ಪರೀಕ್ಷೆಯಲ್ಲಿ ನಕಲು: ಜೀವ ಕಳೆದುಕೊಂಡ ಬಾಲಕಿ

ಇಲ್ಲಿನ Jumeirah Lakes Towers ಕಳೆದ ವಾರ ಈ ದುರಂತ ಸಂಭವಿಸಿದ್ದು, ಅಪಾರ್ಟ್ ಮೆಂಟಿನ ಕೆಲಸದಾಳು ಮಾಹಿತಿ ನೀಡಿದ ಮೇಲಷ್ಟೇ ಬಾಲಕಿಯ ಅಪ್ಪ-ಅಮ್ಮನಿಗೆ ತಮ್ಮ ಮಗು ಮೃತಪಟ್ಟಿರುವುದು ತಿಳಿದುಬಂದಿದೆ.
ಮಗಳೇ, ಚೆನ್ನಾಗಿ ಓದಿಕೋ ಎಂದು ಬುದ್ಧಿವಾದ ಹೇಳಿವ ಭರದಲ್ಲಿ ತುಸು ಹೆಚ್ಚೇ ಬುದ್ಧಿವಾದ ಹೇಳಿದೆ ಎಂದು ಬಾಲಕಿಯ ಅಪ್ಪ ದುಬೈ ಪೊಲೀಸರಿಗೆ ತಿಳಿಸಿರುವುದಾಗಿ Khaleej Times ಪತ್ರಿಕೆ ವರದಿ ಮಾಡಿದೆ.
ಆತ್ಮಹತ್ಯೆ ಮಾಡಿಕೊಂಡ ದಿನ ಬಾಲಕಿಯು ಶಾಲೆಯಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ನಕಲು ಮಾಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಬಾಲಕಿಯನ್ನು ಶಿಕ್ಷಕಿ ಸಹ ದಂಡಿಸಿ, ಮತ್ತೊಮ್ಮೆ ಇಂತಹ ಅಕ್ರಮ ಕಂಡುಬಂದರೆ ಮನೆಗೆ ಕಳಿಸಿಬಿಡುವದಾಗಿ ಎಚ್ಚರಿಸಿದ್ದಾರೆ.
ಇದರಿಂದ ಮನೆಗೆ ಬಂದ ನಂತರ ಬಾಲಕಿ ತುಂಬಾನೆ ಖಿನ್ನತೆಗೊಳಗಾಗಿದ್ದಳು. ಆಗ ಮಗಳು ಪರೀಕ್ಷೆಯಲ್ಲಿ ಕಾಪಿ ಮಾಡಿರುವುದು ಕಿವಿಗೆ ಬಿದ್ದಿದೆ. ಇದರಿಂದ ಕೋಪಗೊಂಡ ಅಪ್ಪ, ಮಗಳನ್ನು ವಿಚಾರಿಸಿಕೊಂಡಿದ್ದಾರೆ. ಅದರಿಂದ ಮತ್ತಷ್ಟು ಬೇಸತ್ತ ಮಗು, ತನ್ನ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ. ಮಗಳು ಸಮಧಾನ ಮಾಡಿಕೊಳ್ಳುತ್ತಿರಬಹುದು ಎಂದು ಅಪ್ಪ-ಅಮ್ಮ ಸುಮ್ಮನಾಗಿದ್ದಾರೆ.
ಆದರೆ ಯಾವುದೋ ಮಾಯದಲ್ಲಿ ಮನೆಯಿಂದ ಹೊರಬಿದ್ದ ಬಾಲಕಿ 17ನೇ ಅಂತಸ್ತಿನಿಂದ ಹಾರಿಬಿಟ್ಟು ಪ್ರಾಣವನ್ನೇ ಬಿಟ್ಟಿದ್ದಾಳೆ. ಈ ಘಟನೆಯ ನೀತಿ ಪಾಠ ಏನು?












Click it and Unblock the Notifications