ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಟೈಮ್ ವರ್ಷದ ವ್ಯಕ್ತಿ?

ನ್ಯೂಯಾರ್ಕ್, ನ.26: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಟೈಮು ಚೆನ್ನಾಗಿದೆ ಅನ್ನಿಸುತ್ತಿದೆ. ಅಮೆರಿಕದ ಟೈಮ್ ಪತ್ರಿಕೆಯು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು 'ವರ್ಷದ ವ್ಯಕ್ತಿ'ಯಾಗಿ ಆಯ್ಕೆಮಾಡುವುದು ಬಹುತೇಕ ಖಚಿತವಾಗಿದೆ.

ಅಮೆರಿಕದ ಟೈಮ್ ನಿಯತಕಾಲಿಕೆಯ ಪ್ರಸಕ್ತ ವರ್ಷದ 'ವರ್ಷದ ವ್ಯಕ್ತಿ' ಅಂತಿಮ ಪಟ್ಟಿಯಲ್ಲಿ ಮೋದಿ ಹೆಸರು ಮೂಂಚೂಣಿಯಲ್ಲಿದೆ. ಅಂತರ್ಜಾಲದ ಮೂಲಕ ನಡೆದಿರುವ ಆಯ್ಕೆ ಪ್ರಕ್ರಿಯೆಯಲ್ಲಿ ಟೈಮ್ ನಿಯತಕಾಲಿಕೆಯ ಓದುಗರು ಮೋದಿಗೆ ಮಣೆ ಹಾಕಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಮೋದಿಗೆ ಅಂತಾರಾಷ್ಟ್ರೀಯ ಸ್ತರದಲ್ಲಿ ಈ ಗೌರವಕ್ಕೆ ಪಾತ್ರರಾಗುತ್ತಿರುವುದು ಅವರ ಜನಪ್ರಿಯತೆಯನ್ನು ಹೆಚ್ಚಿಸಿದೆ.

(ನೀವು ಮತ ಚಲಾಯಿಸಬಹದು.. ಇಲ್ಲಿ ಕ್ಲಿಕ್ ಮಾಡಿ)

BJP PM candidate Narendra Modi shortlisted by Time for person of year- 2013

ಅಂದಹಾಗೆ ಮೋದಿ ಅವರೊಬ್ಬರೇ ಭಾರತದಿಂದ ಟೈಮ್ ಗೆ ನಾಮಾಂಕಿತಗೊಂಡಿರುವವರು. 'ಗುಜರಾತ್ ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿ ವಿವಾದಿತ ಹಿಂದೂ ರಾಷ್ಟ್ರವಾದಿಯಾಗಿದ್ದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಸಬಲ್ಲ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ' ಎಂದು ಟೈಮ್ ಪತ್ರಿಕೆಯು ಮೋದಿಯನ್ನು ತನ್ನ ಓದುಗರಿಗೆ ಪರಿಚಯಿಸಿದೆ.

ಆನ್ ಲೈನ್ ಸಮೀಕ್ಷೆಯಲ್ಲಿ ಮೋದಿಗೆ ನವೆಂಬರ್ 20ರ ವೇಳೆಗೆ 2,650 ಮತಗಳು ಬಂದಿದ್ದು, ಶೇ. 25ರಷ್ಟು ಮತ ಗಳಿಸಿಕೊಂಡಿದ್ದಾರೆ. ಎಡರನೆಯ ಸ್ಥಾನದಲ್ಲಿ ಸ್ನೋಡೆನ್ ಇದ್ದಾರೆ. ಅವರಿಗೆ ಶೇ. 7ರಷ್ಟು ಮತ ಬಿದ್ದಿದೆ.

ವಿಶ್ಯದಾದ್ಯಂತ ಒಟ್ಟು 42 ಮಂದಿ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಹೆಚ್ಚು ಮನ್ನಣೆ ಗಳಿಸಿದ ಅರ್ಹ ವ್ಯಕ್ತಿಯನ್ನು ಅಂತಿಮವಾಗಿ ಟೈಮ್ ವರ್ಷದ ವ್ಯಕ್ತಿಯಾಗಿ ಹೊರಹೊಮ್ಮಲಿದ್ದಾರೆ. ಮುಂದಿನ ತಿಂಗಳು Time Person of the Year 2013 ಆಯ್ಕೆ ಅಂತಿಮಗೊಳ್ಳಲಿದೆ. ಜಪಾನ್ ಪ್ರಧಾನಿ ಶಿನ್ಜೋ ಅಬೆ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ, ಪಾಕಿಸ್ತಾನದ ಬಾಲಕಿ ಮಲಾಲಾ, ಅಮೆರಿಕದ ಕಲಾವಿದೆ ಮಿಲೆ ಸೈಸರ್, ಅಮೆಜಾನ್ ಸಿಇಒ ಜೆಫ್ ಬೆಜೋಸ್, ಎನ್ಎಸ್ಎ ಎಡ್ವರ್ಡ್ ಸ್ನೋಡೆನ್ ಮುಂತಾದವರು ರಾರಾಜಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+