ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಫೋಟಕ್ಕೆ 22 ಮಂದಿ ಸಾವು

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಅದು ಮಸೀದಿಯನ್ನು ಧ್ವಂಸಗೊಳಿಸಿದ್ದಷ್ಟೇ ಅಲ್ಲ, ಹತ್ತಿರದ ನೂರ್ ಮಾರುಕಟ್ಟೆಯ ಬಳಿ ನಿಲ್ಲಿಸಾಗಿದ್ದ ದ್ವಿಚಕ್ರ ವಾಹನಗಳು, ಅಂಗಡಿಗಳಿಗೂ ಹಾನಿ ಉಂಟು ಮಾಡಿದೆ.

ಪರಾಚಿನಾರ್, ಮಾರ್ಚ್ 31: ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ಗಡಿಭಾಗದಲ್ಲಿರುವ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸುವ ಕುರಂ ಪ್ರಾಂತ್ಯದ ಪ್ರಮುಖ ನಗರವಾದ ಪರಾಚಿನಾರ್ ನಲ್ಲಿ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ 22 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ಕನಿಷ್ಠ 50 ಜನರು ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ನಗರದ ನೂರ್ ಮಾರುಕಟ್ಟೆ ಬಳಿಯಿರುವ ಶಿಟ್ಟೆ ಮುಸ್ಲಿಂ ಸಮುದಾಯದ ಪ್ರಾರ್ಥನಾ ಮಂದಿರದ ಆಸುಪಾಸಿನಲ್ಲೇ ಈ ಸ್ಫೋಟ ಸಂಭವಿಸಿದೆ.

BOMB BLAST IN PAKISTAN: ATTACK NEAR PARACHINAR'S SHIITE MOSQUE KILLS 22

ಪಾಕಿಸ್ತಾನಿ ತಾಲಿಬಾನ್ ಉಗ್ರ ಸಂಘಟನೆಯಾದ ಜಮ್ಮಾತ್-ಉಲ್- ಅಹ್ರಾರ್ ಈ ಸ್ಫೋಟದ ಹೊಣೆ ಹೊತ್ತುಕೊಂಡಿದೆ.

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಅದು ಮಸೀದಿಯನ್ನು ಧ್ವಂಸಗೊಳಿಸಿದ್ದಷ್ಟೇ ಅಲ್ಲ, ಹತ್ತಿರದ ನೂರ್ ಮಾರುಕಟ್ಟೆಯ ಬಳಿ ನಿಲ್ಲಿಸಾಗಿದ್ದ ದ್ವಿಚಕ್ರ ವಾಹನಗಳು, ಅಂಗಡಿಗಳಿಗೂ ಹಾನಿ ಉಂಟು ಮಾಡಿದೆ.

ಕುರಂ ಪ್ರಾಂತ್ಯವು ಈ ಹಿಂದೆ, ಪಾಕಿಸ್ತಾನಿ ತಾಲಿಬಾನಿ ಹಾಗೂ ಸುನ್ನಿ ಉಗ್ರರ ವಶದಲ್ಲಿತ್ತು. ಪಾಕಿಸ್ತಾನ ಸೇನೆಯು ಇತ್ತೀಚೆಗೆ ಈ ಪ್ರಾಂತ್ಯವನ್ನು ವಶಪಡಿಸಿಕೊಂಡಿದೆಯಾದರೂ, ಈ ಭಾಗದಲ್ಲಿ ಹಿಂಸಾಚಾರ ತಾಂಡವವಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+