ಊಬರ್ ಚಾಲಕನಿಂದ ನಶೆಯಲ್ಲಿದ್ದ ಮಹಿಳಾ ಪ್ಯಾಸೆಂಜರ್ ಮೇಲೆ ಅತ್ಯಾಚಾರ
Recommended Video
ಸ್ಯಾಕ್ರಮೆಂಟೋ, ಜನವರಿ 16: ಮಹಿಳಾ ಪ್ಯಾಸೆಂಜರ್ ನಶೆಯಲ್ಲಿದ್ದ ಸಮಯ ನೋಡಿ ಊಬರ್ ಚಾಲಕನೊಬ್ಬ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಯುವತಿ ಪಾರ್ಟಿ ಮುಗಿಸಿ ಊಬರ್ ಕಾರನ್ನು ಹತ್ತಿದ್ದಳು, ಮಹಿಳೆ ನಶೆಯಲ್ಲಿದ್ದ ಕಾರಣ ಆಕೆ ಕಾರಿನಲ್ಲಿಯೇ ನಿದ್ದೆ ಮಾಡಿದ್ದಳು. ಆದರೆ ಎಚ್ಚರವಾದ ಬಳಿಕ ಮೆಕ್ ಡರ್ಮೊಟ್ ಪಾರ್ಕ್ ಬಳಿ ಊಬರ್ ಚಾಲಕ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂಬುದು ಅರಿವಾಗಿತ್ತು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಆದರೆ ಅಚ್ಚರಿಯ ವಿಷಯವೇನೆಂದರೆ ಆಕೆಯ ಜೊತೆ ಸಂಬಂಧ ಹೊಂದಿದ ತಕ್ಷಣವೇ ಆತ ಫಾಂಟಾನದ ಪೊಲೀಸ್ ಠಾಣೆಗೆ ತೆರಳಿ ಮತ್ತು ಮಹಿಳೆಯ ಒಪ್ಪಿಗೆ ಮೇರೆಗೆ ತಾನು ದೈಹಿಕ ಸಂಪರ್ಕ ಹೊಂದಿದ್ದು , ಆಕೆ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ದೂರು ನೀಡಬಹುದು ಎಂದು ಆತ ಮೊದಲೇ ಪೊಲೀಸರಿಗೆ ತಿಳಿಸಿದ್ದಾನೆ.

ಮಹಿಳೆಯು ಮದ್ಯದ ನಶೆಯಲ್ಲಿರುವುದು ನನಗೆ ತಿಳಿದಿದ್ದು, ಆಕೆಯ ಒಪ್ಪಿಗೆ ಮೇರೆಗೆ ನಾನು ಅವಳೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದು, ಇದೀಗ ಆತನನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.












Click it and Unblock the Notifications