Vladimir Putin: ಸಮಾಧಾನ.. ಸಮಾಧಾನ.. ಪುಟಿನ್ ಆರೋಗ್ಯವಾಗಿದ್ದಾರೆ, ಚೆನ್ನಾಗಿದ್ದಾರೆ!
ರಷ್ಯಾ ಅಧ್ಯಕ್ಷ ಪುಟಿನ್ ಬಗ್ಗೆ ಇಂದು ಆಘಾತಕಾರಿ ಸುದ್ದಿ ಓಡಾಡಿತ್ತು, ಅದ್ರಲ್ಲೂ ಪುಟಿನ್ ಜೀವಕ್ಕೆ ಅಪಾಯ ಎದುರಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿತ್ತು. ರಷ್ಯಾದ ಅಧ್ಯಕ್ಷರಿಗೆ ಹೃದಯ ಸ್ತಂಭನವಾಗಿ ಪುಟಿನ್ ಮಲಗುವ ಕೋಣೆಯಲ್ಲೇ ನೆಲದ ಮೇಲೆ ಮಗುಚಿ ಬಿದ್ದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಆದರೆ ಈಗ ಅದರ ಬಂಡವಾಳ ಬಯಲಾಗಿದೆ.
ವ್ಲಾದಿಮಿರ್ ಪುಟಿನ್ ಜಗತ್ತಿನ ಹಾಟ್ ಫೇವರಿಟ್, ಅತ್ತ ಪಾಶ್ಚಿಮಾತ್ಯ ದೇಶಗಳಲ್ಲಿ ಪುಟಿನ್ ವಿಲನ್ ಆಗಿದ್ದರೆ. ಏಷ್ಯಾ ಹಾಗೂ ರಷ್ಯಾ ಜನರಿಗೆ ಪುಟಿನ್ ಹೀರೋ ರೀತಿ ಕಾಣುತ್ತಿದ್ದಾರೆ. ಅದರಲ್ಲೂ ಭಾರತದ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಇಬ್ಬರೂ ಉತ್ತಮ ಗೆಳೆಯರು. ಹೀಗಿದ್ದಾಗ ಪುಟಿನ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿ ಕೇಳಿ ಸಂಚಲನ ಸೃಷ್ಟಿಯಾಗಿತ್ತು. ಹಾಗೇ ಪುಟಿನ್ ಬೆಂಬಲಿಗರಿಗೆ ಭಯವೂ ಶುರುವಾಗಿತ್ತು. ಈಗ ಫ್ಯಾನ್ಸ್ ಪಾಲಿಗೆ ಸಿಹಿಸುದ್ದಿ ಸಿಕ್ಕಿದ್ದು, ವ್ಲಾದಿಮಿರ್ ಪುಟಿನ್‌ರ ಆರೋಗ್ಯದ ಅಸಲಿ ಕಹಾನಿ ರಿವೀಲ್ ಮಾಡಿದ್ದಾರೆ ರಷ್ಯಾ ಅಧಿಕಾರಿಗಳು.

ರಷ್ಯಾ ಅಧಿಕಾರಿಗಳು ಹೇಳಿದ್ದು ಏನು?
ಇಂದು ಟೆಲಿಗ್ರಾಮ್ ಚಾನೆಲ್ ಒಂದರಲ್ಲಿ ಹರಿದಾಡಿದ್ದ ಸುದ್ದಿ ಸಂಚಲನ ಸೃಷ್ಟಿಸಿತ್ತು. ಅತ್ತ ರಷ್ಯಾ ಶತ್ರುಗಳಿಗೆ ಇದು ಅಲರ್ಟ್ ಆಗುವ ಸುದ್ದಿಯಾಗಿದ್ದರೆ, ರಷ್ಯಾದಲ್ಲಿ ದಿಢೀರ್ ಆತಂಕ ಎದುರಾಗಿತ್ತು. ವ್ಲಾದಿಮಿರ್ ಪುಟಿನ್ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಮಲಗುವ ಕೋಣೆಯ ನೆಲದ ಮೇಲೆ ಬಿದ್ದಿದ್ದನ್ನ ಭದ್ರತ ಅಧಿಕಾರಿಗಳು ಗಮನಿಸಿದ್ದಾರೆ ಅಂತಾ ಹೇಳಲಾಗಿತ್ತು. ಇದು ಸಾಲದು ಎಂಬಂತೆ ಪುಟಿನ್ ಆಹಾರ ತಿಂದ ಬಳಿಕ ಟೇಬಲ್ ಅನ್ನು ಕೈಯಿಂದ ತಳ್ಳಿದ್ದು, ಆ ನಂತರ ನೆಲದ ಮೇಲೆ ಮಗುಚಿ ಬಿದ್ದಿದ್ದಾರೆ. ಶಬ್ದವನ್ನ ಕೇಳಿದ ಬಳಿಕ ಭದ್ರತಾ ಸಿಬ್ಬಂದಿ ಒಳಗೆ ಹೋಗಿ ವೈದ್ಯರಿಗೆ ತಕ್ಷಣ ಕರೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದ್ರೆ ಇದೀಗ ರಷ್ಯಾ ಅಧಿಕಾರಿಗಳು ಇದೆಲ್ಲಾ ಸುಳ್ಳು & ಓಳು ಅಂತಿದ್ದಾರೆ.
ಏನೂ ಆಗಿಲ್ಲ.. ಟೆನ್ಷನ್ ಬೇಡ!
ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಅಂದ್ರೆ ವ್ಲಾದಿಮಿರ್ ಪುಟಿನ್ ವಾಸ ಮಾಡುವ ಸರ್ಕಾರಿ ನಿವಾಸ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾತನಾಡಿ, ಪುಟಿನ್ ಆರೋಗ್ಯದ ಕುರಿತು ಓಡಾಡಿದ ಸುದ್ದಿಗಳು ಸುಳ್ಳು. ಅವರು ಆರೋಗ್ಯವಾಗಿದ್ದಾರೆ ಎಂದಿದ್ದಾರೆ, ಹಾಗೇ ಅವರ ತದ್ರೂಪ ವ್ಯಕ್ತಿ ಪುಟಿನ್ ಬದಲು ಹೊರಗೆ ಓಡಾಡ್ತಿದ್ದಾರೆ ಎಂಬ ಆರೋಪ ತಳ್ಳಿಹಾಕಿದ್ದಾರೆ. ಈ ಮೂಲಕ ಜಗತ್ತಿನಾದ್ಯಂತ ಇಂದು ಸಂಚಲನ ಸೃಷ್ಟಿಸಿದ್ದ ಸುದ್ದಿಗೆ ಅಂತ್ಯ ಹಾಡಿದ್ದಾರೆ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್.
ಪುಟಿನ್ ರೀತಿಯೇ ಮತ್ತೊಬ್ಬ ವ್ಯಕ್ತಿ?
ಇತ್ತೀಚೆಗೆ 71ನೇ ವಸಂತಕ್ಕೆ ಕಾಲಿಟ್ಟ ವ್ಲಾದಿಮಿರ್ ಪುಟಿನ್ ತಮ್ಮ ಜುಡೋ ಕಲೆ ಮೂಲಕ ಜಗತ್ತಿನಾದ್ಯಂತ ಹೆಸರು ಪಡೆದಿದ್ದರು. ಹಾಗೇ ಪುಟಿನ್ ಕರಡಿ ಮೇಲೆ ಸವಾರಿ ಮಾಡಿದ್ದೂ, ಕುದುರೆ ಏರಿ ಓಡಿದ್ದು ಸುದ್ದಿಯಾಗಿತ್ತು. ಆದರೆ ಪುಟಿನ್‌ಗೆ ಕ್ಯಾನ್ಸರ್ ಇದೆ, ಗಂಭೀರ ರೋಗ ಇದೆ ಅನ್ನೋ ಆರೋಪಗಳು ಪದೇ ಪದೆ ಕೇಳಿಬರುತ್ತಿವೆ. ಈ ಮಧ್ಯೆ ಪುಟಿನ್ ಅವರ ರೀತಿ ಇರುವ ಬೇರೆ ವ್ಯಕ್ತಿ ಈಗ ಪುಟಿನ್ ಅವರ ಜಾಗದಲ್ಲಿ ಆಡಳಿತ ನಡೆಸುತ್ತಿರುವ ಆರೋಪವೂ ಇದೆ. ಆದರೆ ಇದಕ್ಕೆಲ್ಲಾ ರಷ್ಯಾ ಅಧ್ಯಕ್ಷರು ರಿಯಾಕ್ಟ್ ಮಾಡಲು ಹೋಗಿಲ್ಲ.

ಅಮೆರಿಕ ಕುತಂತ್ರ ಎಂಬ ಆರೋಪ?
ಮೇಲೆ ಹೇಳಿದ ಮಾತು ಪುಟಿನ್ ವಿರೋಧಿಗಳದ್ದಾಗಿದ್ದರೆ, ಮತ್ತೊಂದ್ಕಡೆ ಪುಟಿನ್ ಬೆಂಬಲಿಗರ ಚರ್ಚೆಯೇ ಬೇರೆಯದ್ದಾಗಿದೆ. ಅದೇನೆಂದರೆ ಪುಟಿನ್ ಆರೋಗ್ಯದ ಬಗ್ಗೆ ಅಮೆರಿಕ ಸುಳ್ಳುಸುದ್ದಿ ಹಬ್ಬಿಸುತ್ತಿದೆ ಎಂದು. ಈಗಾಗಲೇ ಉಕ್ರೇನ್ ಯುದ್ಧದಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ಬೆಂಬಲ ಸೂಚಿಸಿ, ರಷ್ಯಾ ಸೋಲಿಗೆ ಕಾಯುತ್ತಿವೆ. ಈ ಮೂಲಕ ತನ್ನ ಶತ್ರು ರಷ್ಯಾ ಹಣಿಯಲು ಅಮೆರಿಕ ತಂತ್ರ ರೂಪಿಸಿದೆ. ಜೊತೆಗೆ ಹಮಾಸ್ ಮತ್ತು ಇಸ್ರೇಲ್ ನಡುವೆ ಕೂಡ ಬಲವಾದ ಯುದ್ಧ ಆರಂಭವಾಗಿದೆ. ಇದೇ ಪರಿಸ್ಥಿತಿಯಲ್ಲಿ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಪುಟಿನ್ ವಿರುದ್ಧ ಹೀಗೆ ಪಿತೂರಿ ಮಾಡಿದ್ದಾರೆ ಎಂಬ ಆರೋಪವನ್ನ ಪುಟಿನ್ ಬೆಂಬಲಿಗರು ಮಾಡ್ತಿದ್ದಾರೆ.












Click it and Unblock the Notifications