ಜೈಲಿನೊಳಕ್ಕೆ ಮಾದಕವಸ್ತು ಕಳ್ಳಸಾಗಣೆ: ಬೆಕ್ಕು ಬಂಧನ

ಎಂದಿನಂತೆ ಮಾರ್ಜಾಲವು ಮಾಲ್ಡೋವಾ ಜೈಲಿನೊಳಕ್ಕೆ ಪ್ರವೇಶಿಸಿತಾದರೂ ಸಿಬ್ಬಂದಿಗೆ ಅದರ ಮೇಲೆ ಯಾಕೋ ಅನುಮಾನ ಬಂದಿದೆ. ಅದರ ಬೆಕ್ಕನ್ನು ಹೊಡಿದು ಅದರ ಕತ್ತನ್ನು ತಡಕಾಡಿದಾಗ marijuana ಮಾದಕವಸ್ತುವಿದ್ದ 2 ಪೊಟ್ಟಣಗಳು ಕಂಡುಬಂದಿವೆ.
ಸ್ಥಳೀಯ ಗ್ರಾಮದಲ್ಲಿರುವ ದುಷ್ಕರ್ಮಿಗಳು ಯಾರಿಗೂ ಅನುಮಾನ ಬಾರದಂತೆ ಬೆಕ್ಕನ್ನು ಬಳಸಿಕೊಂಡು ಜೈಲಿನೊಳಕ್ಕೆ ಮಾದಕ ವಸ್ತುವನ್ನು ಸಾಗಿಸುವ ಕೆಲಸದಲ್ಲಿ ನಿರತರಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅದರೆ ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಇಂತಹ ಪ್ರಸಂಗಗಳು ನಡೆದಿವೆ ಎಂದು Department of Penitentiary Institutions ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ಮೊಬೈಲ್ ಫೋನ್ ಸುತ್ತಿ, ಬೆಕ್ಕನ್ನು ಇದೇ ರೀತಿ ಜೈಲಿನೊಳಕ್ಕೆ ಕಳುಹಿಸಲಾಗಿತ್ತು ಎಂದು ಜೈಲಿನ ಸಿಬ್ಬಂದಿ ತಿಳಿಸಿದ್ದಾರೆ. (ಚಿತ್ರ- www.couriermail.com)












Click it and Unblock the Notifications