ಓರ್ವ ವಿದ್ಯಾರ್ಥಿಗಾಗಿ ವಿಮಾನ ಚಲಾಯಿಸಿದ ಬ್ರಿಟಿಷ್ ಏರ್‌ವೇಸ್

ಕೇವಲ ಒಂದೇ ಪ್ರಯಾಣಿಕನಿದ್ದಾನೆ ಎಂದು ತಿಳಿದಿದ್ದರೂ, ಆ ಓರ್ವ ಪ್ರಯಾಣಿಕನಿಗಾಗಿ ವಿಮಾನವನ್ನು ಚಲಾಯಿಸಿ ಬ್ರಿಟಿಷ್ ಏರ್‌ವೇಸ್ ಮೆಚ್ಚುಗೆಗೆ ಪಾತ್ರವಾಗಿದೆ.

ಇತ್ತೀಚೆಗೆ ಇಂಗ್ಲೆಂಡ್‌ನಿಂದ ಸೆಂಟ್ರಲ್ ಫ್ಲೋರಿಡಾಗೆ ಬ್ರಿಟಿಷ್ ಏರ್‌ವೇಸ್‌ನಲ್ಲಿ ಪ್ರಯಾಣ ಬೆಳೆಸಿದವರಲ್ಲಿ ಕೈ ಫೋರ್ಸಿತ್ ಅದೃಷ್ಟಶಾಲಿ ಪ್ರಯಾಣಿಕನೆಂದೇ ಹೇಳಬಹುದು.

ಕೈ ಫೋರ್ಸಿತ್ ಮಾತನಾಡಿ, ವಿಮಾನದಲ್ಲಿ ನಾನೊಬ್ಬನೇ ಏಕಿದ್ದೇನೆ, ಏನು ನಡೆಯುತ್ತಿದೆ ಎಂಬುದು ನನಗೆ ತಿಳಿಯುತ್ತಿರಲಿಲ್ಲ, ಇಡೀ ವಿಮಾನದಲ್ಲಿ ನಾನೊಬ್ಬನೇ ಇದ್ದೆ, ಫ್ಲೈಟ್ ಅಟೆಂಡೆಂಟ್ ಸ್ವಲ್ಪ ಸಮಯದ ಬಳಿಕ ಬಗೆಬಗೆಯ ಆಹಾರ, ತಿಂಡಿ-ತಿನಿಸುಗಳು, ಅನಿಯಮಿತ ಪಾನೀಯಗಳನ್ನು ನನಗೆ ನೀಡಿದರು ಮಾಹಿತಿ ನೀಡಿದ್ದಾರೆ.

Central Florida Student Ends Up Being Only Passenger On 9-Hour Transatlantic Flight

ಜನವರಿ 9ರಂದು 19 ವರ್ಷದ ಕಾಲೇಜು ವಿದ್ಯಾರ್ಥಿ ವಿಮಾನದಲ್ಲಿ ಒಬ್ಬರೇ 9 ಗಂಟೆಗಳ ಕಾಲ ಪ್ರಯಾಣ ಮಾಡಿದ್ದರು. ಕಾಲೇಜಿಗೆ ರಜೆ ಇದ್ದ ಕಾರಣ ತನ್ನ ದೇಶಕ್ಕೆ ಹಿಂದಿರುಗುತ್ತಿದ್ದರು.

ಅಂದು ವಿಮಾನದಲ್ಲಿ ಅವರೊಬ್ಬರೇ ಇದ್ದರು, ಅವರು ಫರ್ಸ್ಟ್‌ ಕ್ಲಾಸ್ ಬಿಟ್ಟು ಎಲ್ಲಿ ಬೇಕಾದರೂ ಕುಳಿತುಕೊಳ್ಳಲು ಅನುಮತಿ ನೀಡಲಾಗಿತ್ತು. ಆದರೆ ಅಂದು ಅವರೊಬ್ಬರೇ ಪ್ರಯಾಣಿಕರು ಮಾತ್ರ ವಿಮಾನದಲ್ಲಿ ಏಕಿದ್ದರು ಎಂಬುದಕ್ಕೆ ಉತ್ತರ ಅವರಿಗಿನ್ನು ಸಿಕ್ಕಿಲ್ಲ. ಆದರೂ ಅವರೇ ಅದೃಷ್ಟಶಾಲಿ.

ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ಯಾರೂ ಕೂಡ ವಿಮಾನದಲ್ಲಿ ತೆರಳಲು ಮುಂದೆ ಬರುತ್ತಿಲ್ಲವೋ, ಅಥವಾ ಅಂದು ಮಾತ್ರ ನಾನೊಬ್ಬನೇ ಇದ್ದೆನೋ ತಿಳಿದಿಲ್ಲ ಎಂದಿದ್ದಾರೆ.

ಯಾವುದೇ ಪ್ರಯಾಣಿಕರಿಲ್ಲದ ಕಾರಣ , ಕೈ ಅವರು ಸ್ವಲ್ಪ ಸಮಯದವರೆಗೆ ವಿಮಾನದಲ್ಲಿ ಆಹಾರಗಳನ್ನು ಶೇಖರಿಸಿಟ್ಟಿರುವ ಶೇಖರಣಾ ಘಟಕಗಳಲ್ಲಿ ಇರುವ ಎಲ್ಲಾ ವಸ್ತುಗಳನ್ನು ನೋಡಿ, ಮಾಹಿತಿ ಪಡೆದರು.

ಬಳಿಕ ಅವರಿಗೆ ಯಾವ ಆಸನದಲ್ಲಿ ಬೇಕಾದರೂ ಕುಳಿತುಕೊಳ್ಳಬಹುದು ಎಂದು ವಿಮಾನ ಸಿಬ್ಬಂದಿ ತಿಳಿಸಿದ್ದರು. ಆದರೆ ಅದನ್ನು ಮಾಡುವುದು ನಿಯಮಗಳಿಗೆ ವಿರುದ್ಧವೆನಿಸಿ ನಾನು ನನ್ನ ಸೀಟಿನಲ್ಲೇ ಕುಳಿತುಕೊಂಡೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+