ಎರಡು ತಿಂಗಳ ಕಂದಮ್ಮ 'ಆನ್ ಲೈನ್' ಸೇಲ್
ರಿಯೋ ಡಿಜನೈರೋ, ನ.17: ಭಾರತದಲ್ಲಿ ಹೆತ್ತ ಮಕ್ಕಳನ್ನು ಕಸದ ತೊಟ್ಟಿಗೆ ಹಾಕುವುದನ್ನು ಕಂಡು ಅರಗಿಸಿಕೊಳ್ಳುವುದೇ ಕಷ್ಟ ಎನ್ನುವಾಗ, ಬ್ರೆಜಿಲಿನಲ್ಲಿ ಎರಡು ತಿಂಗಳ ಮಗು ಆನ್ ಲೈನ್ ನಲ್ಲಿ ಮಾರಾಟಕ್ಕಿಟ್ಟಿರುವ ಘಟನೆ ವರದಿಯಾಗಿದೆ.
ಜನಪ್ರಿಯ ಆನ್ ಲೈನ್ ಶಾಪಿಂಗ್ ವೆಬ್ ತಾಣ ಓಎಲ್ ಎಕ್ಸ್ ನಲ್ಲಿ ಅಳುತ್ತಿರುವ ಮಗುವಿನ ಚಿತ್ರ ಹಾಕಿ, ಈ ಮಗು ಇಂತಿಷ್ಟು ಬೆಲೆಗೆ ಮಾರಲಾಗುತ್ತಿದೆ ಎಂದು ಜಾಹೀರಾತು ನೀಡಲಾಗಿದೆ ಎಂದು ಡೈಲಿಮೇಲ್ ವರದಿ ಮಾಡಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಈ ಸುದ್ದಿ ಎಲ್ಲೆಡೆ ಹರಡಿ ವ್ಯಾಪಕ ಖಂಡನೆಗೆ ಗುರಿಯಾಗಿದೆ. ತನ್ನ ತಪ್ಪಿನ ಅರಿವಾದ ಮೇಲೆ ಬ್ರೆಜಿಲಿನ ಓಲೆ ಎಕ್ಸ್ ವೆಬ್ ತಾಣ ಜಾಹೀರಾತನ್ನು ತೆಗೆದು ಹಾಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಅಲ್ಲಿನ ಪೊಲೀಸರು ವೆಬ್ ತಾಣದ ಮುಖ್ಯಸ್ಥರಿಗಾಗಿ ಹುಡುಕಾಟ ನಡೆಸಿದ್ದಾರೆ.
ಮಾರ್ಸೆಲಾ ಒರ್ ಕೈ ಅವರು ತನಿಖಾಧಿಕಾರಿಯಾಗಿದ್ದು, ಮೇಲ್ನೋಟಕ್ಕೆ ಇದೊಂದು ಸುಳ್ಳು ಜಾಹೀರಾತಿನಂತೆ ಕಂಡು ಬಂದಿದೆ. ಅಲ್ಲಿ ಕೊಟ್ಟಿರುವ ಹೆಸರು ಮತ್ತು ವಿಳಾಸ ಸಮರ್ಪಕವಾಗಿಲ್ಲ ಎಂದಿದ್ದಾರೆ. ವಿನಿಸಿಸ್ ಫೆಲಿಕ್ಸ್ ಅವರ ಹೆಸರಿನಿಂದ ಜಾಹೀರಾತು ಪ್ರಕಟಿಸಲಾಗಿದ್ದು, ಅವರ ಸಂಪರ್ಕ ಸಿಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಒಂದೊಂದು ಕಡೆ ಒಂದೊಂದು ಬೆಲೆ OLX ತಾಣದಲ್ಲಿ ಈ ವಿಚಿತ್ರ ಜಾಹೀರಾತಿನಲ್ಲಿ ಮಗು ಅಳುವ ಚಿತ್ರ ಕಾಣಿಸಿಕೊಂಡಿದ್ದು, ನಮ್ಮ ಆಫೀಸ್ ಕೆಲಸ ಮಾಡಲು ಬಿಡುತ್ತಿಲ್ಲ. ನಾವು ಜೀವಿಸಲು ಕೆಲಸ ಮುಖ್ಯ, ಮಗುವಿನಿಂದ ನಿದ್ದೆ ಹಾಳಾಗಿದೆ' ಎಂದು ಹೇಳಲಾಗಿದೆ. ಮಗುವಿನ ಬೆಲೆ 270 ಪೌಂಡ್ ನಿಂದ ಹಿಡಿದು 430 ಪೌಂಡ್ ತನಕ ಸುತ್ತಾಡಿದೆ.
2006ರಲ್ಲಿ ಆರಂಭವಾದ OLX ವೆಬ್ ತಾಣ, 2010ರಲ್ಲಿ ಬ್ರೆಜಿಲ್ ನಲ್ಲಿ ಜನಪ್ರಿಯತೆ ಗಳಿಸಿತು. ಸುಮಾರು 107ಕ್ಕೂ ಅಧಿಕ ದೇಶಗಳಲ್ಲಿ ತನ್ನ ಆನ್ ಲೈನ್ ಶಾಪಿಂಗ್ ಜಾಲ ಹೊಂದಿರುವ OLX ಜಾಹೀರಾತು ಸಂಸ್ಥೆ ತನ್ನ ಉಚಿತ ಜಾಹೀರಾತು ವೆಬ್ ಸೈಟ್ ನಲ್ಲಿ ಈ ರೀತಿ ಪ್ರಮಾದವಾಗಲು ಬಿಟ್ಟಿದ್ದಾದರೂ ಹೇಗೆ? ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಕೇಳಲಾಗುತ್ತಿದೆ. ಸುಮಾರು 100 ಮಿಲಿಯನ್ ಗೂ ಅಧಿಕ ಗ್ರಾಹಕರು ವೆಬ್ ತಾಣವನ್ನು ಬಳಸುತ್ತಿದ್ದಾರೆ.
Children and Adolescents Act ಪ್ರಕಾರ ಈ ಜಾಹೀರಾತು ನೀಡಿದ ಸಂಸ್ಥೆ ಅಥವಾ ವ್ಯಕ್ತಿ ಮೇಲೆ ಕನಿಷ್ಠ 2 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಪೋಷಕರ ಒಪ್ಪಿಗೆ ಇಲ್ಲದೆ ಯಾರೋ ಸುಳ್ಳು ಜಾಹೀರಾತು ನೀಡಿದ್ದರೂ ಕನಿಷ್ಠ 3 ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಈ ರೀತಿ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ 12 ವರ್ಷದ ಮಗಳನ್ನು ಕ್ರೊಮಿನಿಯಾದ ಅಪ್ಪನೊಬ್ಬ 5000 ಯುಎಸ್ ಡಿ(1340 ಪೌಂಡ್ ) ಗೆ ಮಾರಾಟಕ್ಕಿಟ್ಟಿದ್ದ ಘಟನೆ ನಡೆದಿತ್ತು.












Click it and Unblock the Notifications