ಮಲದ ಡಬ್ಬಿಯೊಂದಿಗೆ ವೇದಿಕೆಗೆ ಬಂದ ಬಿಲಿಯನೇರ್ ಬಿಲ್ ಗೇಟ್ಸ್!

ಬೀಜಿಂಗ್, ನವೆಂಬರ್ 6: ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಮಂಗಳವಾರ ಚೀನಾದ ಬೀಜಿಂಗ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ಎಲ್ಲರನ್ನೂ ಅಚ್ಚರಿಗೊಳಿಸಿದರು.

ದೀಪಾವಳಿ ವಿಶೇಷ ಪುರವಣಿ

ಮಂಗಳವಾರ ನಡೆದ ಶೌಚಾಲಯದ ಭವಿಷ್ಯದ ಕುರಿತ ಕಾರ್ಯಕ್ರಮದಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೈಯಲ್ಲಿನ ಪಾರದರ್ಶಕ ಡಬ್ಬಿಯಲ್ಲಿ ಮಲವನ್ನು ತುಂಬಿ ತಂದಿದ್ದರು.

ಇದು, ಹೆಚ್ಚು ಶೌಚಾಲಯ ವ್ಯವಸ್ಥೆಗಳನ್ನು ಹೊಂದಿರದ ಜಗತ್ತಿನ ಅಭಿವೃದ್ಧಿಶೀಲ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಅವರು ಈ ರೀತಿ ಮಾಡಿದ್ದರು.

bill gates in toilets expo with poop at beijing

ಶೌಚಾಲಯ ವ್ಯವಸ್ಥೆ ಇಲ್ಲದಿರುವಲ್ಲಿ ಎದುರಾಗುವ ಸಮಸ್ಯೆಗಳು ಒಂದೆರಡಲ್ಲ. ಹೊರಗೆ ಆಡುವ ಮಕ್ಕಳು ಅದರೊಂದಿಗೆ ಸಂಪರ್ಕ ಪಡೆದುಕೊಳ್ಳುತ್ತಾರೆ. ಇದರಿಂದ ನಾವು ಗುಣಮಟ್ಟದ ಬದುಕಿನ ಕೊರತೆ ಮಾತ್ರವಲ್ಲ, ಜತೆಗೆ ಅಪೌಷ್ಟಿಕತೆಯಿಂದ ಕಾಯಿಲೆ, ಸಾವಿಗೆ ಕಾರಣವಾಗುತ್ತದೆ ಎಂದು ಗೇಟ್ಸ್ ಹೇಳಿದ್ದಾರೆ.

ಈ ವೇಳೆ ಅವರು ಡಬ್ಬಿಯಲ್ಲಿದ್ದ ಮಲವನ್ನು ಸಭಿಕರಿಗೆ ಪ್ರದರ್ಶಿಸುತ್ತಿದ್ದರು.

ಆರೋಗ್ಯ ಮತ್ತು ಆಹಾರ ನಿಮ್ಮ ಮೂಲ ಅಗತ್ಯಗಳು ಎಂದು ನೀವು ಭಾವಿಸಿರುತ್ತೀರಿ. ಜತೆಗೆ ನಿಮ್ಮ ಅಗತ್ಯತೆಗಳ ಪಟ್ಟಿಯಲ್ಲಿ ಶೌಚಾಲಯ ಇರುವುದು ಸಹ ಮುಖ್ಯ ಎಂದು ಗೇಟ್ಸ್ ಪ್ರತಿಪಾದಿಸಿದರು.

ಸಮರ್ಪಕ ಶೌಚಾಲಯಗಳ ನಿರ್ವಹಣೆ ಮೂಲಕ ಚೀನಾ, ಲಕ್ಷಾಂತರ ಜನರ ಆರೋಗ್ಯ ಮತ್ತು ನೈರ್ಮಲ್ಯವನ್ನು ಸುಧಾರಿಸಲು ಮಹತ್ವದ ಕಾರ್ಯ ಮಾಡಿದೆ.

ಹಾಗೆಯೇ ಜಗತ್ತಿನ ಕೋಟ್ಯಂತರ ಜನರಿಗೆ ನೆರವಾಗುವಂತಹ ಅತ್ಯಾಧುನಿಕ ನೈರ್ಮಲ್ಯ ಪರಿಹಾರಗಳನ್ನು ಕಂಡುಕೊಳ್ಳುವ ಅವಕಾಶವೂ ಚೀನಾಕ್ಕಿದೆ ಎಂದು ಗೇಟ್ಸ್ ಶ್ಲಾಘಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+