ಮಂಗಳನ ಅಂಗಳದಲ್ಲಿ ಬುದ್ಧನ ವಿಗ್ರಹ ಇಟ್ಟವರು ಯಾರು?

ವಾಷಿಂಗ್ಟನ್‌, ಅಕ್ಟೋಬರ್. 19: ಮಂಗಳ ಗ್ರಹದ ಮೇಲೆ ಮಾನವ ಪ್ರತಿ ದಿನ ಅನೇಕ ಸಂಶೋಧನೆಗಳಲ್ಲಿ ನಿರತವಾಗಿಯೇ ಇದ್ದಾನೆ. ವಿಜ್ಞಾನಿಗಳೂ ನೈಜ ವಾತಾವರಣ ಅರಿಯಲು ಸದಾ ಪ್ರಯತ್ನ ಮಾಡುತ್ತಲೇ ಇದ್ದಾರೆ.

ಇದೀಗ ಮಂಗಳ ಗ್ರಹದಲ್ಲಿ ಬುದ್ಧನ ವಿಗ್ರಹವನ್ನು ಹೋಲುವ ಬೃಹತ್‌ ಆಕೃತಿಯೊಂದು ಗೋಚರವಾಗಿದೆ ಎಂದು ಅನ್ಯ ಗ್ರಹಗಳಲ್ಲಿ ಮನುಷ್ಯರ ಹಾಗಿನ ಬುದ್ಧಿವಂತ ಜೀವಿಗಳು ಇರಬಹುದಾದ ಸಾಧ್ಯತೆಗಳ ಅನ್ವೇಷಣೆಯಲ್ಲಿ ತೊಡಗಿರುವ ಯುಎಫ್ಓ ಸೈಟಿಂಗ್ಸ್‌ ಡೇಲಿ ತಿಳಿಸಿದೆ. ಮಂಗಳ ಗ್ರಹದಲ್ಲಿ ಗೌತಮ ಬುದ್ಧನ ಮೂರ್ತಿಯನ್ನು ಹೋಲುವ ಬೃಹತ್‌ ಆಕೃತಿ ಕಂಡುಬಂದಿದ್ದು ಮತ್ತಷ್ಟು ಸಂಶೋಧನೆಗಳು ನಡೆಯುತ್ತಿವೆ ಎಂದು ಹೇಳಿದೆ.[ಬಾಹ್ಯಾಕಾಶದಿಂದ ಕಂಡ ಭಾರತ-ಪಾಕಿಸ್ತಾನ ಗಡಿಭಾಗ]

Buddha Statue Makes An Appearance On Mars

ಬುದ್ಧಿವಂತ ಜೀವಿಗಳು ಹಿಂದೆ ಗ್ರಹದಲ್ಲಿದ್ದವು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ. ನಾವು ಕೇವಲ ಫೋಟೋದ ಬಗ್ಗೆ ಮಾತ್ರ ಹೇಳುತ್ತೇವೆ. ಸಾವಿನ ನಂತರದ ಬದುಕಿನ ಬಗ್ಗೆಯೂ ಜೀವಿಗಳಿಗೆ ಗೊತ್ತಿತ್ತು ಎಂದು ಯುಎಫ್ ಓ ತಿಳಿಸಿದೆ.[ಬಾನಂಗಳದಲ್ಲಿ ರಂಗುರಂಗೇರಿದ ಚಂದಿರನ ಶೃಂಗಾರಕಾವ್ಯ]

ಯುಎಫ್ಓ ಸೈಟಿಂಗ್ಸ್‌ ಡೇಲಿಯ ಸ್ಕಾಟ್‌ ಸಿ ವ್ಯಾರಿಂಗ್‌ ಹೇಳುವಂತೆ, ಮಂಗಳ ಗ್ರಹದಲ್ಲಿ ಕಂಡು ಬಂದಿರುವ ಬುದ್ಧನ ವಿಗ್ರಹವನ್ನು ಹೋಲುವ ಬೃಹತ್‌ ಆಕೃತಿಯಲ್ಲಿ ಬೃಹತ್ ಗಾತ್ರದ ಹೊಟ್ಟೆ ಮತ್ತು ಸ್ತನಗಳು ಕಂಡುಬಂದಿವೆ ಎಂದು ತಿಳಿಸಿದ್ದಾರೆ. ಈ ಹಿಂದೆ ಸಹ ಮಂಗಳ ಗ್ರಹದಲ್ಲಿ ಮನುಷ್ಯನ ತಲೆಬುರುಡೆ, ಮಹಿಳೆಯ ಹೋಲುವ ಆಕೃತಿ ಕಂಡುಬಂದ ಬಗ್ಗೆಯೂ ಸುದ್ದಿಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+