ಉಗ್ರರ ಸದೆಬಡೆಯಲು ಒಬಾಮಾ ರಣತಂತ್ರ

ವಾಷಿಂಗ್ಟನ್, ಸೆ. 11: ಸಿರಿಯಾ ಮತ್ತು ಇರಾಕ್ ದೇಶಗಳ ಇಸ್ಲಾಮಿಕ್ ರಾಜ್ಯ ಉಗ್ರರನ್ನು ಸದೆಬಡಿಯಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ರಣತಂತ್ರ ರೂಪಿಸಿದ್ದಾರೆ. ಅಮೆರಿಕ ವಿರುದ್ಧ ತಿರುಗಿ ಬಿದ್ದಿರುವ ಉಗ್ರರು ಎಲ್ಲೇ ಇರಲಿ ಅವರನ್ನು ಹುಡುಕಿ ಹತ್ಯೆ ಮಾಡಲಾಗುವುದು ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಅಗತ್ಯಬಿದ್ದರೆ ಈ ಎರಡೂ ದೇಶಗಳಲ್ಲಿರುವ ಉಗ್ರರ ನೆಲೆಗಳ ಮೇಲೆ ಅಮೆರಿಕ ಪೂರ್ಣ ಪ್ರಮಾಣದಲ್ಲಿ ವಾಯು ದಾಳಿ ನಡೆಸಲಿದೆ. ಅಂತಾರಾಷ್ಟ್ರೀಯ ಸಂಘಟನೆಗಳ ನೆರವು ಪಡೆದು ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ ಬಲ ಕುಂದಿಸಲಾಗುತ್ತದೆ. 500ಕ್ಕೂ ಅಧಿಕ ಯೋಧರ ಪಡೆಯನ್ನು ಇರಾಕಿಗೆ ಕಳಿಸಲಾಗಿದೆ ಎಂದರು.

ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ತತ್ವದಲ್ಲಿ ಇಸ್ಲಾಮ್ ಧರ್ಮದ ಗಂಧವೇ ಇಲ್ಲ. ಯಾವುದೇ ಧರ್ಮವಾಗಲೀ ಅಮಾಯಕರನ್ನ ಕೊಲ್ಲಬೇಕೆಂದು ಹೇಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.[ಯುಎಸ್ ಪತ್ರಕರ್ತನ ರುಂಡ ಕತ್ತರಿಸಿದ ಉಗ್ರರು]

Barack Obama: Will hunt down terrorists who threaten our country

ಇತ್ತೀಚೆಗೆ ಇಬ್ಬರು ಅಮೆರಿಕ ಮೂಲದ ಪತ್ರಕರ್ತರ ತಲೆ ಕತ್ತರಿಸಿದ ವಿಡಿಯೋವನ್ನು ಉಗ್ರರು ಬಿಡುಗಡೆ ಮಾಡಿ ಅಮೆರಿಕಕ್ಕೆ ನೇರ ಸವಾಲು ಹಾಕಿದ್ದರು. ಯುರೋಪ್ ಪ್ರವಾಸಕ್ಕೆ ಹೋಗಿದ್ದ ಒಬಾಮಾ ಅವರು ಉಗ್ರರ ಬಗ್ಗೆ ನಿಧಾನಗತಿ ಕ್ರಮ ಜರುಗಿಸುವ ಧೋರಣೆ ಹೊಂದಿದ್ದಾರೆ ಎಂದು ಭಾರತೀಯ ಮೂಲದ ಅಮೆರಿಕನ್ ರಾಜಕಾರಣಿ ಬಾಬ್ಬಿ ಜಿಂದಾಲ್ ಸೇರಿದಂತೆ ಹಲವರು ಟೀಕಿಸಿದ್ದರು.[ಸುಳ್ಳು ಸುದ್ದಿಗೆ ಗಡಗಡ ನಡುಗಿದ ಪೆಂಟಗನ್]

ಅಲ್ ಖೈದಾ ಉಗ್ರರು ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ದಾಳಿ ನಡೆಸಿದ 13ನೇ ವರ್ಷದ ಕಹಿ ನೆನಪಿಗೂ ಮುನ್ನಾ ದಿನ ಒಬಾಮಾ ಅವರು ಮಾತನಾಡಿ ಉಗ್ರರ ವಿರುದ್ಧ ಕಠಿಣ ಕ್ರಮಕ್ಕಾಗಿ ಆದೇಶಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಭಾಷಣದ ವಿಡಿಯೋ ತುಣುಕು ನೋಡಿ

ತೈಲ ಬೆಲೆಗಳಲ್ಲಿ ಚೇತರಿಕೆ: ಸಿರಿಯಾ ಮತ್ತು ಇರಾಕಿನ ಜಿಹಾದಿ ಉಗ್ರರ ವಿರುದ್ಧ ಬರಾಕ್ ಒಬಾಮಾ ಅವರು ಕಠಿಣ ನಿಲುವು ಪ್ರಕಟಿಸುತ್ತಿದ್ದಂತೆ ಏಷ್ಯಾದ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಏರಿಕೆ ಕಂಡಿವೆ. ಅದರೆ, ಜಾಗತಿಕವಾಗಿ ಬೇಡಿಕೆ ಕುಸಿದಿರುವುದರಿಂದ ಈಗಲೇ ಬೆಲೆ ವ್ಯತ್ಯಯದ ಬಗ್ಗೆ ಏನು ಸ್ಪಷ್ಟವಾಗಿ ಹೇಳಲಾಗುವುದಿಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+