• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ 'ಶಸ್ತ್ರ ಚಿಕಿತ್ಸೆ' ಮುಂದಕ್ಕೆ: ಕಾರಣವೇನು?

|
Google Oneindia Kannada News

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ 'ಶಸ್ತ್ರ ಚಿಕಿತ್ಸೆಗಳು' ತುಂಬಾ ತಡವಾಗುತ್ತಿದೆ. ನಿಗದಿ ಮಾಡಿದ ದಿನಾಂಕಕ್ಕಿಂತ ಸುಮಾರು ಒಂದೆರೆಡು ತಿಂಗಳುಗಳ ಕಾಲ ಮುಂದಕ್ಕೆ ಹಾಕಲಾಗುತ್ತಿದೆ.

ಹೌದು, ಕೊರೊನಾ ಸೋಂಕು ಇಡೀ ವಿಶ್ವವನ್ನೇ ಬುಡಮೇಲು ಮಾಡಿದೆ, ಒಂದೆಡೆ ಆರ್ಥಿಕ ಪರಿಸ್ಥಿತಿ ಇದ್ದರೆ ಮತ್ತೊಂದೆಡೆ ಹಣವಿದ್ದರೂ ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಸೋಂಕು ಶುರುವಾದಾಗಿನಿಂದ ರಕ್ತದಾನ ಮಾಡಲು ಜನರು ಮುಂದೆ ಬಾರದ ಕಾರಣ, ಶಸ್ತ್ರ ಚಿಕಿತ್ಸೆಗೆ ತೊಡಕುಂಟಾಗಿದೆ. ಈ ಮೊದಲು ರಕ್ತದಾನ ಎಥೇಚ್ಛವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೂಡ ಹಲವು ಗುಂಪಿನ ರಕ್ತಕ್ಕಾಗಿ ಅಲೆಯುವ ಪರಿಸ್ಥಿತಿ ಇತ್ತು.

ಆದರೆ ಈಗಿನ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ. ಹಾಗೆಯೇ ಇದೀಗ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲು ರಕ್ತದ ಕೊರತೆ ಎದುರಾಗಿ ವೈದ್ಯರು ಕೂಡ ಏನೂ ತೋಚದ ಸ್ಥಿತಿಯಲ್ಲಿದ್ದಾರೆ. ಯಾವ್ಯಾವ ದೇಶದಲ್ಲಿ ಕೊರೊನಾ ಪರಿಸ್ಥಿತಿ ಹೇಗಿದೆ ಎಂಬುದು ನೋಡೋಣ....

ಪೋರ್ಚುಗಲ್: ಪೋರ್ಚುಗೀಸ್ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ ಲಿಸ್ಬನ್ ಪ್ರದೇಶದಲ್ಲಿ ಹೊಸ ಡೆಲ್ಟಾ ರೂಪಾಂತರಿ ಹೆಚ್ಚಾಗಿದ್ದು, ಜನರಿಗೆ ಆತಂಕವನ್ನು ಕೂಡ ಹೆಚ್ಚಿಸಿದೆ.

ಲಂಡನ್: ಲಂಡನ್‌ನ ಸಾಸರ್ ಸ್ಟೇಟಿಯಂನ್ನು ಸೂಪರ್ ಪಾಪ್‌ ಅಪ್ ಲಸಿಕಾ ಕೇಂದ್ರವಾಗಿ ಮಾರ್ಪಾಡು ಮಾಡಲಾಗಿದೆ. ಬ್ರಿಟನ್‌ ಯುವಕರಿಗೆ ಕೊರೊನಾ ಲಸಿಕೆ ನೀಡಲು ಮುಂದಾಗಿದೆ.

ಭಾರತ: ಭಾರತದಲ್ಲಿ 45 ರಿಂದ ಮೇಲ್ಪಟ್ಟವರು ಹಾಗೂ 18 ರಿಂದ 44 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುತ್ತಿದೆ. ದಿನೇ ದಿನೇ ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದು, ಇಂದು ಸುಮಾರು 53 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಸಿಯೋಲ್: ದಕ್ಷಿಣ ಕೊರಿಯಾದಲ್ಲಿ 6 ಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರುವುದಕ್ಕೆ ನಿರ್ಬಂಧ ಹೇರಲಾಗಿದೆ. ಮಧ್ಯರಾತ್ರಿವರೆಗೂ ರೆಸ್ಟೋರೆಂಟ್, ಕೆಫೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
ಬೀಜಿಂಗ್: ದೇಶದಲ್ಲಿ 1 ಬಿಲಿಯನ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ ಎಂದು ಚೀನಾ ತಿಳಿಸಿದೆ.

ಮಾಸ್ಕೋ: ದೇಶದಲ್ಲಿ 17,906 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, ಜೂನ್‌ ಮೊದಲ ವಾರಕ್ಕೆ ಹೋಲಿಸಿದರೆ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ.

ಕಾಬೂಲ್: ಕಾಬೂಲ್‌ನಲ್ಲಿ ಆಮ್ಲಜಕದ ಕೊರತೆಯಿದ್ದು, ಕೊರೊನಾ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಆಮ್ಲಜನಕದ ಶೇಖರಣೆಯಲ್ಲಿ ತೊಡಗಿದೆ.

 ಶಸ್ತ್ರ ಚಿಕಿತ್ಸೆ ಮುಂದೂಡಲಾಗಿತ್ತು

ಶಸ್ತ್ರ ಚಿಕಿತ್ಸೆ ಮುಂದೂಡಲಾಗಿತ್ತು

''ಕೊರೊನಾ ಸೋಂಕು ಎಲ್ಲೆಡೆ ಬಾಧಿಸುತ್ತಿದ್ದ ಕಾರಣ ಶಸ್ತ್ರ ಚಿಕಿತ್ಸೆಯನ್ನು ಮುಂದೂಡಲಾಗಿತ್ತು, ಆದರೆ ಇದೀಗ ಕೊರೊನಾ ಲಾಕ್‌ಡೌನ್ ಎಲ್ಲವೂ ಸಡಿಲಿಕೆಗೊಂಡ ಬಳಿಕ ಶಸ್ತ್ರ ಚಿಕಿತ್ಸೆ ಮಾಡಲು ಮುಂದಾದರೆ ರಕ್ತದ ಕೊರತೆ ಎದುರಾಗಿ ಮತ್ತೆ ಮುಂದಕ್ಕೆ ಹಾಕುವ ಪರಿಸ್ಥಿತಿ ಎದುರಾಗಿದೆ'' ಎಂದು ಟ್ರಾನ್ಸ್‌ಫೂಷನ್ ಮೆಡಿಸಿನ್ ನಿರ್ದೇಶಕ ವಿಶೇಷ್‌ ಚಿಬ್ಬರ್ ಹೇಳಿದ್ದಾರೆ.

 ರಕ್ತದ ಕೊರತೆ ವಿಶೇಷವೇನಲ್ಲ

ರಕ್ತದ ಕೊರತೆ ವಿಶೇಷವೇನಲ್ಲ

''ರಕ್ತದ ಕೊರತೆ ಎಂಬುದು ವಿಶೇಷವೇನಲ್ಲ, ಆದರೆ ಈ ಬಾರಿ ಮತ್ತಷ್ಟು ಕೊರತೆ ಉಂಟಾಗಿದೆ, ಸಾಮಾನ್ಯವಾಗಿ ಬೇಸಿಗೆಯಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಿ ರಕ್ತವನ್ನು ಶೇಖರಿಸಿಟ್ಟುಕೊಳ್ಳಲಾಗುತ್ತಿತ್ತು ಆದರೆ ಈ ಬಾರಿ ಕೊರೊನಾ ಸೋಂಕು ಇದ್ದ ಕಾರಣ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಶಸ್ತ್ರ ಚಿಕಿತ್ಸೆ ದಿನಾಂಕವನ್ನು ಮುಂದೂಡಲಾಗುತ್ತಿದೆ'' ಎಂದು ಅಮೆರಿಕನ್ ಅಸೋಸಿಯೇಷನ್ ಆಫ್ ಬ್ಲಡ್ ಬ್ಯಾಂಕ್ ಮುಖ್ಯ ವೈದ್ಯಾಧಿಕಾರಿ ಡಾ. ಕ್ಲಾಡಿಯಾ ಕೋನ್ ತಿಳಿಸಿದ್ದಾರೆ.

 ರೆಡ್‌ ಕ್ರಾಸ್ ವಿಶ್ವಾದ್ಯಂತ ವಾರದ 5 ದಿನ ರಕ್ತ ಪೂರೈಕೆ ಮಾಡುತ್ತದೆ

ರೆಡ್‌ ಕ್ರಾಸ್ ವಿಶ್ವಾದ್ಯಂತ ವಾರದ 5 ದಿನ ರಕ್ತ ಪೂರೈಕೆ ಮಾಡುತ್ತದೆ

ರೆಡ್ ಕ್ರಾಸ್ ಸಾಮಾನ್ಯವಾಗಿ ವಾರದ ಐದು ದಿನ ರಕ್ತವನ್ನು ಪೂರೈಕೆ ಮಾಡುತ್ತದೆ, ಆದರೆ ಇದೀಗ 'ಒ' ರಕ್ತದ ಪೂರೈಕೆ ಕೇವಲ ಅರ್ಧ ದಿನದಲ್ಲೇ ಖಾಲಿಯಾಗುತ್ತಿದೆ. ಕೊರೊನಾ ಲಾಕ್‌ಡೌನ್‌ಗಳು ತೆರವಾದರೂ ಕೂಡ ರಕ್ತದಾನ ಶಿಬಿರಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ.

 ಭಾರತದಲ್ಲೂ ಈ ಪರಿಸ್ಥಿತಿ ಇದೆ

ಭಾರತದಲ್ಲೂ ಈ ಪರಿಸ್ಥಿತಿ ಇದೆ

ರೆಡ್ ಕ್ರಾಸ್ ಸೇರಿದಂತೆ ಹಲವು ಸಂಸ್ಥೆಗಳು ಕಚೇರಿಗಳು, ಕಾಲೇಜುಗಳು ಸೇರಿದಂತೆ ಹಲವೆಡೆ ರಕ್ತದಾನ ಶಿಬಿರಗಳನ್ನು ವರ್ಷದಲ್ಲಿ ಕನಿಷ್ಠವೆಂದರೂ 20ಕ್ಕಿಂತ ಹೆಚ್ಚು ಬಾರಿ ನಡೆಸುತ್ತಿದ್ದರು. ಆದರೆ ಕೊರೊನಾ ಸೋಂಕು ಬಂದ ಬಳಿಕ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಿಲ್ಲ. ಕಳೆದ ವರ್ಷ ಕಾಲೇಜುಗಳು ಆರಂಭವಾದ ಸಂದರ್ಭದಲ್ಲಿ ಕೆಲವು ಕಾಲೇಜುಗಳಲ್ಲಿ ರಕ್ತದಾನ ಶಿಬಿರ ನಡೆಸಿದ್ದರು. ಆದರೂ ಪ್ರತಿವರ್ಷದ ಶೇ.10ರಷ್ಟು ಕೂಡ ಈ ಬಾರಿ ರಕ್ತದಾನ ಶಿಬಿರಗಳು ನಡೆದಿಲ್ಲ. ಹೀಗಾಗಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ರಕ್ತದ ಕೊರತೆಯುಂಟಾಗಿದೆ.

English summary
Most of the countries are facing blood shortage due to Coronavirus it Leads to delay in surgeries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X