ಭಾರತ-ಪಾಕಿಸ್ತಾನ ಗಡಿಯಲ್ಲಿ ‘ಡ್ರಗ್ಸ್’ ಡ್ರೋನ್ ಕಾಟ!
ಜಲಂಧರ್, ಪಂಜಾಬ್: ಭಾರತಕ್ಕೆ ಪಾಕಿಸ್ತಾನ ಗಡಿಯಲ್ಲಿ ಮತ್ತೆ ಮತ್ತೆ ಕಿರಿಕ್ ಮಾಡುತ್ತಿರುವ ಡ್ರೋನ್‌ಗಳನ್ನ ನಾಶ ಮಾಡುತ್ತಲೇ ಇದೆ ಗಡಿ ಭದ್ರತಾ ಪಡೆ (BSF). ಆದರೂ ಡ್ರೋನ್‌ಗಳ ಉಪಟಳ ತಪ್ಪುತ್ತಿಲ್ಲ, ಕಳೆದ ವಾರ 2 ಡ್ರೋನ್‌ಗಳನ್ನ ಹೊಡೆದು ಉರುಳಿಸಿದ ಬೆನ್ನಲ್ಲೇ ಮತ್ತೆ 4 ಡ್ರೋನ್‌ಗಳು ಭಾರತದ ಗಡಿಯಲ್ಲಿ ಪ್ರತ್ಯಕ್ಷವಾಗಿ ಆತಂಕ ಮೂಡಿಸಿದ್ದವು, BSF ಯೋಧರು 4 ಡ್ರೋನ್‌ಗಳನ್ನ ಹೊಡೆದು ಹಾಕಿದ್ದಾರೆ.
ಕೇವಲ 24 ಗಂಟೆಗಳ ಅಂತರದಲ್ಲಿ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ 4 ಡ್ರೋನ್‌ಗಳು ಸಿಕ್ಕಿದ್ದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಪರಿಸ್ಥಿತಿಯನ್ನ ಗಡಿ ಭದ್ರತಾ ಪಡೆ (BSF) ಗಂಭೀರವಾಗಿ ಪರಿಗಣಿಸಿ ಎಲ್ಲೆಲ್ಲೂ ಹದ್ದಿನ ಕಣ್ಣಿಟ್ಟಿದೆ. ಕಪ್ಪು ಕ್ವಾಡ್‌ಕಾಪ್ಟರ್‌ನ ಅಮೃತಸರ ಜಿಲ್ಲೆ ಉಧರ್ ಧರಿವಾಲ್ ಗ್ರಾಮದಿಂದ ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಮಾನವರಹಿತ ವೈಮಾನಿಕ ವಾಹನ ಅಂದರೆ ಡ್ರೋನ್‌ಗಳ ಮೇಲೂ ಹದ್ದಿನ ಕಣ್ಣಿಟ್ಟು ಕೂತಿದ್ದು ಯಾರು ಇಂತಹ ಕೃತ್ಯ ಎಸಗುತ್ತಿದ್ದಾರೆ ಎಂಬ ಕುರಿತು ತನಿಖೆ ಆರಂಭವಾಗಿದೆ.

ಡ್ರೋನ್ ಒಳಗೆ ಸಿಕ್ಕಿದೆ 'ಡ್ರಗ್ಸ್'
ಹೌದು, ಪದೇ ಪದೆ ಇಂತಹ ಘಟನೆಗಳು ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ನಡೆಯುತ್ತಿದೆ. ಇದೀಗ BSF ಯೋಧರು ನಾಶ ಮಾಡಿರುವ ಡ್ರೋನ್‌ಗಳಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ಸಿಕ್ಕಿದೆ ಎನ್ನಲಾಗಿದೆ. ಸುಮಾರು 2.6 ಕೆಜಿ ಹೆರಾಯಿನ್ ಹೊಂದಿರುವ 2 ಪ್ಯಾಕೆಟ್ ಡ್ರೋನ್‌ಗಳಿಗೆ ಅಂಟಿಸಲಾಗಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಗಡಿಯಲ್ಲಿ ಭದ್ರತೆಯನ್ನ ಮತ್ತಷ್ಟು ಟೈಟ್ ಮಾಡಿ ಕಣ್ಣಿಡಲಾಗಿದೆ. ಡ್ರೋನ್ ಮೂಲಕ ಬಂದಿರುವ ಡ್ರಗ್ಸ್ ಪಾಕಿಸ್ತಾನ ಕಡೆಯಿಂದ ಹಾರಿಸಲಾಗಿದ್ದು, ಭಾರತದ ಒಳಗೆ ನುಸುಳಿಸಲು ಯತ್ನಿಸಲಾಗಿದೆ ಎನ್ನಲಾಗಿದೆ.
ಪಾಕಿಸ್ತಾನದ ಪರಿಸ್ಥಿತಿ ಹೀಗೆನಾ?
ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಬಂಧನದ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಅಲ್ಲದೆ ಇಮ್ರಾನ್ ಖಾನ್ ಮನೆಯಲ್ಲಿ ಭಯೋತ್ಪಾದಕರು ಇದ್ದಾರೆ ಎಂದು ದೊಡ್ಡ ಸುದ್ದಿ ಓಡಾಡುತ್ತಿದೆ. ಇಷ್ಟೆಲ್ಲದರ ನಡುವೆ ನಮ್ಮ ದೇಶದೊಳಗೆ ಪಾಕಿಸ್ತಾನದಿಂದ ಡ್ರಗ್ಸ್ ನುಸುಳಿಸಲು ವಿಫಲ ಯತ್ನ ನಡೆದಿದ್ದು, ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ 4 ಡ್ರೋನ್‌ಗಳನ್ನು ಪತ್ತೆಹಚ್ಚಿ ಹೊಡೆದುರುಳಿಸಿದ್ದಾರೆ ಬಿಎಸ್‌ಎಫ್ ಯೋಧರು. ಆದರೂ ಇಂತಹ ಪ್ರಯತ್ನಗಳು ನಿಲ್ಲದೆ, ಪದೇ ಪದೆ ನಡೆಯುತ್ತಿರುವುದು ಆತಂಕ ಮೂಡಿಸಿದೆ. ಪಾಕಿಸ್ತಾನ ಮಾತ್ರ ಉಗ್ರರು ಹಾಗೂ ಡ್ರಗ್ಸ್ ಡೀಲರ್‌ಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸಿರುವ ಆರೋಪವಿದೆ.
ಭಯೋತ್ಫಾದನೆ ಜೊತೆ ಡ್ರಗ್ಸ್ ಕಾಟ
ಭಾರತದ ಗಡಿಯಲ್ಲಿ ಭಯೋತ್ಪಾದಕರು ಕೊಡ್ತಿರುವ ಕಿರುಕುಳದಷ್ಟೇ ಮಾದಕ ವಸ್ತು ಕಳ್ಳಸಾಗಣೆ ಕೂಡ ದೊಡ್ಡ ತಲೆನೋವಾಗಿದೆ. ಇದನ್ನ ತಡೆಯಲು ಏನೇ ವ್ಯವಸ್ಥೆ ಮಾಡಿದ್ದರೂ ಕಿರಾತಕರು ಅದನ್ನೆಲ್ಲಾ ಮೀರಿ, ತಮ್ಮ ಕೃತ್ಯ ಮುಂದುವರಿಸಿದ್ದಾರೆ. ಈಗಲೂ ಅಷ್ಟೇ ಡ್ರೋನ್‌ಗಳ ಮೂಲಕ ಡ್ರಗ್ಸ್ ಸಾಗಿಸಲು ಯತ್ನಿಸಿದ್ದಾರೆ ಎಂಬ ಡೌಟ್ ಬಂದಿದೆ. ಈ ವೇಳೆ ಬಿಎಸ್ಎಫ್ ಯೋಧರು ಗಮನಿಸಿದ ಪರಿಣಾಮ ಡ್ರೋನ್‌ಗೆ ಗುರಿಯಿಟ್ಟು ದಾಳಿ ಮಾಡಿದ್ದು, ಕೂಡಲೇ ಗುರಿಯಿಟ್ಟು ಆ 4 ಡ್ರೋನ್‌ಗಳಿಗೆ ಒಂದು ಗತಿ ಕಾಣಿಸಲಾಗಿದೆ. ಕೊನೆಗೆ ಕೆಳಗೆ ಬಿದ್ದ ಡ್ರೋನ್‌ಗಳನ್ನ ಪರಿಶೀಲಿಸಿದಾಗ ಡ್ರಗ್ಸ್ ಸಾಗಿಸುತ್ತಿದ್ದವರ ಬಂಡವಾಳ ಬಯಲಾಗಿದೆ.

ಒಟ್ನಲ್ಲಿ ಭಾರತದ ಒಳಗೆ ಒಂದಲ್ಲ ಒಂದು ರೀತಿ ದುಷ್ಕೃತ್ಯ ಎಸಗಲು ಸದಾ ಪ್ರಯತ್ನಿಸುವ ಪಾಕಿಸ್ತಾನ, ಈಗ ಡ್ರಗ್ಸ್ ಅಂದರೆ ಮಾದಕ ವಸ್ತುಗಳನ್ನ ಭಾರತದ ಒಳಗೆ ನುಗ್ಗಿಸಲು ಯತ್ನಿಸುತ್ತಿದೆ. ಆದರೆ ಸೇನೆ ಇದನ್ನ ವಿಫಲಗೊಳಿಸ್ತಿದೆ. ತನ್ನ ದೇಶದ ಒಳಗೆ ಅರಾಜಕತೆ ಇಟ್ಟುಕೊಂಡಿರುವ ಪಾಕಿಸ್ತಾನ, ಗಡಿಯಲ್ಲೂ ಇಂತಹ ಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂಬ ಆರೋಪವಿದೆ. ಅದರಲ್ಲೂ ಪಾಕಿಸ್ತಾನ ಸೇನೆ ವಿರುದ್ಧ ಈ ಕುರಿತು ಗಂಭೀರ ಆರೋಪ ಕೇಳಿಬರುತ್ತಿವೆ. ಗಡಿ ಗ್ರಾಮಗಳ ಜನರು ಕೂಡ ಈ ಡ್ರಗ್ಸ್ ಡ್ರೋನ್‌ಗಳ ಉಪಟಳ ಕಂಡು ಬೆಚ್ಚಿಬಿದ್ದಿದ್ದಾರೆ.












Click it and Unblock the Notifications