತ್ತಲು ಕಾರ್ಯಾಚರಣೆ ನಡೆಸಿದೆ ಎಂದು ಆರೋಪ ಮಾಡಲಾಗಿದೆ. ಈ ಕುರಿತು ತೈವಾನ್‌ನ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದ್ದು, ಹೀಗೆ 7 ಮಿಲಿಟರಿ ವಿಮಾನಗಳಲ್ಲಿ ಒಂದು ವಿಮಾನವನ್ನ ತೈವಾನ್ ಜಲಸಂಧಿ ಮಧ್ಯ ರೇಖೆ ದಾಟಿಸಲಾಗಿದೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಮತ್ತೊಮ್ಮೆ ತೈವಾನ್ ಬಳಿ ಭಯದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಇದು ಭಾರಿ ಆತಂಕ ಸೃಷ್ಟಿ ಮಾಡಿದೆ. ಹಾಗಾದ್ರೆ ಚೀನಾದ ಈ ಕ್ರಮಕ್ಕೆ ತೈವಾನ್ ಉತ್ತರ ಹೇಗಿತ್ತು?
ತೈವಾನ್ ಮಿಲಿಟರಿ ಕೂಡ ಅಲರ್ಟ್
ಇನ್ನು ಚೀನಾ ಸೇನೆ ಹೀಗೆ ತೈವಾನ್ ಸುತ್ತುವರಿದ ಆರೋಪದ ಬೆನ್ನಲ್ಲೇ, ತೈವಾನ್ ಮಿಲಿಟರಿ ಕೂಡ ಅಲರ್ಟ್ ಆಗಿದೆ. ಯುದ್ಧ ಗಸ್ತು ವಿಮಾನ, ಸೇನಾ ಹಡಗು ಹಾಗೂ ಕರಾವಳಿ ಕ್ಷಿಪಣಿ ವ್ಯವಸ್ಥೆ ನಿಯೋಜಿಸಿ ಅಲರ್ಟ್ ಆಗಿದೆ ತೈವಾನ್. ಆಗಾಗ ಇದೇ ರೀತಿ ಎರಡೂ ದೇಶಗಳು, ತಿಕ್ಕಾಟ ನಡೆಸುತ್ತವೆ. ಹೀಗೆ ತಿಕ್ಕಾಟ ನಡೆದ ನಂತರ ಮತ್ತೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತೆ, ಆದರೆ ಈ ಬಾರಿ ತಿಕ್ಕಾಟ ಹೆಚ್ಚಾಗುತ್ತಿದ್ದು ಆತಂಕ ಸೃಷ್ಟಿ ಮಾಡಿದೆ. ಈಗಾಗಲೇ ಉಕ್ರೇನ್ & ರಷ್ಯಾ ನಡುವೆ ಘೋರ ಯುದ್ಧ ನಡೆಯುತ್ತಿದ್ದು, ಇಸ್ರೇಲ್ & ಹಮಾಸ್ ಕೂಡ ಬಡಿದಾಡ್ತಾ ಇವೆ. ಇದೇ ಸಮಯದಲ್ಲಿ ಚೀನಾ & ತೈವಾನ್ ಕೂಡ ಯುದ್ಧಕ್ಕೆ ಇಳಿದರೆ ಕಥೆ ಏನು?












Click it and Unblock the Notifications