200 ಸ್ಥಾನ ಗೆದ್ದು ಬೀಗಿದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ, ಇಲ್ಲಿದೆ ಸಂಪೂರ್ಣ ಮಾಹಿತಿ... Bangladesh Election
ಭಾರತದ ನೆರೆಯ ದೇಶ ಹಾಗೂ ಭಾರತದ ಸಹಾಯ ಪಡೆದು ಸ್ವತಂತ್ರಗೊಂಡ ಬಾಂಗ್ಲಾದೇಶದಲ್ಲಿ ಈಗ ಬಹುದೊಡ್ಡ ಬೆಳವಣಿಗೆ ನಡೆದಿದೆ. ಅಂದಹಾಗೆ ಬಾಂಗ್ಲಾದೇಶ ಸಂಸತ್ ಚುನಾವಣೆ ಫಲಿತಾಂಶ ಹೊರ ಬೀದ್ದಿದ್ದು, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಭರ್ಜರಿ ಬಹುಮತ ಪಡೆಯುವ ಮೂಲಕ ಸರ್ಕಾರ ರಚಿಸಲು ಸಜ್ಜಾಗಿದೆ. ಬಾಂಗ್ಲಾದ 300 ಸಂಸತ್ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಅಭ್ಯರ್ಥಿ ನಿಧನ ಹಿನ್ನೆಲೆ ಚುನಾವಣೆ ರದ್ದು ಮಾಡಲಾಗಿತ್ತು, ಆದರೆ ಇನ್ನುಳಿದ 299 ಕ್ಷೇತ್ರಗಳಿಗೆ ಮತದಾನವು ನಡೆದಿತ್ತು.
ಹೀಗೆ ಬಾಂಗ್ಲಾದೇಶದಲ್ಲಿ 299 ಕ್ಷೇತ್ರಗಳಿಗೆ, ಏಕಕಾಲಕ್ಕೇ ಫೆಬ್ರವರಿ 12 ಗುರುವಾರ ಸಂಸತ್ ಎಲೆಕ್ಷನ್ ನಡೆದಿತ್ತು. ಈ 299 ಕ್ಷೇತ್ರಗಳಲ್ಲಿ ಇದೀಗ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ 200ಕ್ಕೂ ಹೆಚ್ಚು ಸ್ಥಾನ ಗೆದ್ದು ಬೀಗಿದೆ. ಭಾರಿ ಕುತೂಹಲದ ಜೊತೆಗೆ ಹಿಂಸಾಚಾರದ ಭೀತಿಯನ್ನು ಕೂಡ ಬಾಂಗ್ಲಾದೇಶದ ಈ ಚುನಾವಣೆ ಹುಟ್ಟುಹಾಕಿತ್ತು, ಆದರೆ ಬಿಗಿ ಬಂದೋಬಸ್ತ್ ನಡುವೆ ಚುನಾವಣೆ ನಡೆಸಿದ ಕಾರಣಕ್ಕಾಗಿ ಅಹಿತಕರ ಘಟನೆಗಳು ನಡೆಯದಂತೆ ಮತದಾನ ಮುಗಿಸಲಾಗಿತ್ತು. ನಿನ್ನೆ ವೋಟಿಂಗ್ ಮುಗಿದು ಇಂದು ಫಲಿತಾಂಶ ಹೊರಬಿದ್ದಿದೆ, ಆ ಮೂಲಕ ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ.

ತಾರಿಕ್ ರಹ್ಮಾನ್ಗೆ ಪ್ರಧಾನಿ ಪಟ್ಟ?
ಬಾಂಗ್ಲಾದೇಶದ ಈ ಬಾರಿಯ ಚುನಾವಣೆ ಹಲವು ವಿಶೇಷತೆ ಒಳಗೊಂಡಿತ್ತು, ಪ್ರಮುಖವಾಗಿ ಸುಮಾರು 50 ಲಕ್ಷ ಯುವ ಮತದಾರರು ಇದೇ ಮೊದಲ ಬಾರಿಗೆ ಮತ ಚಲಾಯಿಸಿದ್ದರು. ಇದೇ ಕಾರಣ ಬಾಂಗ್ಲಾ ಸಂಸತ್ ಚುನಾವಣೆ ಏಷ್ಯಾ ಮಾತ್ರವಲ್ಲದೆ ಜಗತ್ತಿನ ಗಮನ ಸೆಳೆದಿತ್ತು, ಒಂದು ಕಡೆ ಕೋಮು ಗಲಭೆ ಹಾಗೂ ಇನ್ನೊಂದು ಕಡೆ ಆರ್ಥಿಕ ಸಂಕಷ್ಟಗಳ ಕಾರಣಕ್ಕೆ ಬಾಂಗ್ಲಾದೇಶ ಗೆಲ್ಲುವ ಪಕ್ಷ ಯಾವುದು? ಎಂಬ ಚರ್ಚೆ ಜೋರಾಗಿತ್ತು. ಇದೀಗ ಅದಕ್ಕೆಲ್ಲಾ ಉತ್ತರ ಸಿಕ್ಕಿದ್ದು, 200ಕ್ಕೂ ಹೆಚ್ಚು ಸ್ಥಾನ ಗೆದ್ದಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಕಡೆಯಿಂದಲೇ ಹೊಸ ಪ್ರಧಾನಿ ಆಯ್ಕೆ ಗ್ಯಾರಂಟಿ ಆಗಿದೆ.
VIDEO | Dhaka: BNP leader Tarique Rahman leaves his residence to offer prayer at Gulshan mosque.
— Press Trust of India (@PTI_News) February 13, 2026
Bangladesh Nationalist Party (BNP) on Friday claimed victory in the crucial general elections, marred by sporadic incidents of violence, to elect a new government to replace the… pic.twitter.com/URMf3SO5CT
291 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು
ಈ ನಡುವೆ ಬಿಎನ್ಪಿ ಪಕ್ಷದ ತಾರಿಕ್ ರಹ್ಮಾನ್ಗೆ ಪ್ರಧಾನಿ ಪಟ್ಟ ಸಿಗುವ ನಿರೀಕ್ಷೆ ಇದ್ದು, ಭಾರತದ ಜೊತೆ ತಾರಿಕ್ ರಹ್ಮಾನ್ ಸಂಬಂಧ ಕೂಡ ಉತ್ತಮವಾಗಿದೆ. ಎದುರಾಳಿ ಅಭ್ಯರ್ಥಿಗಳನ್ನ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಅಭ್ಯರ್ಥಿಗಳು ಸುಲಭವಾಗಿ ಎದುರಿಸಿ ಗೆದ್ದಿದ್ದಾರೆ, ಹೀಗಾಗಿ ಬಾಂಗ್ಲಾ ಮತದಾರ ಸಂಪೂರ್ಣ ಬೆಂಬಲವನ್ನು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಗೆ ನೀಡಿದ್ದಾನೆ ಎಂಬ ಚರ್ಚೆಗಳು ಈಗ ಶುರುವಾಗಿವೆ. 291 ಅಭ್ಯರ್ಥಿಗಳನ್ನು ಬಿಎನ್ಪಿ ಪಕ್ಷ ಈ ಚುನಾವಣೆಯಲ್ಲಿ ಕಣಕ್ಕೆ ಇಳಿಸಿತ್ತು, ಹೀಗೆ ಕಣಕ್ಕಿಳಿದ ಅಭ್ಯರ್ಥಿಗಳಲ್ಲಿ 200ಕ್ಕೂ ಹೆಚ್ಚು ಸ್ಥಾನ ಈಗಾಗಲೇ ಬಿಎನ್ಪಿ ಪಕ್ಷದ ಪಾಲಾಗಿದೆ. ಇನ್ನೂ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿ ಬಿಎನ್ಪಿ ನಾಯಕರು ಇದ್ದಾರೆ.
VIDEO | “Rejection of Pak-backed Jamaat a reaffirmation of Bangladesh people supporting democratic values”, says Former ambassador Veena Sikri on poll results.#BangladeshElections2026
— Press Trust of India (@PTI_News) February 13, 2026
(Full video available on PTI Videos - https://t.co/n147TvrpG7) pic.twitter.com/6tUOkZMPHI
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications