2016ರ ಢಾಕಾ ಕೆಫೆ ದಾಳಿ: 7 ಆರೋಪಿಗಳಿಗೆ ಮರಣದಂಡನೆ
ಢಾಕಾ,ನವೆಂಬರ್ 27: ಢಾಕಾದ ಗುಲ್ಟನ್ ಹೋಲಿ ಆರ್ಟಿಸನ್ ಕೆಫೆ ಮೇಲೆ 2016ರಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ಇಸ್ಲಾಮಿಕ್ ಮಿಲಿಟೆಂಟ್ಸ್ ಗ್ರೂಪಿನ 7 ಮಂದಿಗೆ ಬಾಂಗ್ಲಾದೇಶ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
2016ರ ಜುಲೈ 1 ರಂದು ಢಾಕಾದ ಗುಲ್ಶನ್ ಹೋಲಿ ಆರ್ಟಿಸಾನ್ ಬೇಕರಿ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಭಾರತೀಯ ಯುವತಿ ಸೇರಿದಂತೆ 22 ಜನರು ಮೃತಪಟ್ಟಿದ್ದರು. ಐವರು ಈ ರೆಸ್ಟೋರೆಂಟ್ ಗೆ ನುಗ್ಗಿ ಬಾಂಬ್ ಎಸೆದು, ಗಾಳಿಯಲ್ಲಿ ಗುಂಡು ಹಾರಿಸಿ ಅಲ್ಲಿದ್ದ ಹಲವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು.
22 ಮಂದಿ ನಾಗರಿಕರು, ಐವರು ಗನ್ ಮ್ಯಾನ್ ಹಾಗೂ 2 ಪೊಲೀಸ್ ಸಿಬ್ಬಂದಿ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದರು, 50 ಮಂದಿ ಗಾಯಗೊಂಡಿದ್ದರು. ಈ ಕೆಫೆ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿತ್ತು.

ಢಾಕಾದ ಮೊಹಮ್ಮದ್ಪುರ್ ಬೇರಿಬಂದ್ ಪ್ರದೇಶದಲ್ಲಿ ಭಯೋತ್ಪಾದಕ ನಿಗ್ರಹ ಪಡೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜಮಾತ್ ಉಲ್ ಮುಜಾಹಿದೀನ್ ಸಂಘಟನೆಯ ನುರುಲ್ ಇಸ್ಲಾಮ್ ಅಲಿಯಾಸ್ ಮರ್ಜನ್ ಹತ್ಯೆ ಮಾಡಲಾಗಿದೆ.
ಮರ್ಜನ್ ಜತೆಗೆ ಮತ್ತೊಬ್ಬ ಉಗ್ರ ಕೂಡಾ ಮೃತಪಟ್ಟಿದ್ದಾನೆ ಎಂದು ಭಯೋತ್ಪಾದಕ ನಿಗ್ರಹದ ದಳದ ಮುಖ್ಯಸ್ಥ ಮೋನಿರುಲ್ ಇಸ್ಲಾಮ್ ಎಂದು ಹೇಳಿದ್ದರು.












Click it and Unblock the Notifications