ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾದಲ್ಲಿ ಮತ್ತೊಂದು ಸ್ಫೋಟ: ಉಗ್ರದಾಳಿ ಶಂಕೆ

|
Google Oneindia Kannada News

ಕೊಲಂಬೋ, ಏಪ್ರಿಲ್ 25: ಭೀಕರ ಉಗ್ರದಾಳಿಯಿಂದ ಚೇತರಿಸಿಕೊಳ್ಳುವುದಕ್ಕೇ ಸಾಧ್ಯವಾಗದ ರೀತಿಯಲ್ಲಿ ಶ್ರೀಲಂಕಾದಲ್ಲಿ ಮತ್ತೆ ಮತ್ತೆ ಸ್ಫೋಟದ ಸದ್ದು ಕೇಳುತ್ತಲೇ ಇದೆ.

ಇದೀಗ ಶ್ರೀಲಂಕಾ ರಾಜಧಾನಿ ಕೊಲಂಬೋದಿಂದ 40 ಕಿಮೀ ದೂರದಲ್ಲಿರುವ ಪುಗೋಡಾ ಎಂಬ ನಗರದಲ್ಲಿ ಸ್ಫೋಟದ ಸದ್ದು ಕೇಳಿದ್ದು, ಉಗ್ರದಾಳಿಯೇ ಇರಬಹುದು ಎಂದು ಶಂಕಿಸಲಾಗಿದೆ.

ಇದೀಗ ಬಂದ ವರದಿ: ಕೊಲಂಬೋದಲ್ಲಿ ಮತ್ತೊಂದು ಬಾಂಬ್ ಸ್ಫೋಟವಾಗಿಲ್ಲ, ಸ್ಪಷ್ಟನೆಇದೀಗ ಬಂದ ವರದಿ: ಕೊಲಂಬೋದಲ್ಲಿ ಮತ್ತೊಂದು ಬಾಂಬ್ ಸ್ಫೋಟವಾಗಿಲ್ಲ, ಸ್ಪಷ್ಟನೆ

ಸ್ಫೋಟದ ಸುದ್ದಿಯನ್ನು ರಾಯ್ಟರ್ಸ್ ನ್ಯೂಸ್ ಆರ್ಗನೈಸೇಶನ್ ವರದಿ ಮಾಡಿದೆ.

Blast heard in Sri Lanka again

ಕಸದ ತೊಟ್ಟಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಖಾಲಿ ಜಾಗವಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಏಪ್ರಿಲ್ 21 ರಂದು ಶ್ರೀಲಂಕಾದಲ್ಲಿ ಎಂಟು ಕಡೆ ನಡೆದ ಸರಣಿ ಬಾಂಬ್ ಸ್ಫೋಟದ ಬಳಿಕೆ ಎಲ್ಲೆಲ್ಲೂ ಟಾಸ್ಕ್ ಪೋರ್ಸ್ ಪರಿಶೀಲನೆ ನಡೆಸುತ್ತಿದ್ದು, ನಿನ್ನೆ(ಬುಧವಾರ)ಯೂ ಬೈಕ್ ವೊಂದರಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾದ ಹಿನ್ನೆಲೆಯಲ್ಲಿ ಬೈಕ್ ಅನ್ನೇ ಸ್ಫೋಟಿಸಲಾಗಿತ್ತು. ಆದರೆ ಇದು ಬಾಂಬ್ ಸ್ಫೋಟವಲ್ಲ ಎಂದು ನಂತರ ಶ್ರೀಲಂಕಾ ಸ್ಫಷ್ಟನೆ ನೀಡಿತ್ತು.

ಭಾನುವಾರ ನಡೆದ ಉಗ್ರದಾಳಿಯಲ್ಲಿ 350 ಕ್ಕೂ ಹೆಚ್ಚು ಜನ ಮೃತರಾಗಿದ್ದು, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಉಗ್ರದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತಿದ್ದು, ಚರ್ಚ್ ಮತ್ತು ಹೊಟೇಲ್ ಗಳನ್ನೇ ಮುಖ್ಯ ಗುರಿಯನ್ನಾಗಿಸಿಕೊಂಡಿತ್ತು ಎನ್ನಲಾಗಿದೆ.

English summary
Blast heard in Pugoda town, 40 km east of Sri Lankan capital Colombo. 59 people had died and around 500 injured in terror attack which taken place on April 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X