ಪಾಕಿಸ್ತಾನದಲ್ಲಿ ಮತ್ತೆ ಇಬ್ಬರ ಮೆದುಳು ತಿಂದ ಹುಳು!
ಇಸ್ಲಾಮಾಬಾದ್: ಮನುಷ್ಯನ ಮೇಲೆ ಎಂತೆಂತಹ ಜೀವಿಗಳು, ವೈರಸ್ & ಬ್ಯಾಕ್ಟೀರಿಯಾ ದಾಳಿ ನಡೆಸುತ್ತವೋ ದೇವರೇ ಬಲ್ಲ. ಅದರಲ್ಲೂ ಆಧುನಿಕ ಜಗತ್ತಿನಲ್ಲಿ ಮನುಷ್ಯನೇ ಈ ರೀತಿ ಅಪಾಯಕಾರಿ ವೈರಸ್ ಸೃಷ್ಟಿ ಮಾಡಿ ತನ್ನ ನಾಶಕ್ಕೆ ತಾನೇ ಸಿದ್ಧವಾಗಿದ್ದಾನೆ. ಈಗ ಮೆದುಳು ತಿನ್ನುವ 'ಹುಳು'ಗಳ ಕಾಟಕ್ಕೆ ಪಾಕಿಸ್ತಾನ ದೇಶದಲ್ಲಿ ಹಲವರ ಜೀವ ಹೋಗಿದೆ.
ಮೊನ್ನೆ ಮೊನ್ನೆ ತಾನೆ ಪಾಕಿಸ್ತಾದಲ್ಲಿ ಯುವಕನೊಬ್ಬ ಮೆದುಳು ತಿನ್ನುವ 'ಹುಳು' ಅಂದ್ರೆ 'ನಾಗ್ಲೆರಿಯಾ ಫೌಲೆರಿ' ಎಂಬ ರೋಗಕ್ಕೆ ಬಲಿಯಾಗಿದ್ದ. ಆದರೆ ಇದೀಗ ಮತ್ತೊಂದು ಶಾಕ್ ಕೊಡುವ ಸುದ್ದಿಯನ್ನ ಪಾಕಿಸ್ತಾನ ಆರೋಗ್ಯ ಇಲಾಖೆ ರಿವೀಲ್ ಮಾಡಿದೆ. ಅಂದ್ರೆ ಇದೀಗ ಪಾಕಿಸ್ತಾನದಲ್ಲಿ ಮೆದುಳು ತಿನ್ನುವ 'ಹುಳು'ಗೆ ಬಲಿಯಾಗುತ್ತಿರುವ ಜನರ ಸಂಖ್ಯೆ ದಿಢೀರ್ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಆ ಬಗ್ಗೆ ಸ್ಫೋಟಕ ಮಾಹಿತಿ ಇಲ್ಲಿದೆ.

ಒಂದೇ ವಾರದಲ್ಲಿ ಇಬ್ಬರು ಬಲಿ!
ಪಾಕಿಸ್ತಾನ ಎಂಬ ನರಕದಂತಹ ದೇಶದಲ್ಲಿ ಎಲ್ಲವೂ ಅಯೋಮಯ. ಅದರಲ್ಲೂ ಅಲ್ಲಿನ ರಾಜಕಾರಣಿಗಳ ನಡುವಿನ ಕಿತ್ತಾಟಕ್ಕೆ ದೇಶ ಹಾಳಾಗಿ ಹೋಗುತ್ತಿದೆ. ಅದೇ ರೀತಿ ಪಾಕ್‌ನ ಆರೋಗ್ಯ ವ್ಯವಸ್ಥೆ ಹದಗೆಟ್ಟು ಹೋಗಿದೆ. ಹೀಗಾಗಿ ಅಲ್ಲಿ 'ನಾಗ್ಲೆರಿಯಾ ಫೌಲೆರಿ' ಅಥವಾ ಮೆದುಳು ತಿನ್ನುವ ಅಮೀಬಾ ರೋಗಕ್ಕೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಕಳೆದ 1 ವಾರದ ಅವಧಿಯಲ್ಲಿ ಇಬ್ಬರು ಇದೇ ರೋಗಕ್ಕೆ ಬಲಿಯಾಗಿದ್ದಾರಂತೆ.
ನರಳಾಡಿ ಪ್ರಾಣಬಿಟ್ಟ ಮಹಿಳೆ
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಓರ್ವ ಮಹಿಳೆ ಹಾಗೂ 45 ವರ್ಷದ ಪುರಷ ಮೆದುಳು ತಿನ್ನುವ 'ಹುಳು' ಕಾಟಕ್ಕೆ ಬಲಿಯಾಗಿದ್ದಾರೆ. ಅದರಲ್ಲೂ ಮಹಿಳೆಯನ್ನ ಉಳಿಸಿಕೊಳ್ಳಲು ಪಾಕಿಸ್ತಾನದ ಆರೋಗ್ಯ ಇಲಾಖೆ ಸಾಕಷ್ಟು ಪ್ರಯತ್ನಪಟ್ಟಿದೆ. ಆದರೆ ಈ ರೋಗಕ್ಕೆ ಪಾಕಿಸ್ತಾನದಲ್ಲಿ ಸೂಕ್ತ ಚಿಕಿತ್ಸೆ ಇಲ್ಲ. ಹೀಗಾಗಿ ನರಳಾಡಿ, ನರಳಾಡಿ ಮಹಿಳೆ ಪ್ರಾಣಬಿಟ್ಟಿದ್ದಾಳೆ. ಅದೇ ರೀತಿ 45 ವರ್ಷ ವಯಸ್ಸಿನ ಪುರುಷ ಕೂಡ ಇದೇ ರೋಗಕ್ಕೆ ಬಲಿಯಾಗಿದ್ದಾನೆ.

ಡೆಡ್ಲಿ ಅಮೀಬಾ ಮೆದುಳು ತಿನ್ನುತ್ತೆ!
ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ವೈರಸ್ ಒಂದು ಏಕಕೋಶ ಜೀವಿ, ಅಂದ್ರೆ ಇದು ಅಮೀಬಾ. ಮೊದಲು ಮನುಷ್ಯನ ಮೂಗಿನ ಒಳಗೆ ಪ್ರವೇಶ ಮಾಡುವ ವೈರಸ್, ಅಲ್ಲಿಂದ ನೇರ ಮೆದುಳು ಸೇರಿ ನಂತರ ಬೆನ್ನುಹುರಿಗೂ ನುಸುಳುತ್ತದೆ. ಹೀಗೆ ಮೆದುಳು ಸೇರಿದ ವೈರಸ್ ಮನುಷ್ಯನ ಮೆದುಳನ್ನ ತಿನ್ನಲು ಪ್ರಾರಂಭಿಸಿ, ಕೊನೆಗೆ ಜೀವ ತೆಗೆಯುತ್ತದೆ. ಹೀಗಾಗಿ 'ನಾಗ್ಲೆರಿಯಾ ಫೌಲೆರಿ' ಡೆಡ್ಲಿ ವೈರಸ್ ಆಗಿದ್ದು, ಅಮೆರಿಕದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇದೀಗ ಪಾಕಿಸ್ತಾನಕ್ಕೂ ಎಂಟ್ರಿ ಕೊಟ್ಟು ಬೆಚ್ಚಿಬೀಳಿಸಿದೆ.
1 ವಾರದಲ್ಲಿ ಜೀವ ಹೋಗುತ್ತೆ ಹುಷಾರ್!
ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಅಮೀಬಾ ಅದೆಷ್ಟು ಡೇಂಜರಸ್ ಅಂದ್ರೆ, ಸೋಂಕಿಗೆ ಸರಿಯಾದ ಔಷಧ ಲಭ್ಯವಿಲ್ಲ. ಅಕಸ್ಮಾತ್ ನಾಗ್ಲೆರಿಯಾ ಫೌಲೆರಿ ಮನುಷ್ಯನ ಮೆದುಳು ಸೇರಿದರೆ ಆ ಕ್ಷಣದಿಂದಲೇ ಮೆದುಳಿನ ಮೇಲೆ ದಾಳಿ ಮಾಡಿ ತಿನ್ನಲು ಆರಂಭಿಸುತ್ತದೆ. 1 ವಾರದಲ್ಲಿ ಆತನ ಜೀವವನ್ನೇ ತೆಗೆದುಬಿಡುತ್ತದೆ. ಇದ್ಯಾವುದೂ ಸೋಂಕಿತನ ಗಮನಕ್ಕೆ ಬರುವುದೇ ಇಲ್ಲ. ಅಷ್ಟರಮಟ್ಟಿಗೆ ಖತರ್ನಾಕ್ ನಾಗ್ಲೆರಿಯಾ ಫೌಲೆರಿ ಸೂಕ್ಷ್ಮಾಣು ಜೀವಿ. ಇದೇ ಕಾರಣಕ್ಕೆ ಮೆದುಳು ತಿನ್ನುವ ಅಮೀಬಾ ಬಗ್ಗೆ ಎಲ್ಲರಿಗೂ ಭಯ ಭಯ.
ಜ್ವರ, ವಾಂತಿ, ತಲೆನೋವು ಲಕ್ಷಣ
ಮೆದುಳು ತಿನ್ನುವ ಅಮೀಬಾ ದೇಹ ಪ್ರವೇಶಿಸಿದರೆ ಮೆಲ್ಲಗೆ ತನ್ನ ಕೆಲಸ ಆರಂಭಿಸುತ್ತದೆ. ಸೂಕ್ಷ್ಮಾಣು ಜೀವಿ ಕೆಲಸ ಆರಂಭಿಸಿದ ಒಂದೆರಡು ದಿನದಲ್ಲಿ ಜ್ವರ & ತಲೆನೋವು ಶುರು ಆಗುತ್ತದೆ. ಹೀಗೆ ಆರಂಭವಾಗುವ ಸೋಂಕಿನ ಲಕ್ಷಣ ಭಾರಿ ವಾಂತಿಯಾಗುವಂತೆ ಮಾಡುತ್ತೆ. ಮನುಷ್ಯನ ರೋಗನಿರೋಧಕ ಶಕ್ತಿ ದಿನದಿಂದ ದಿನಕ್ಕೆ ಕುಸಿಯುತ್ತಾ ಸಾಗಿ, 1 ವಾರದ ಒಳಗಾಗಿ ಸೋಂಕಿತ ವ್ಯಕ್ತಿ ಮೃತಪಡುತ್ತಾನೆ. ಅಷ್ಟರೊಳಗೆ ಅಮಿಬಾ ವಂಶಕ್ಕೆ ಸೇರಿದ ಈ ನಾಗ್ಲೆರಿಯಾ ಫೌಲೆರಿ ಸೂಕ್ಷ್ಮಾಣು ಜೀವಿ ಮೆದುಳನ್ನು ತಿಂದು ಮುಗಿಸಿರುತ್ತದೆ.












Click it and Unblock the Notifications