ಕೋಸ್ಟ ರಿಕಾದಲ್ಲಿ ತುರ್ತು ಭೂಸ್ಪರ್ಶದ ವೇಳೆ ಇಬ್ಭಾಗವಾದ ಕಾರ್ಗೋ ವಿಮಾನ
ಕೋಸ್ಟ ರಿಕಾ (ಅಮೆರಿಕಾ) ಏಪ್ರಿಲ್ 8: ಕೋಸ್ಟ ರಿಕಾದಲ್ಲಿ ತುರ್ತು ಲ್ಯಾಂಡಿಂಗ್ ಸಮಯದಲ್ಲಿ ಕಾರ್ಗೋ ವಿಮಾನ ಗುರುವಾರ ಇಬ್ಭಾಗವಾದ ದುರಂತ ಸಂಭವಿಸಿದೆ. ಅಪಘಾತದಲ್ಲಿ ಸ್ಯಾನ್ ಜೋಸ್‌ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.
ಜರ್ಮನ್ ಲಾಜಿಸ್ಟಿಕ್ಸ್ DHL ನ ಹಳದಿ ಬಣ್ಣದ ವಿಮಾನ ಅಪಘಾತಕ್ಕೆ ಒಳಗಾಗಿದೆ. ತುರ್ತು ಲ್ಯಾಂಡಿಂಗ್ ಆಗುತ್ತಿದ್ದಂತೆ ಬೃಹತ್ ಹೊಗೆ ಹೊರಹೊಮ್ಮಿದೆ. ಕೂಡಲೇ ಅದು ಸ್ಥಗಿತಗೊಂಡಿದೆ. ಲ್ಯಾಂಡ್ ಆಗುತ್ತಿದ್ದಂತೆ ವಿಮಾನದ ಹಿಂದಿನ ಚಕ್ರಗಳು ರಸ್ತೆ ಬದಿ ಜಾರಿ ವಿಮಾನ ನಿಂತುಕೊಂಡಿದೆ. ಜೊತೆಗೆ ವಿಮಾನದಿಂದ ಹೊಗೆ ಬರಲು ಆರಂಭವಾಗಿದೆ. ಈ ಅಪಘಾತದಲ್ಲಿ ವಿಮಾನದ ಹಿಂಭಾಗ ಮುರಿದು ಹೋಗಿದೆ. ಘಟನೆಯ ದೃಶ್ಯಗಳು ವೈರಲ್ ಆಗಿವೆ.
A much clearer version of the crash landing has emerged!
— AviationSource (@AvSourceNews) April 7, 2022
Source: Unknown#DHL #AvGeek pic.twitter.com/FCYbgFaW0H
ಇಬ್ಬರು ಸಿಬ್ಬಂದಿಗಳು ವಿಮಾನದಲ್ಲಿ ಸುರಕ್ಷಿತವಾಗಿರುವುದು ತಿಳಿದು ಬಂದಿದೆ ಎಂದು ಕೋಸ್ಟರಿಕಾದ ಅಗ್ನಿಶಾಮಕ ದಳದ ಮುಖ್ಯಸ್ಥ ಹೆಕ್ಟರ್ ಚೇವ್ಸ್ ಹೇಳಿದ್ದಾರೆ. ಘಟನೆ ನಡೆದ ಬಳಿಕ ವಿಮಾನವನ್ನು ತಪಾಸಣೆಗಾಗಿ ಕಳುಹಿಸಲಾಗಿದೆ ಎಂದು ರೆಡ್ ಕ್ರಾಸ್ ಕಾರ್ಯಕರ್ತ ಗೈಡೋ ವಾಸ್ಕ್ವೆಜ್ ಹೇಳಿದ್ದಾರೆ.

ಸ್ಯಾನ್ ಜೋಸ್‌ನ ಹೊರಗಿನ ಜುವಾನ್ ಸಾಂತಾಮಾರಿಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಬೋಯಿಂಗ್-757 ವಿಮಾನ 25 ನಿಮಿಷಗಳ ನಂತರ ಯಾಂತ್ರಿಕ ಕಾರಣದಿಂದಾಗಿ ತುರ್ತು ಲ್ಯಾಂಡಿಂಗ್‌ಗಾಗಿ 10:30 am (1630 GMT)ಕ್ಕೆ ಕೋಸ್ಟರಿಕಾದಲ್ಲಿ ಲ್ಯಾಂಡ್ ಆಗಿದೆ. ಬಳಿಕ ಈ ಅಪಘಾತ ಸಂಭವಿಸಿದೆ. ಜೊತೆಗೆ ಘಟನೆಯ ಬಳಿಕೆ ವಿಮಾನ ನಿಲ್ದಾಣವನ್ನು ಸಂಜೆ 6:00 ಗಂಟೆಯವರೆಗೆ ಮುಚ್ಚಲಾಗಿತ್ತು.
#BREAKING #NEWS | A DHL Boeing 757 Freighter has crashed at Juan Santamaria Airport in Costa Rica earlier today.
— AviationSource (@AvSourceNews) April 7, 2022
Read more at AviationSource!https://t.co/WISE3PjcHS#DHL #JuanSantamariaAirport #AvGeek #Crash #Accident pic.twitter.com/dIECOqQkee

ಹೈಡ್ರಾಲಿಕ್ ಸಮಸ್ಯೆಯ ಬಗ್ಗೆ ಸಿಬ್ಬಂದಿ ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೂ ವಿಮಾನವನ್ನು ಹಾರಾಟ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಇದು ವಿಮಾನದಲ್ಲಿ ತಾಂತ್ರಿಕ ಸಮಸ್ಯೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
Recommended Video
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications