ಶಿಕಾಗೋ: ಡೇರ್‌ಡೆವಿಲ್ ನಡಿಗೆ ವಿಡಿಯೋ ನೋಡಿ
ಶಿಕಾಗೋ, ನ.4: ಡೇರ್‌ಡೆವಿಲ್ ನಿಕ್ ವಾಲೆಂಡಾ ಮೈನವರೇಳಿಸುವ ನಡಿಗೆ ಕಂಡು ಇಡೀ ವಿಶ್ವವೇ ಕಣ್ಣರಳಿ ನೋಡಿದೆ. ಭೂಮಿಯಿಂದ 500 ಅಡಿ ಎತ್ತರದಲ್ಲಿ ಎರಡು ಗಗನಚುಂಬಿ ಕಟ್ಟಡಗಳ ನಡುವಿನ 454 ಅಡಿಗಳ ದೂರವನ್ನು ನಿಕ್ ವಾಲೆಂಡಾ 6 ನಿಮಿಷಗಳಲ್ಲಿ ಕ್ರಮಿಸಿದ್ದಾರೆ. ಈ ಮೂಲಕ ಎರಡು ವಿಶ್ವದಾಖಲೆ ಬರೆದಿದ್ದಾರೆ.
ಯಾವುದೇ ಸುರಕ್ಷಾ ಬಲೆ ಅಥವಾ ಉಪಕರಣ ಬಳಸದೆ ಶಿಕಾಗೊದ ಗಗನಚುಂಬಿ ಕಟ್ಟಡಗಳ ನಡುವೆ ಕಟ್ಟಲಾದ ಬಿಗಿಹಗ್ಗ(3/4 ಇಂಚು ದಪ್ಪವಿದ್ದ)ದ ಮೇಲೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ನಿಕ್ ಸರಣಿ ನಡಿಗೆ ಇಟ್ಟರು.
ಶಿಕಾಗೊದ ಗಗನ ಚುಂಬಿಕಟ್ಟಡ ವೆಸ್ಟ್ ಟವರ್ ಹಾಗೂ ಲಿಯೋ ಬರ್ನೆಟ್ ಕಟ್ಟಡದ ನಡುವಿನ 28 ಮೀಟರ್ ಅಂತರದಲ್ಲಿ ಕಟ್ಟಲಾದ ಹಗ್ಗದ ಮೇಲೆ ನಡಿಗೆ ಇಟ್ಟ ನಿಕ್ ಎರಡು ದಾಖಲೆ ಆಳಿಸಿ ಹಾಕಿದರು. ಒಟ್ಟಾರೆ 671 ಅಡಿ ಎತ್ತರದ ವಿಶ್ವದಾಖಲೆ ಮುರಿದು ಗಿನ್ನಿಸ್ ರೆಕಾರ್ಡ್ ಸೇರಿದರು. ನಂತರ ಮತ್ತೊಮ್ಮೆ ಹಗ್ಗಕ್ಕೆ ಜಿಗಿದು ಕಣ್ಣು ಪಟ್ಟಿ ಕಟ್ಟಿಕೊಂಡು ಹಗ್ಗದ ಮೇಲೆ ನಡಿಗೆ ಇಟ್ಟಿದ್ದು ದಾಖಲೆಯಾಗಿದೆ.

ತುದಿಗೂ ನದಿಯಾಚಿಗಿನ ಇನ್ನೊಂದು ಕಟ್ಟಡದ ತುದಿಗೂ ಕಟ್ಟಲಾದ 454 ಅಡಿ(138 ಮೀಟರ್) ಉದ್ದದ ಬಿಗಿಹಗ್ಗದ ಮೇಲೆ ನಡಿಗೆಯನ್ನು ಪೂರ್ಣಗೊಳಿಸಲು ಕೇವಲ ಆರೂವರೆ ನಿಮಿಷಗಳ ಸಮಯ ತೆಗೆದುಕೊಂಡರು.
ಶಿಕಾಗೊದ ಮರಿನಾ ಸಿಟಿಯಲ್ಲಿನ ಎರಡು ಗೋಪುರಗಳ ನಡುವಿನ ಸುಮಾರು 28 ಮೀಟರ್ ಅಂತರದಲ್ಲಿ ಕಟ್ಟಲಾದ ಹಗ್ಗದ ಮೇಲೆ ವಾಲೆಂಡಾ ಕಣ್ಣುಗಳಿಗೆ ಪಟ್ಟಿ ಕಟ್ಟಿಕೊಂಡು ನಡಿಗೆ ಪೂರ್ಣಗೊಳಿಸಿರುವುದು ನೆರೆದಿದ್ದ ಜನರಲ್ಲಿ ಮೈನವಿರೇಳಿಸುವಂತೆ ಮಾಡಿತು.
35 ವರ್ಷ ವಯಸ್ಸಿನ ನಿಕ್ ಅವರ ನಡಿಗೆಯ ನೇರಪ್ರಸಾರವನ್ನು ಡಿಸ್ಕವರಿ ಚಾನೆಲ್ 10 ಸೆಕೆಂಡ್‌ಗಳಷ್ಟು ವಿಳಂಬಗೊಳಿಸಿ ಬಿತ್ತರಿಸಿತ್ತು. ಪ್ರದರ್ಶನದ ನಡುವೆ ಅನಾಹುತಗಳೇನಾದರೂ ಸಂಭವಿಸಿದಲ್ಲಿ ಕಾರ್ಯಕ್ರಮ ನಿರ್ಮಾಣಕಾರರು ಅದನ್ನು ಪ್ರಸಾರದಿಂದ ಅದನ್ನು ತೆಗೆದುಹಾಕಲು ಅವಕಾಶ ಕಲ್ಪಿಸುವುದಕ್ಕಾಗಿ ನೇರಪ್ರಸಾರದಲ್ಲಿ ಈ ವಿಳಂಬಗತಿಯನು ಅನುಸರಿಸಲಾಗಿತ್ತು.
2012ರಲ್ಲಿ ನಯಾಗರಾ ಜಲಪಾತ ಹಾಗೂ 2013ರಲ್ಲಿ ಲಿಟ್ಲ್ ಕೊಲೊರಾಡೊ ರಿವರ್ ಗಾರ್ಜ್‌ನಲ್ಲಿ ಏರ್ಪಡಿಸಲಾಗಿದ್ದ ವಾಲೆಂಡಾರ ಸಾಹಸ ನಡಿಗೆ ಪ್ರದರ್ಶನವನ್ನು ತಲಾ ಸುಮಾರು 13 ದಶಲಕ್ಷ ಜನರು ವೀಕ್ಷಿಸಿದ್ದರು. 2ನೇ ವಯಸ್ಸಿಗೆ ಹಗ್ಗದ ಮೇಲಿನ ನಡಿಗೆ ಆರಂಭಿಸಿದ ನಿಕ್ ಅವರಿಗೆ ಅವರ ಮುತ್ತಜ್ಜ ಕಾರ್ಲ್ ವಾಲೆಂಡಾ ಅವರೇ ಸ್ಪೂರ್ತಿ. ಸರ್ಕಸ್ ನಲ್ಲಿ ಸಾಹಸ ಪ್ರದರ್ಶಿಸುತ್ತಿದ್ದ ಅವರ ಮುತ್ತಜ್ಜ ಕಲಿಸಿಕೊಟ್ಟ ಪಾಠವೇ ಇಂದು ನಿಕ್ ರನ್ನು ಜಗದ್ವಿಖ್ಯಾತಗೊಳಿಸಿದೆ. ನಿಕ್ ಸಾಹಸದ ವಿಡಿಯೋ ಇಲ್ಲಿದೆ...











Click it and Unblock the Notifications