Justin Trudeau: ಹೋಯ್ತು.. ಹೋಯ್ತು.. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಪಟ್ಟ ಕಳಚಿ ಬಿತ್ತು?
ಭಾರತ ವಿರೋಧಿ ಪಟ್ಟ ಕಟ್ಟಿಕೊಂಡು ಯಾವುದೇ ನಾಯಕ ಕೂಡ ಉದ್ದಾರ ಆಗಿಲ್ಲ, ಮುಂದೆ ಆಗೋದು ಇಲ್ಲ. ಯಾಕಂದ್ರೆ ಸಾವಿರಾರು ವರ್ಷಗಳಿಂದ ಕೂಡ ಭಾರತ ಜಗತ್ತಿನ ಅತ್ಯಗತ್ಯ ದೇಶವಾಗಿ ರೂಪುಗೊಂಡಿದೆ. ಆವಾಗಲೇ ಹಂಗೆ ಅಂದ್ರೆ, ಈಗ ಕೇಳಬೇಕಾ? ಹಿಂಗೆ ಭಾರತ ಆಧುನಿಕ ಜಗತ್ತಿನ ಅತ್ಯಂತ ಬಲಶಾಲಿ ದೇಶವಾಗಿದೆ. ಇದೇ ಕಾರಣಕ್ಕೆ ಭಾರತದ ವಿರೋಧಿ ನಿಲುವು ತೋರಿಸುವ ಯಾವುದೇ ನಾಯಕರಿಗೂ ನೆಮ್ಮದಿ ಇಲ್ಲ ಎನ್ನುವ ಮಾತು ಈಗ ಮತ್ತೆ ನಿಜವಾಗುತ್ತಿದೆ....
ಯೆಸ್, ಭಾರತದ ಜೊತೆಗೆ ಸದಾ ಕಿರಿಕ್ ತೆಗೆಯುತ್ತಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಕುರ್ಚಿಯ ಬುಡ ಅಲುಗಾಡುತ್ತಿದೆ. ನೋಡ ನೋಡುತ್ತಲೇ ಜಸ್ಟಿನ್ ಟ್ರುಡೋ ತಮ್ಮ ಅಧಿಕಾರ ಕಳೆದುಕೊಂಡು ಮನೆಯ ಕಡೆಗೆ ಹೋಗುವುದು ಗ್ಯಾರಂಟಿ ಆಗುತ್ತಿದೆ. ಅದ್ರಲ್ಲೂ, ಈಗಿನ ಪರಿಸ್ಥಿತಿಯಲ್ಲಿ ಖುದ್ದು ಜಸ್ಟಿನ್ ಟ್ರುಡೋ ಅವರ ಸ್ವಂತ ಪಕ್ಷದವರೇ ಅವರನ್ನು ಭಾರಿ ವಿರೋಧ ಮಾಡುತ್ತಿದ್ದಾರೆ. ಖಲಿಸ್ತಾನಿ ನಾಯಕರ ಹತ್ಯೆ ವಿಚಾರದಲ್ಲಿ ಭಾರತದ ಕುರಿತು ತಲೆ & ಬುಡ ಇಲ್ಲದಂತೆ ಆರೋಪ ಮಾಡಿದ್ದ ಕೆನಡಾ ಪ್ರಧಾನಿಗೆ ಭಯ ಶುರುವಾಗಿದೆ!

ಕೆನಡಾ ಪ್ರಧಾನಿಗೆ ಭಯ, ಭಯ?
ಭಾರತ & ಖಲಿಸ್ತಾನಿ ನಾಯಕರ ನಡುವೆ ದೊಡ್ಡ ಯುದ್ಧ ನಡೆಯುತ್ತಿದೆ ಎಂಬ ಮಾತು ಇದೆ. ಅದರಲ್ಲೂ ಖಲಿಸ್ತಾನಿ ನಾಯಕರು ಒಬ್ಬೊಬ್ಬರಾಗಿ ಜೀವ ಬಿಡುತ್ತಿರುವ ಘಟನೆಗಳ ಹಿಂದೆಯೂ ಭಾರತದ ಗುಪ್ತಚರ ಸಂಸ್ಥೆ ಕೈವಾಡ ಇದೆ ಎಂಬ ಆರೋಪವನ್ನ ಜಸ್ಟಿನ್ ಟ್ರುಡೋ ಮಾಡ್ತಾ ಇದ್ದರು. ಆದರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ತಾವು ಮಾಡುತ್ತಿದ್ದ ಆರೋಪಕ್ಕೆ ತಕ್ಕ ಸಾಕ್ಷ್ಯ ಒದಗಿಸಿರಲಿಲ್ಲ. ಇದೆಲ್ಲಾ ಈಗ ಕೆನಡಾ ಪ್ರಧಾನಿಗೆ ದೊಡ್ಡ ಕಂಟಕ ತರುವ ರೀತಿಯೇ ಕಾಣುತ್ತಿದೆ!
ಒಂದೊಂದಲ್ಲ ಅಣ್ಣಾ... ಒಂದೊಂದಲ್ಲ!
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರಿಗೆ ಒಂದಾದ ನಂತರ ಒಂದೊಂದು ಸಂಕಷ್ಟಗಳು ಇದೀಗ ಎದುರಾಗುತ್ತಿವೆ. ಈ ಪೈಕಿ ಭಾರತದ ಜೊತೆಗೆ ಕಿರಿಕ್ ತೆಗೆದಿದ್ದು, ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾ ವಿರುದ್ಧ ಅತಿಹೆಚ್ಚು ತೆರಿಗೆ ಹಾಕಲು ನಿರ್ಧಾರ ಮಾಡಿರುವುದು ಸೇರಿದಂತೆ ಹಲವು ವಿಚಾರಗಳಲ್ಲಿ ವಿದೇಶಿ ಸಂಬಂಧ ನಿಭಾಯಿಸಲು ಇದೇ ಟ್ರುಡೋ ವಿಫಲರಾಗಿದ್ದಾರೆ ಎಂಬ ಆರೋಪ ಇದೆ.
ಇದರ ಜೊತೆಗೆ ಕೆನಡಾ ಒಳಗೆ ಕೂಡ ನೂರಾರು ಸಮಸ್ಯೆ ಕಾಡುತ್ತಿದ್ದು, ಕೊನೆಗೂ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಈ ಕ್ಷಣವೇ ರಾಜೀನಾಮೆ ನೀಡಲಿ ಎಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ. ಸ್ವತಃ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಪಕ್ಷ ಲಿಬರಲ್ ಪಾರ್ಟಿ ಸದಸ್ಯರೇ ಇದೀಗ ಜಸ್ಟಿನ್ ಟ್ರುಡೋ ಮೇಲೆ ರಾಜೀನಾಮೆಗೆ ಒತ್ತಡ ಹೇರುತ್ತಿದ್ದಾರೆ ಎನ್ನುವ ಭಾರಿ ಗಂಭೀರ ಆರೋಪ ಕೇಳಿ ಬರುತ್ತಿದೆ.












Click it and Unblock the Notifications