Get Updates
Get notified of breaking news, exclusive insights, and must-see stories!

Cash Crunch: ಶ್ರೀಲಂಕಾದ ದೇಶೀಯ ತೈಲ ಮಾರುಕಟ್ಟೆಯಲ್ಲಿ ಚೀನಾದ ಪ್ರವೇಶ, ಸಿನೊಪೆಕ್ ಜೊತೆ ಲಂಕಾ ಒಪ್ಪಂದ

ನಗದು ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ, ಚೀನಾದ ತೈಲ ಕಂಪನಿ ಸಿನೊಪೆಕ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ಚೀನಾ ಶ್ರೀಲಂಕಾದ ತೈಲ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಪೆಟ್ರೋಲಿಯಂ ಉತ್ಪನ್ನಗಳ ಪ್ರಮುಖ ಸಂಗ್ರಹಣೆ, ವಿತರಣೆ ಮತ್ತು ಮಾರಾಟದ ಕುರಿತು ಚೀನಾದ ತೈಲ ಮತ್ತು ಅನಿಲ ಕಂಪನಿ ಸಿನೊಪೆಕ್‌ನೊಂದಿಗೆ ದ್ವೀಪ ರಾಷ್ಟ್ರವಾದ ಶ್ರೀಲಂಕಾ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಹೇಳಿದೆ. ಸದ್ಯ ಶ್ರೀಲಂಕಾದ ದೇಶೀಯ ತೈಲ ಮಾರುಕಟ್ಟೆ ಚೀನಾದ ಸಿನೊಪೆಕ್ ಕಂಪನಿ ಅಧೀನದಲ್ಲಿದೆ.

Lankas deal with Chinas Sinopec

ಶ್ರೀಲಂಕಾದ ದೇಶೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಆಮದು, ಸಂಗ್ರಹಣೆ, ವಿತರಣೆ ಮತ್ತು ಮಾರಾಟಕ್ಕಾಗಿ 20 ವರ್ಷಗಳ ಕಾಲ ಕಾರ್ಯನಿರ್ವಹಿಸಲು ಚೀನಾದ ಸಿನೊಪೆಕ್ ತೈಲ ಕಂಪನಿಗೆ ಶ್ರೀಲಂಕಾ ಸರ್ಕಾರವು ಪರವಾನಗಿ ನೀಡಿದೆ ಎಂದು ವರದಿ ಹೇಳುತ್ತದೆ.

ವರದಿಯ ಪ್ರಕಾರ, ಮಾರ್ಚ್ ತಿಂಗಳಲ್ಲಿ ತೈಲ ಮಾರುಕಟ್ಟೆಯಲ್ಲಿ ಉದಾರೀಕರಣದ ಬಗ್ಗೆ ಚೀನಾದ ಸರ್ಕಾರಿ ತೈಲ ಕಂಪನಿಯು ಪ್ರಸ್ತಾಪವನ್ನು ಮಾಡಿತ್ತು. ಅದನ್ನು ಈಗ ಶ್ರೀಲಂಕಾ ಸರ್ಕಾರ ಒಪ್ಪಿಕೊಂಡಿದೆ. ಮಾತ್ರವಲ್ಲದೆ ಮಾಧ್ಯಮ ವರದಿಗಳ ಪ್ರಕಾರ, ಶ್ರೀಲಂಕಾದ ಚಿಲ್ಲರೆ ಮಾರುಕಟ್ಟೆಯನ್ನು ಪ್ರವೇಶಿಸಲು ಅಮೇರಿಕನ್ ಮತ್ತು ಆಸ್ಟ್ರೇಲಿಯಾದ ತೈಲ ಕಂಪನಿಗಳಿಗೂ ಸಹ ಅನುಮತಿಸಲಾಗಿದೆ.

ದ್ವೀಪ ರಾಷ್ಟ್ರವಾದ ಶ್ರೀಲಂಕಾದಲ್ಲಿನ ಚಿಲ್ಲರೆ ಇಂಧನ ಮಾರುಕಟ್ಟೆಯು 2003 ರವರೆಗೆ ದೇಶದ ರಾಜ್ಯ ತೈಲ ಕಂಪನಿಯಾದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (CPC) ನಿಂದ ಏಕಸ್ವಾಮ್ಯವನ್ನು ಹೊಂದಿತ್ತು. ಆದರೆ, 2003 ರಲ್ಲಿ ಮೊದಲ ಬಾರಿಗೆ ಭಾರತದ ಇಂಡಿಯನ್ ಆಯಿಲ್ ಕಂಪನಿ (ಐಒಸಿ) ಶ್ರೀಲಂಕಾದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಯಿತು.

ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಕಚೇರಿ ವರದಿ ಪ್ರಕಾರ, ಸಿನೋಪೆಕ್ ಫ್ಯೂಯೆಲ್ ಆಯಿಲ್ ಲಂಕಾ ಲಿಮಿಟೆಡ್ ಮತ್ತು ಚೀನಾ ಮತ್ತು ಸಿಂಗಾಪುರದಲ್ಲಿರುವ ಅದರ ಮೂಲ ಕಂಪನಿಗಳು ದ್ವೀಪದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪ್ರಮುಖ ಸಂಗ್ರಹಣೆ, ವಿತರಣೆ ಮತ್ತು ಮಾರಾಟದ ಕುರಿತು ದೀರ್ಘಾವಧಿಯ ಒಪ್ಪಂದಗಳಿಗೆ ಸಹಿ ಹಾಕಿವೆ. ಇದಕ್ಕೆ ಸಂಬಂಧಿಸಿದಂತೆ ಕಂಪನಿಯೊಂದಿಗೆ ಮಾತುಕತೆ ಪೂರ್ಣಗೊಂಡಿದೆ.

ಶ್ರೀಲಂಕಾದಲ್ಲಿ ಇಂಧನ ಚಿಲ್ಲರೆ ಮಾರುಕಟ್ಟೆಗೆ ಪ್ರವೇಶಿಸಲು ಶೆಲ್ ಪಿಎಲ್‌ಸಿ ಸಹಯೋಗದೊಂದಿಗೆ ಸಿನೊಪೆಕ್, ಯುನೈಟೆಡ್ ಪೆಟ್ರೋಲಿಯಂ ಆಸ್ಟ್ರೇಲಿಯಾ ಮತ್ತು ಯುಎಸ್‌ಎಯ ಆರ್‌ಎಂ ಪಾರ್ಕ್‌ಗಳಿಗೆ ಪರವಾನಗಿ ನೀಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆದಾಗ್ಯೂ ಪಿಟಿಐ ವರದಿಯು, "ಇಲ್ಲಿಯವರೆಗೆ ಚೀನಾದ ಸಿನೊಪೆಕ್‌ನೊಂದಿಗೆ ಮಾತ್ರ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೂರು ಕಂಪನಿಗಳಿಗೆ ಕಾರ್ಯನಿರ್ವಹಿಸಲು ಪರವಾನಗಿ ನೀಡಲು ಇಂಧನ ಮತ್ತು ಖರೀದಿ ಸಮಿತಿಗಳು ಶಿಫಾರಸನ್ನು ಅನುಮೋದಿಸಿವೆ. 150 ಡೀಲರ್ ಚಾಲಿತ ಇಂಧನ ಕೇಂದ್ರಗಳನ್ನು ಹಂಚಲಾಗುತ್ತದೆ. ಪ್ರಸ್ತುತ ರಾಜ್ಯ ಇಂಧನ ಘಟಕವಾದ CPC ಯಿಂದ ನಡೆಸಲಾಗುತ್ತಿದೆ" ಎಂದಿದೆ.

ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ ತನ್ನ ತೊಂದರೆಗೀಡಾದ ಆರ್ಥಿಕತೆಯನ್ನು ಸಾಮಾನ್ಯಗೊಳಿಸಲು ಇನ್ನೂ ಹೆಣಗಾಡುತ್ತಿದೆ. ಅಧಿಕೃತ ಮಾಹಿತಿಯ ಪ್ರಕಾರ, ಶ್ರೀಲಂಕಾದ ಒಟ್ಟು ಸಾಲವು USD 83.6 ಬಿಲಿಯನ್ ಆಗಿದೆ, ಇದರಲ್ಲಿ ಬಾಹ್ಯ ಸಾಲ USD 42.6 ಶತಕೋಟಿ ಮತ್ತು ದೇಶೀಯ ಸಾಲ USD 42 ಶತಕೋಟಿ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+