Canada: ಭಾರತ ವಿರೋಧಿ ಕೆನಡಾ ಪ್ರಧಾನಿಗೆ ಡೊನಾಲ್ಡ್ ಟ್ರಂಪ್ ತಂದಿಟ್ಟಿದ್ದಾರೆ ತೆರಿಗೆ ಸಂಕಷ್ಟ!
ಭಾರತದ ಬಗ್ಗೆ ಸದಾ ವಿಷ ಕಾರುತ್ತಾ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಭಾರತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಜಸ್ಟಿನ್ ಟ್ರುಡೋಗೆ ಭಾರತ ಕೂಡ ಸಾಕಷ್ಟು ತಿರುಗೇಟು ನೀಡಿದ್ದೂ ಇದೆ. ಹೀಗೆ, ಭಾರತ & ಜಸ್ಟಿನ್ ಟ್ರುಡೋ ನಡುವೆ ಘೋರ ಮಾತಿನ ಮಹಾಯುದ್ಧವೇ ನಡೆಯುತ್ತಿದೆ. ಇಂತಹ ಸಮಯದಲ್ಲಿ ಕೆನಡಾ ಪ್ರಧಾನಿ ಬುಡ ಅಲುಗಾಡಿಸಲು ಅಮೆರಿಕ ಸಜ್ಜಾಗಿದೆ, ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರ ಅದೊಂದು ನಿರ್ಧಾರ ಕೆನಡಾ ಸರ್ಕಾರವನ್ನೇ ಅಲ್ಲಾಡುವಂತೆ ಮಾಡಿದೆ.
ಕೆನಡಾ ದೇಶದಲ್ಲಿ ಸತತವಾಗಿ ಅಧಿಕಾರ ಅನುಭವಿಸಿದ ಜಸ್ಟಿನ್ ಟ್ರುಡೋ, ಆಡಳಿತ ಸುಧಾರಣೆ ಮಾಡುವುದಕ್ಕಿಂತ ಹೆಚ್ಚಾಗಿ ಕಿರಿಕ್ ಮಾಡಿಕೊಂಡು ಬಂದಿದ್ದಾರೆ ಎಂಬ ಗಂಭೀರ ಆರೋಪ ಇದೆ. ಹೀಗಾಗಿಯೇ ಜಸ್ಟಿನ್ ಟ್ರುಡೋ ವಿರುದ್ಧ ಇದೀಗ ಭಾರಿ ಆಕ್ರೋಶ ಮೊಳಗಿದೆ. ಅಲ್ಲದೆ, ಜಸ್ಟಿನ್ ಟ್ರುಡೋಗೆ ಸರ್ಕಾರ ರಚಿಸಲು ಬೆಂಬಲ ನೀಡಿದ್ದ ಮಿತ್ರ ಪಕ್ಷಗಳೇ ಇದೀಗ ತಿರುಗಿಬಿದ್ದು ಸರ್ಕಾರ ಬೀಳಿಸಲು ಸಜ್ಜಾಗಿವೆ. ಇದಕ್ಕೆ ಕಾರಣವಾಗಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ & ಜಸ್ಟಿನ್ ಟ್ರುಡೋ ನಡುವೆ ನಡೆಯುತ್ತಿರುವ ಕಿರಿಕ್!

ಜಸ್ಟಿನ್ ಟ್ರುಡೋ ಸರ್ಕಾರ ಬೀಳುತ್ತಾ?
ಕೆಲವು ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಸಂಚಲನ ಸೃಷ್ಟಿ ಮಾಡುವ ರೀತಿ ಹೇಳಿಕೆ ನೀಡಿದ್ದರು. ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಡೊನಾಲ್ಡ್ ಟ್ರಂಪ್ 2025ರ ಜನವರಿ ತಿಂಗಳಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅದಕ್ಕೂ ಮೊದಲು, ಕ್ರಾಂತಿಕಾರಿ ನಿರ್ಧಾರ ಕೂಡ ಕೈಗೊಳ್ಳುತ್ತಿದ್ದಾರೆ ಟ್ರಂಪ್ ಅವರು.
ಈ ಪೈಕಿ ಕೆನಡಾ, ಮೆಕ್ಸಿಕೋ ಮೂಲಕ ಬರುವ ವಸ್ತುಗಳಿಗೆ ಶೇಕಡ 25 ತೆರಿಗೆ & ಚೀನಾ ಮೂಲಕ ಬರುವ ವಸ್ತುಗಳಿಗೆ ಶೇ. 10 ರಷ್ಟು ಟ್ಯಾಕ್ಸ್ ಹಾಕುವ ನಿರ್ಧಾರ ಪ್ರಕಟಿಸಿದ್ದರು. ಹೀಗಿದ್ದಾಗ ಸದ್ಯ ಈ ಎಲ್ಲಾ ಕಾರಣಗಳಿಗೆ ಟ್ರುಡೋ ಸರ್ಕಾರವೇ ಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅಲ್ಲದೆ ಮಿತ್ರ ಪಕ್ಷಗಳ ಮಿತ್ರರೇ ಟ್ರುಡೋ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಚರ್ಚೆ ನಡೆದಿದೆ ಎಂಬ ಸುದ್ದಿ ಹಬ್ಬಿದೆ. ಇದು ಕೆನಡಾ ಪ್ರಧಾನಿಗೆ ಆತಂಕ ತರಿಸಿದೆ.
ಕೆನಡಾ ಸರ್ಕಾರ ಬಿದ್ದು ಹೋಗುತ್ತಾ?
ಒಟ್ನಲ್ಲಿ ಕೆನಡಾ ಸರ್ಕಾರ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವ ಕೆಲಸ ಮಾಡಿತಾ? ಎಂಬ ಅನುಮಾನ ಮೂಡಿದೆ. ಯಾಕಂದ್ರೆ ಭಾರತ ವಿರೋಧಿ ನೀತಿಗಳಿಂದ ಕೆನಡಾ ಸಾಕಷ್ಟು ಸದ್ದು ಮಾಡಿತ್ತು. ಈಗ ನೋಡಿದರೆ ತನ್ನ ಸರ್ಕಾರವನ್ನೇ ಕಳೆದುಕೊಳ್ಳುವ ಹಂತಕ್ಕೆ ಕೆನಡಾ ಪ್ರಧಾನಿ ಬಂದು ನಿಂತಿದ್ದಾರೆ!












Click it and Unblock the Notifications