California Wildfire: ಬೆಂಕಿಯಲ್ಲಿ ಬೇಯುತ್ತಿದೆ ಅಮೆರಿಕ, 10,000 ಮನೆಗಳು ಭಸ್ಮ!
ಅಮೆರಿಕದಲ್ಲಿ ಕಾಡ್ಗಿಚ್ಚು ಧಗಧಗ ಹೊತ್ತಿ ಉರಿದು, ಲಕ್ಷಾಂತರ ಜನರ ಜೀವನ ಬೀದಿಗೆ ಬೀಳುವ ರೀತಿ ಮಾಡಿದೆ. ಜಗತ್ತಿನ ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಅಮೆರಿಕ ಈಗ ಕೇವಲ ಒಂದು ಕಾಡ್ಗಿಚ್ಚು ಕಂಟ್ರೋಲ್ ಮಾಡಲು ಆಗದೆ ಒದ್ದಾಡುತ್ತಿದೆ. ಲಕ್ಷಾಂತರ ಜನರು ಜೀವ ಭಯ & ಮನೆ ಕಳೆದುಕೊಳ್ಳುವ ಆತಂಕದಲ್ಲಿ ನರಳುತ್ತಿದ್ದಾರೆ. ಇಂತಹ ಸಮಯದಲ್ಲೇ ಬೆಂಕಿ ಆರಿಸಿ, ಪರಿಸ್ಥಿತಿ ಹಿಡಿತಕ್ಕೆ ತರಲು ನೀರಿನ ಕೊರತೆ ಎದುರಾಗಿದೆ.
ಅಮೆರಿಕ ಅದೆಷ್ಟೇ ಶ್ರೀಮಂತ & ಮುಂದುವರಿದ ದೇಶ ಎಂಬ ಹೆಸರು ಪಡೆದಿದ್ದರೂ ಅಲ್ಲಿನ ಸಂಕಷ್ಟಗಳು ಬಗೆಹರಿದಿಲ್ಲ. ಸಾವಿರಾರು ಸಮಸ್ಯೆಗಳ ಸರಮಾಲೆಗೆ ಸಿಲುಕಿ ಅಮೆರಿಕವು ಇದೀಗ ಪರದಾಡುತ್ತಿದೆ. ಅಮೆರಿಕದಲ್ಲಿ ಚಳಿಗಾಲ ಬಂತು ಅಂದ್ರೆ ಸಾಕು ಈ ರೀತಿಯ ಕಾಡಿನ ಬೆಂಕಿ ಕಾಟ ಶುರುವಾಗುತ್ತದೆ. ಅದರಲ್ಲೂ ಅಮೆರಿಕದ ಕ್ಯಾಲಿಫೋರ್ನಿಯಾ ಪದೇ ಪದೇ ಈ ರೀತಿ ಕಾಡ್ಗಿಚ್ಚಿಗೆ ಸಿಲುಕಿ ನರಳುತ್ತಿದೆ. 2025ರ ಆರಂಭದಲ್ಲೇ, ಮತ್ತೆ ಅಂತಹ ದುಃಸ್ಥಿತಿ ನಿರ್ಮಾಣ ಆಗಿದೆ.

10,000 ಮನೆಗಳು ಭಸ್ಮ!
ಅಮೆರಿಕದ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ಹಬ್ಬಿರುವ ಕಾಡಿನ ಬೆಂಕಿ ಇದೀಗ ಎಲ್ಲವನ್ನೂ ಸರ್ವನಾಶ ಮಾಡುತ್ತಿದೆ. ಅದರಲ್ಲೂ ಕ್ಯಾಲಿಫೋರ್ನಿಯಾ ಸುತ್ತಮುತ್ತ ಇದೀಗ ಸುಮಾರು 10,000 ಮನೆಗಳು ಭಸ್ಮವಾಗಿ ಹೋಗಿದ್ದು, ಲಕ್ಷಾಂತರ ಜನಗಳ ಬದುಕು ಈ ಮೂಲಕ ಬೀದಿಗೆ ಬಿದ್ದಿದೆ. ಜನರು ಚಿಂತೆಯಲ್ಲೇ ನರಳುತ್ತಿದ್ದಾರೆ. ಮುಂದಿನ ಪರಿಸ್ಥಿತಿಗೆ ಹೆದರಿ ಕೆಲವರು ಊರು ಬಿಡುತ್ತಿದ್ದಾರೆ.
ಬೆಂಕಿಯಲ್ಲಿ ಬೆಂದು ಹೋದ ಹಾಲಿವುಡ್!
ಹೌದು, ಹಾಲಿವುಡ್ ಸಿನಿಮಾ ರಂಗ ಇರುವ ಲಾಸ್ ಏಂಜಲೀಸ್ ಪ್ರತಿಬಾರಿ ಕೂಡ ಹೀಗೆಯೇ ಕಾಡಿನ ಬೆಂಕಿಗೆ ಬಲಿಯಾಗುತ್ತಿದೆ. ಹಾಲಿವುಡ್ ಸಿನಿಮಾ ಸ್ಟಾರ್‌ಗಳ ಸಮೇತ ಬಹುತೇಕ ಎಲ್ಲ ಶ್ರೀಮಂತರು ಇದೇ ಲಾಸ್ ಏಂಜಲೀಸ್ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಆದರೂ ಇಲ್ಲಿನ ಪ್ರಾಕೃತಿಕ ವಿಕೋಪಗಳು ಕಂಟ್ರೋಲ್‌ಗೆ ಸಿಗುತ್ತಿಲ್ಲ. ಮತ್ತೊಂದು ಕಡೆ ಐತಿಹಾಸಿಕ, ಹಾಲಿವುಡ್ ಬೆಟ್ಟದ ಮೇಲೆ ಇರುವ ಹಾಲಿವುಡ್ ಬೋರ್ಡ್ ಕೂಡ ಕಾಡ್ಗಿಚ್ಚಿಗೆ ಬಲಿಯಾಗುವ ಭಯ ಈಗ ಕಾಡುತ್ತಿದೆ.












Click it and Unblock the Notifications