2022ರಲ್ಲಿ ಹೆಚ್ಚಲಿದೆ ಕಾರ್ಬನ್ ಡೈ ಆಕ್ಸೈಡ್ ಮಟ್ಟ: ವಿಜ್ಞಾನಿಗಳು
ನವದೆಹಲಿ, ನವೆಂಬರ್ 11: ಇಂಧನಗಳಿಂದ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯು 2022ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಲಿದೆ ಎಂದು ವಿಜ್ಞಾನಿಗಳು ಶುಕ್ರವಾರ ಈಜಿಪ್ಟ್‌ನಲ್ಲಿ ನಡೆದ ಸಿಒಪಿ 27 ಹವಾಮಾನ ಶೃಂಗಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ತೈಲಗಳ ಉರಿಸುವಿಕೆಯಿಂದ ಹೊರಸೂಸುವ ಕಾರ್ಬನ್ ಮಟ್ಟವು ವಾಯುಮಟ್ಟದಲ್ಲಿ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ದುಪ್ಪಟ್ಟಾಗಿ ಹೆಚ್ಚಾಗುತ್ತಿದೆ. ಕಲ್ಲಿದ್ದಲಿನಿಂದ ಹೊರಸೂಸುವ ಕಾರ್ಬನ್ ಮಟ್ಟವು 2014 ರಲ್ಲಿ ತೀವ್ರ ಹೆಚ್ಚಾಗಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕೋವಿಡ್ ನಂತರ ವ್ಯವಹಾರ ಚೇತರಿಸಿಕೊಳ್ಳುತ್ತಿರುವುದರಿಂದ ತೈಲವು ಹೆಚ್ಚು ಚಾಲ್ತಿಯುತವಾಗಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದ ಕಲ್ಲಿದ್ದಲು ಮತ್ತು ಅನಿಲವು ಹೆಚ್ಚು ಚಲನೆಯಲ್ಲಿದೆ ಎಂದು ನಾರ್ವೆಯ ಸಿಸೆರೊ ಹವಾಮಾನ ಸಂಶೋಧನಾ ಸಂಸ್ಥೆಯ ಸಂಶೋಧನಾ ನಿರ್ದೇಶಕ ಗ್ಲೆನ್ ಪೀಟರ್ಸ್ ತಿಳಿಸಿದ್ದಾರೆ.
2022 ರ ಮೊದಲ ಪೀರ್-ರಿವ್ಯೂಡ್ ಸೂಚ್ಯಂಕಗಳ ಪ್ರಕಾರ ಅರಣ್ಯನಾಶ ಮತ್ತು ಅತಿಯಾದ ಭೂ ಬಳಕೆ ಸೇರಿದಂತೆ ವಿವಿಧ ಮೂಲಗಳಿಂದ ಜಾಗತಿಕ ಕಾರ್ಬನ್ ಹೊರಸೂಸುವಿಕೆಯು 40.6 ಶತಕೋಟಿ ಟನ್‌ನಷ್ಟು ತಲುಪಿದೆ. 2019 ರಲ್ಲಿ ಈ ದಾಖಲೆಯು ಕಾರ್ಬನ್ ಮಟ್ಟಕ್ಕಿಂತ ಸ್ವಲ್ಪ ಕಡಿಮೆ ಇತ್ತು ಎಂದು ತೋರಿಸಿದ್ದವು. ಕೋವಿಡ್ ಸಾಂಕ್ರಾಮಿಕದ ಬಳಿಕ ಉಕ್ರೇನ್‌ನಲ್ಲಿ ಯುದ್ಧದಿಂದ ಇಂಧನ ಬಿಕ್ಕಟ್ಟಿನ ಹೊರತಾಗಿಯೂ ತೈಲ, ಅನಿಲ ಮತ್ತು ಕಲ್ಲಿದ್ದಲನ್ನು ಸುಡುವುದರಿಂದ ಇಂಗಾಲದ ಮಾಲಿನ್ಯದ ಹೆಚ್ಚಳವು ವಾಯುಮಟ್ಟದಲ್ಲಿ ಕಾರ್ಬನ್ ಹೆಚ್ಚಳಕ್ಕೆ ಪೂರಕವಾಗಿದೆ ಎಂದು ಗ್ಲೆನ್ ಪೀಟರ್ಸ್ ತಿಳಿಸಿದ್ದಾರೆ.

ಪ್ಯಾರಿಸ್ ಒಪ್ಪಂದದ ಗುರಿಗೆ ಬದ್ಧವಾಗಬೇಕಿದೆ
2015ರಲ್ಲಿ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ಹಿಡಿದು ಕಾರ್ಬನ್ ಹೊರಸೂಸುವಿಕೆ ಈಗ ಐದು ಪಟ್ಟು ಹೆಚ್ಚಾಗಿದೆ. ಹೊಸ ಅಂಕಿಅಂಶಗಳು ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸುವ ಪ್ಯಾರಿಸ್ ಒಪ್ಪಂದದ ಗುರಿಯನ್ನು ಪೂರೈಸಲು ಸಾಕಷ್ಟು ಕಷ್ಟ ಎಂದು ತೋರಿಸುತ್ತದೆ. ಆ ಮಿತಿಯನ್ನು ಮೀರಿ ವಾತಾವರಣ ಬಿಸಿಯಾಗುತ್ತಿರುವುದರಿಂದ ಹವಾಮಾನ ವ್ಯವಸ್ಥೆಯಲ್ಲಿ ಸಾಕಷ್ಟು ಪ್ರಲೋಭಗಳನ್ನು ಪ್ರಚೋದಿಸುವ ಅಪಾಯವಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಉಷ್ಣವಲಯದಿಂದ ಬಿರುಗಾಳಿ ವಾತಾವರಣ
ಇಲ್ಲಿಯವರೆಗೆ ಕೇವಲ 1.2 ಸೆಲ್ಸಿಯಸ್ ತಾಪಮಾನವು ಮಾರಣಾಂತಿಕ ಹವಾಮಾನದ ಲಕ್ಷಣಗಳು ಕಂಡು ಬಂದಿದೆ. ಈಗ ಶಾಖದ ಅಲೆಗಳು ಮತ್ತು ಬರದಿಂದ ಪ್ರವಾಹ ಮತ್ತು ಉಷ್ಣವಲಯದ ಬಿರುಗಾಳಿಗಳು ಹಾಗೂ ಹೆಚ್ಚುತ್ತಿರುವ ಸಮುದ್ರಗಳಿಂದ ಹೆಚ್ಚು ವಿನಾಶಕಾರಿಯಾಗಿ ಮಾರ್ಪಟ್ಟಿದೆ. ಹೀಗಾಗಿ ಮಹತ್ವಾಕಾಂಕ್ಷೆಯ ಪ್ಯಾರಿಸ್ ಗುರಿಯನ್ನು ಸಾಧಿಸಲು ಜಾಗತಿಕ ಹಸಿರುಮನೆ ಹೊರಸೂಸುವಿಕೆಯು 2030ರ ವೇಳೆಗೆ 45 ಪ್ರತಿಶತದಷ್ಟು ಇಳಿಯಬೇಕಿದೆ. ಇದನ್ನು ಶೂನ್ಯಕ್ಕೆ ಕಡಿತಗೊಳಿಸಬೇಕು. ವಾತಾವರಣದಿಂದ ಕಾರ್ಬನ್ ಅನ್ನು ತೆಗೆದುಹಾಕುವ ಮೂಲಕ ಹೊರಸೂಸುವಿಕೆಯನ್ನು ಸರಿದೂಗಿಸಬೇಕಿದೆ.

ಪ್ರಪಂಚದ ಆರ್ಥಿಕತೆ ಕ್ಷೀಣವಾಗಿದೆ
ಶೂನ್ಯ ಕಾರ್ಬನ್ ವಿಶ್ವವನ್ನು ಕಟ್ಟಲು ಮುಂದಿನ ಎಂಟು ವರ್ಷಗಳಲ್ಲಿ ಕಾರ್ಬನ್ ಹೊರಸೂಸುವಿಕೆಯು ವಾರ್ಷಿಕವಾಗಿ ಏಳು ಪ್ರತಿಶತದಷ್ಟು ಕುಸಿಯಬೇಕಿದೆ. 2020 ರಲ್ಲಿ ಪ್ರಪಂಚದ ಹೆಚ್ಚಿನ ಭಾಗದ ಆರ್ಥಿಕತೆಯು ಕ್ಷೀಣವಾಗಿರುವುದರಿಂದ ಹೊರಸೂಸುವಿಕೆಯು ಕೇವಲ ಆರು ಪ್ರತಿಶತದಷ್ಟು ಕಡಿಮೆಯಾಗಿದೆ. ದೀರ್ಘ ಸಮಯದ ಅವಧಿಯಲ್ಲಿ ಇಂಧನ ಬಳಕೆಯಿಂದ ಕಾರ್ಬನ್‌ನ ವಾರ್ಷಿಕ ಏರಿಕೆಯು 2000 ರಿಂದ 2010 ರವರೆಗೆ ವಾರ್ಷಿಕವಾಗಿ ಮೂರು ಪ್ರತಿಶತವನ್ನು ಏರಿದ ನಂತರ ಕಳೆದ ದಶಕದಲ್ಲಿ ಸರಾಸರಿಯಾಗಿ ಪ್ರತಿ ವರ್ಷಕ್ಕೆ 0.5 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಬನ್ ಹೊರಸೂಸುವಿಕೆ ಕಡಿತ ಮಾಡಬೇಕು
ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ಹವಾಮಾನಶಾಸ್ತ್ರದ ಪ್ರಾಧ್ಯಾಪಕ ಮಾರ್ಕ್ ಮಾಸ್ಲಿನ್ ಮಾತನಾಡಿ, 2022ರ ಜಾಗತಿಕ ಕಾರ್ಬನ್ ಬಜೆಟ್ ಕಡಿಮೆ ಇದೆ. ಅಂತರರಾಷ್ಟ್ರೀಯ ಒಪ್ಪಿಗೆ ಪ್ರಕಾರ 1.5 ಸೆಲ್ಸಿಯಸ್ ಜಾಗತಿಕ ತಾಪಮಾನ ಗುರಿಗಿಂತ ಕೆಳಗೆ ಇರಲು ಸಾಧ್ಯವಿರುವ ಎಲ್ಲ ಅವಕಾಶವನ್ನು ಬಳಸಿ ನಾವು ಹೊರಸೂಸುವಿಕೆಯನ್ನು ಕಡಿತ ಮಾಡಬೇಕಿದೆ ಎಂದು ತಿಳಿಸಿದರು.












Click it and Unblock the Notifications