China & Taiwan: ಬಂತು.. ಬಂತು.. ಮತ್ತೊಂದು ಯುದ್ಧ ಶುರುವಾಯ್ತು?
ಅಯ್ಯಪ್ಪಾ ದೇವರೆ ಸಾಕಾಗಿ ಹೋಯ್ತು.. ಅರೆರೆ ಈ ಮಾತು ಹೇಳ್ತಾ ಇರೋದು ನಾವಲ್ಲ ಇಡೀ ಜಗತ್ತು. ಯಾಕಂದ್ರೆ ಜಗತ್ತಿನಲ್ಲಿ ಒಂದೊಂದೇ ಯುದ್ಧಗಳು ನಾಯಿ ಕೊಡೆ ರೀತಿಯೇ ಮೊಳಕೆಯೊಡೆದು, ಭೂಮಿ ತಾಯಿಯ ಎದೆಗೆ ಬೆಂಕಿ ಹಚ್ಚುತ್ತಿವೆ. ರಷ್ಯಾ & ಉಕ್ರೇನ್, ಗಾಜಾ & ಇಸ್ರೇಲ್, ಲೆಬನಾನ್ & ಇಸ್ರೇಲ್, ಇರಾನ್ & ಇಸ್ರೇಲ್ ಗಲಾಟೆ ನಡುವೆ ಈಗ ಚೀನಾ & ತೈವಾನ್ ನಡುವೆ ಕೂಡ ಬೆಂಕಿ ಬಿದ್ದಿದೆ. ಹಾಗಾದ್ರೆ ಏಷ್ಯಾದಲ್ಲೂ ಯುದ್ಧ ಶುರುವಾಯ್ತಾ?
ಹೌದು, ಇದೀಗ ಚೀನಾ ಕೂಡ ಗರಂ ಆಗಿದೆ. ಒಂದು ಕಡೆ ಮಧ್ಯಪ್ರಾಚ್ಯ & ಇನ್ನೂ ಒಂದು ಕಡೆ ಯುರೋಪ್ ದೇಶದಲ್ಲಿ ಯುದ್ಧ ನಡೆಯುವ ಸಮಯದಲ್ಲೇ ಏಷ್ಯಾದ ಭಾಗದಲ್ಲೂ ಇದೇ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ನೋಡ ನೋಡುತ್ತಲೇ ಏಷ್ಯಾ, ಯುದ್ಧದ ಕೆನ್ನಾಲಿಗೆಗೆ ಸಿಲುಕುವ ಭಯ ಕಾಡುತ್ತಿದೆ. ಹಾಗಾದ್ರೆ ಈ ಭಯ ಯಾಕೆ? ಚೀನಾ ಈಗ ತೈವಾನ್ ಮೇಲೆ ನಿಜವಾಗಿಯೂ ಯುದ್ಧ ಸಾರುತ್ತಾ? ತೈವಾನ್ ವಿರುದ್ಧ ಚೀನಾ ಯುದ್ಧ ಸಾರಿದರೆ ಅಮೆರಿಕ ಏನು ಮಾಡಬಹುದು?

ಯುದ್ಧ ಸಿದ್ಧತೆಗೆ ಮಹತ್ವದ ಆದೇಶ?
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇದೀಗ ಯುದ್ಧ ಸಿದ್ಧತೆ ನಡೆಸಲು ಚೀನಾ ಮಿಲಿಟರಿಗೆ ಆದೇಶ ನೀಡಿದ್ದಾರೆ. ಅದರಲ್ಲೂ ತೈವಾನ್ ಸುತ್ತಲೂ ಚೀನಾ ಸೇನೆ ಮಿಲಿಟರಿ ಡ್ರಿಲ್ ನಡೆಸಿದ ನಂತರ ಈ ರೀತಿಯ ಸ್ಫೋಟಕ & ಸಂಚಲನ ಸೃಷ್ಟಿ ಮಾಡುವ ಆದೇಶವು ಹೊರ ಬಿದ್ದಿದೆ. ಒಂದು ಕಡೆ ತೈವಾನ್ ನಮ್ಮದೇ ದೇಶದ ಭಾಗ ಎಂದು ಚೀನಾ ಈ ಮೊದಲಿನಿಂದ ಕೂಡ ಹೇಳಿಕೊಂಡು ಬರುತ್ತಿದೆ. ಹಾಗೇ ಇನ್ನೊಂದು ಕಡೆ ಈ ಬಗ್ಗೆ ಅಮೆರಿಕ ಕೂಡ ಚೀನಾ ಜೊತೆಗೆ ಕಿರಿಕ್ ತೆಗೆಯುತ್ತಿದೆ. ಇಷ್ಟೆಲ್ಲದರ ನಡುವೆ ಹೊಸ ಸ್ಫೋಟಕ ವಿಚಾರ ಬಯಲಾಗಿದೆ.
ವಿಶ್ವಸಂಸ್ಥೆ ಮುಂದೆ ಏನು ಮಾಡುತ್ತೆ?
ಒಟ್ನಲ್ಲಿ, ಈಗಾಗಲೇ ಯುರೋಪ್ & ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧಗಳು ಧಗಧಗಿಸುತ್ತಿವೆ. ಈ ಸಮಸ್ಯೆ ನಡುವೆ ಏಷ್ಯಾ ಭಾಗದಲ್ಲೂ ಯುದ್ಧ ಶುರುವಾದರೆ ಹೇಗೆ? ಎಂಬ ಭಯ ಕೂಡ ಆವರಿಸಿದೆ. ಮತ್ತೊಂದು ಕಡೆ ತೈವಾನ್ ಕೂಡ ಈ ವಿಚಾರದಲ್ಲಿ ಅಮೆರಿಕ & ಪಾಶ್ಚಿಮಾತ್ಯ ದೇಶಗಳ ಸಹಾಯ ಪಡೆಯಲು ಮುಂದಾಗುವ ನಿರೀಕ್ಷೆ ಇದ್ದು, ಹೀಗೆ ಮಾಡಿದರೆ ಇನ್ನೊಂದು ಸಮಸ್ಯೆ ಗ್ಯಾರಂಟಿ ಎಂಬ ಆರೋಪ ಮಾಡಲಾಗುತ್ತಿದೆ. ಅಲ್ಲದೆ ಭಯದ ವಾತಾವರಣ ಕೂಡ ಆವರಿಸಿದೆ. ಹೀಗಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿರುವ ವಿಶ್ವಸಂಸ್ಥೆ ಮುಂದೆ ಇದರ ಕುರಿತು ಯಾವ ರೀತಿ ನಿರ್ಧಾರ ಕೈಗೊಳ್ಳುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications