Bangladesh Election: ಬಾಂಗ್ಲಾದೇಶ ಚುನಾವಣೆಯಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಶುರು

ಬಾಂಗ್ಲಾದೇಶ ಮತ್ತು ಭಾರತದ ನಡುವೆ ಸಂಬಂಧ ಕೆಟ್ಟು ಹೋಗಿದ್ದು, ಬಾಂಗ್ಲಾದೇಶದ ಕಿತಾಪತಿ ಇದೀಗ ಎರಡೂ ದೇಶಗಳ ನಡುವೆ ದೊಡ್ಡ ಅಂತರ ತಂದಿದೆ. ಅದರಲ್ಲೂ ಬಾಂಗ್ಲಾದೇಶದ ರಾಜಕಾರಣಿಗಳು ಮತ್ತು ಅಲ್ಲಿನ ಅಧಿಕಾರಿಗಳು ಮಾಡುತ್ತಿರುವ ಕಿರಿಕ್ ಒಂದು ಕಾಲದ ಆತ್ಮೀಯ ದೇಶಗಳನ್ನು ದೂರವಾಗುವ ರೀತಿ ಮಾಡಿದೆ. ಅಲ್ಲದೆ ಬಾಂಗ್ಲಾ ನೆಲದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಿ ಹಿಂಸಾಚಾರ ನಡೆಸುತ್ತಿರುವ & ಗಲಭೆಗೆ ಪ್ರಚೋದನೆ ನೀಡುತ್ತಿರುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇಂತಹ ಸಮಯದಲ್ಲೇ ಈಗ ಬಾಂಗ್ಲಾ ನೆಲದಲ್ಲಿ ಚುನಾವಣೆ ನಡೆದಿದ್ದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ಕೌಂಟ್‌ಡೌನ್ ಕೂಡ ಶುರು ಆಗಿದೆ.

ಬಾಂಗ್ಲಾದೇಶ 2 ವರ್ಷದ ಹಿಂದೆ ಹೊತ್ತಿ ಉರಿದಿತ್ತು. 2024 ಆಗಸ್ಟ್ ತಿಂಗಳಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳು ಆರಂಭ ಆಗಿ, ಅಂದಿನ ಪ್ರಧಾನಿ ಶೇಖ್ ಹಸೀನಾ ಅಧಿಕಾರ ಬಿಟ್ಟು ಕೆಳಗಿಳಿಯುವ ರೀತಿ ಆಗಿತ್ತು. ಅಲ್ಲದೆ ಶೇಖ್ ಹಸೀನಾ ಭಾರತಕ್ಕೆ ಬಂದು ಆಶ್ರಯ ಕೂಡ ಪಡೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶೇಖ್ ಹಸೀನಾ ಅಧಿಕಾರದಿಂದ ನಿರ್ಗಮಿಸಿದ ನಂತರ ಮೊದಲ ಬಾರಿ ಎಲೆಕ್ಷನ್ ನಡೆದಿದೆ. ಬಾಂಗ್ಲಾ ಸಂಸತ್ ಚುನಾವಣೆಯ ಹಿನ್ನೆಲೆ ಇಡೀ ಜಗತ್ತಿನ ಕಣ್ಣು ಇಲ್ಲೇ ನೆಟ್ಟಿದೆ. ಮತದಾನ ಗುರುವಾರ ಬೆಳಗ್ಗೆಯೇ ಆರಂಭ ಆಗಿತ್ತು, ಈಗ ಚುನಾವಣೆ ಫಲಿತಾಂಶದ ಕಡೆಗೆ ಎಲ್ಲರ ಗಮನ ನೆಟ್ಟಿದೆ. ಹಾಗಾದರೆ, ಬಾಂಗ್ಲಾದೇಶ ಆಳುವ ಹೊಸ ಪಕ್ಷ ಯಾವುದು? ಬನ್ನಿ ತಿಳಿಯೋಣ.

Bangladesh Election

ಚುನಾವಣೆಯಲ್ಲಿ 1,755 ಅಭ್ಯರ್ಥಿಗಳ ಸ್ಪರ್ಧೆ

ಬಾಂಗ್ಲಾದೇಶ ಒಟ್ಟಾರೆ 300 ಸಂಸತ್ ಕ್ಷೇತ್ರಗಳನ್ನು ಹೊಂದಿದ್ದು, ಇದೀಗ ಈ 300 ಸಂಸತ್ ಕ್ಷೇತ್ರಗಳ ಪೈಕಿ ಒಟ್ಟು 299 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಗುರುವಾರ ಬೆಳಗ್ಗೆ 7.30ಕ್ಕೆ ಆರಂಭ ಆಗಿದ್ದ ಮತದಾನವು ಬಹುತೇಕ ಶಾಂತಿಯುತವಾಗಿ ಮುಕ್ತಾಯ ಆಗಿದ್ದು, ಒಂದು ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿ ಸಾವು ಹಿನ್ನೆಲೆ ಮತದಾನ ರದ್ದು ಮಾಡಲಾಗಿತ್ತು. ಇದೀಗ ಚುನಾವಣೆ ನಡೆದಿರುವ 300 ಸಂಸತ್ ಕ್ಷೇತ್ರಗಳಲ್ಲಿ ಸೋಲು & ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಒಟ್ಟು 51 ರಾಜಕೀಯ ಪಕ್ಷಗಳು ಈ ಬಾರಿಯ ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರೆ ಒಟ್ಟಾರೆ 1,755 ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಈ ಪೈಕಿ, 273 ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರೆಲ್ಲರ ಭವಿಷ್ಯ ಇನ್ನು ಕೆಲವೇ ಗಂಟೆಗಳಲ್ಲಿ ನಿರ್ಧಾರ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+