ಫೋಟೋ ಶೂಟ್ ವೇಳೆ ಯಡವಟ್ಟು: ಬಲೂನಿನ ಜೊತೆ ಗಾಳಿಯಲ್ಲಿ ಹಾರಿದ ವಧು! Video Viral
Bride Viral Video: ಮದುವೆ ಪ್ರತಿಯೊಬ್ಬರ ಜೀವನದಲ್ಲೂ ತುಂಬಾ ವಿಶೇಷ. ಮದುವೆ ಗೊತ್ತಾದ ದಿನದಿಂದಲೇ ತಯಾರಿ ಶುರುವಾಗುತ್ತದೆ. ಈಗಂತೂ ಪ್ರೀ ವೆಡ್ಡಿಂಗ್ ಶೂಟ್, ಪೋಸ್ಟ್ ವೆಡ್ಡಿಂಗ್ ಶೂಟ್ ಕೂಡಾ ತುಂಬಾ ಟ್ರೆಂಡ್ ಆಗುತ್ತಿದೆ. ಈ ಪೋಟೋ ಶೂಟಿಗಾಗಿ ಜನ ಒಳ್ಳೊಳ್ಳೆ ಜಾಗಗಳನ್ನೇ ಆರಿಸಿಕೊಳ್ಳುತ್ತಾರೆ. ಕೆಲವರು ಬೀಚಿನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡರೆ ಇನ್ನು ಕಲೆವರು ಬೆ್ಟ್ಟ ಗುಡ್ಡಗಳತ್ತ ಮುಖ ಮಾಡುತ್ತಾರೆ. ಎಷ್ಟೋ ಸಲ ಇಂಥಹ ಕಡೆಗಳಲ್ಲಿ ಫೋಟೋ ಶೂಟ್ ಮಾಡಿಸುವುದಕ್ಕೆ ಹೋಗಿ ಪ್ರಾಣ ಕಳೆದುಕೊಂಡಿರುವವರೂ ಇದ್ದಾರೆ.
ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ವಿಡಿಯೋ
ಇದೀಗ ಇಂಥದ್ದೇ ಒಂದು ಘಟನೆ ನಡೆದಿದೆ. ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಲ್ಲಿ ಅರೆ ಕ್ಷಣ ತಡವಾಗಿದ್ದರೂ ಮದುವೆಗೆ ವಧುವೇ ಇಲ್ಲದಂತೆ ಆಗುತ್ತಿತ್ತು. ಈ ವಿಡಿಯೋ ಒಮ್ಮೆ ಗಾಬರಿ ಹುಟ್ಟಿಸಿದರೆ ಮತ್ತೊಮ್ಮೆ ನಗು ಕುಡಾ ತರಿಸುತ್ತದೆ. ಅದ್ರೆ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವ ಹಾಗೆ ನಮಗೆ ಈ ವಿಡಿಯೋ ನಗು ತರಿಸಬಹುದು. ಆದರೆ ಪಾಪ ವಧುವಿನ ಹೃದಯವೇ ಬಾಯಿಗೆ ಬಂದಂತೆ ಆಗಿರಹುದು. ಈ ವಿಡಿಯೋವನ್ನು ಸೋಶಿಯಲ್ ಮಿಡಿಯಾ ಪ್ಲಾಟ್ ಫಾರಂಗಳಲ್ಲಿ ಶೇರ್ ಮಾಡಲಾಗಿದೆ. ವಿಡಿಯೋ ಶೇರ್ ಮಾಡಿದವರು ಘಟನೆಯ ಬಗ್ಗೆ ಮಾಹಿತಿಯನ್ನು ಕೂಡಾ ವಿವರವಾಗಿ ಬರೆದಿದ್ದಾರೆ.

ಮದುವೆಯ ಫೋಟೋ ಶೂಟ್
ಈ ಘಟನೆ ಟರ್ಕಿಯ ಇಸ್ತಾಂಬುಲಿನಲ್ಲಿ ನಡೆದಿದೆ. ಬಾಸ್ಪೊರಸ್ ಜಲಸಂಧಿಯ ಬಳಿ ಮದುವೆಯ ಫೋಟೋ ಶೂಟ್ ನಡೀತಾ ಇತ್ತು. ಫೋಟೊಶೂಟಿಗಾಗಿ ವಧು ತುಂಬಾ ಚಂದದ ಗೌನ್ ಹಾಕಿದ್ದಾರೆ. ಬಹಳ ಸುಂದರವಾಗಿ ಅಲಂಕಾರ ಮಾಡಿಕೊಂಡು ರೆಡಿಯಾಗಿದ್ದಾರೆ. ವಧುವಿನ ಗೌನಿನ ಬಣ್ಣದ ಬಲೂಲಿನ ಗುಚ್ಛ ಅವರ ಕೈಯ್ಯಲಲಿ ಇರುವುದನ್ನು ನೋಡಬಹುದು.
ಜೋರಾಗಿ ಬೀಸಿದ ಗಾಳಿಯಿಂದ ಎಡವಟ್ಟು
ಅಂದ ಹಾಗೆ ವಧುವಿನ ಕೈಯ್ಯಲ್ಲಿ ಬಲೂನಿನ ದೊಡ್ಡ ಗುಚ್ಛಕೊಟ್ಟು ಫೋಟೋ ಶೂಟ್ ಮಾಡಿಸುವ ಐಡಿಯಾ ಫೋಟೋಗ್ರಾಫರಿದ್ದಾಗಿತ್ತು.ಫೋಟೋ ಶೂಟಿಗೆ ಎಲ್ಲವೂ ರೆಡಿಯಾಗಿತ್ತು. ಇನ್ನೇನು ಫೋಟೀ ಕ್ಲಿಕ್ ಮಾಡಬೇಕು ಅನ್ನುವಷ್ಟರಲ್ಲಿ ಎಡವಟ್ಟು ನಡೆದಿದೆ. ವಧು ಫೋಟೋಗೆ ಫೋಸ್ ಕೊಡಬೇಕು ಅಷ್ಟೇ. ಅಷ್ಟರಲ್ಲಿ ಜೋರಾದ ಗಾಳಿ ಬೀಸಿದೆ. ಆ ಗಾಳಿಯ ರಭಸಕ್ಕೆ ಬಲೂನ್ ಗಾಳಿಯ ದಿಕ್ಕಿಗೆ ಹಾರಲು ಶುರು ಮಾಡಿದೆ.
ಬಲೂನಿನ ಜೊತೆ ಗಾಳಿಯಲ್ಲಿ ವಧು
ವಧುವಿನ ಕೈಯ್ಯಲ್ಲಿದ್ದ ಬಲೂನ್ ಗಳು ಗಾತ್ರದಲ್ಲಿ ಸಾಕಷ್ಟು ದೊಡ್ದದಿತ್ತು. ಹಾಗಾಗಿ ಪರಿಸ್ಥಿತಿ ನಿಭಾಯಿಸುವುದು ವಧುವಿಗೂ ಕಷ್ಟವಾಗಿತ್ತು. ಇನ್ನು ಬಲೂನು ವಧುವಿನ ಕೈಗೆ ಸುತ್ತಿಕೊಂಡಿದ್ದರಿಂದ ಅದನ್ನು ಬಿಟ್ಟು ಬಿಡುವುದು ಕೂಡಾ ಸಾಧ್ಯವಾಗಲಿಲ್ಲ. ಗಾಳಿಯ ರಭಸಕ್ಕೆ ಬಲೂನು ಹಾರುತ್ತಿದ್ದರೆ, ಅದರ ಜೊತೆ ವಧುವಿನ ಕಾಲು ಕೂಡಾ ನೆಲದಿಂದ ಮೇಲಕ್ಕೆದ್ದಿದೆ. ಇನ್ನೇನು ವಧು ಗಾಳಿಯಲ್ಲಿ ಹಾರಬೇಕು ಎನ್ನುವಷ್ಟರಲ್ಲಿ ಫೋಟೋಗ್ರಾಫರ್ ಓಡಿ ಬಂದು ವಧುವನ್ನು ಹಿಡಿದು ಎಳೆದಿದ್ದಾನೆ. ಸ್ವಲ್ಪ ತಡವಾಗಿದ್ದರೂ ವಧು ಬಲೂನಿನ ಜೊತೆ ಆಕಾಶದಲ್ಲಿ ಹಾರಬೇಕಾಗಿತ್ತು.
ಅದೃಷ್ಟ ಅಂದ್ರೆ ಈ ಘಟನೆಯಲ್ಲಿ ವಧುವಿಗೆ ಏನೂ ಆಗಲಿಲ್ಲ, ಸಣ್ಣ ಗಾಯವೂ ಆಗಿಲ್ಲ. ಆಕೆ ಸೇಫಾಗಿದ್ದು ಅಂದುಕೊಂಡ ಹಾಗೆಯೇ ಫೋಟೋಶೂಟ್ ಮುಗಿಸಿದ್ದಾಳೆ. ಈ ಫೋಟೋ ಶೂಟನ್ನು ಮಾತ್ರ ವಧು ತನ್ನ ಜೀವಮಾನದಲ್ಲಿ ಮರೆಯುವುದಕ್ಕೆ ಸಾಧ್ಯವೇ ಇಲ್ಲ.
ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಜನ ವಿಡಿಯೋ ನೋಡಿ ಆಶ್ಚರ್ಯ ಪಡುತ್ತಿದ್ದಾರೆ. ಫೋಟೋ ಗ್ರಾಫರ್ ಟೈಮ್ ಸೆನ್ಸನ್ನು ಕೂಡಾ ಹೊಗಳುತ್ತಿದ್ದಾರೆ.
The bride almost took flight! A wedding photo shoot along the shores of the Bosphorus in Istanbul took a hilarious turn when strong winds nearly swept the bride away with a massive bunch of decorative balloons. The combination of the gusty wind and the balloons turned the romantic photo session into an unexpected spectacle, leaving everyone with a moment they certainly won’t forget!
— Chris | Digital Marketing (@Chrisdaramola_) October 29, 2026


Click it and Unblock the Notifications
