ಮಿಸಿಸಿಪ್ಪಿ ನದಿಯಲ್ಲಿ ಪ್ರಾಣತೆತ್ತ ಚಾಮರಾಜಪೇಟೆ ಯುವಕ

ಬೆಂಗಳೂರು, ಜೂನ್ 2: ಬೆಂಗಳೂರಿನ ಯುವಕನೊಬ್ಬ ಅಮೆರಿಕದ ಮಿಸಿಸಿಪ್ಪಿ ನದಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಮಂಗಳವಾರದಿಂದ ನಾಪತ್ತೆಯಾಗಿದ್ದ ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜಿನ ಬಿಕಾಂ ಪದವೀಧರನ ಶವವು ಮಿಸಿಸಿಪ್ಪಿ ಉಪನದಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.

ಬೆಂಗಳೂರಿನ 24 ವರ್ಷದ ಸಚಿನ್ ಜೋಸೆಫ್ ರಾಯಪ್ಪ ಆಡಿಟರ್ ಆಗಿ ಅರ್ನೆಸ್ಟ್ ಅಂಡ್ ಯಂಗ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಕಳೆದ ಡಿಸೆಂಬರಿನಲ್ಲಿ ಕೆಲಸಕ್ಕೆ ಸೇರಿದ್ದರು. ಅಮೆರಿಕದ ಮಧ್ಯ ಪಶ್ಚಿಮದಲ್ಲಿ ಅಯೋವಾ ರಾಜ್ಯದ ರಾಜಧಾನಿ ದೆಸ್ ಮಾಯ್ನಿಸ್ ನಗರದಲ್ಲಿ ವಾಸವಾಗಿದ್ದರು. ಜೋಸೆಫ್ ರಾಯಪ್ಪ ಅವರ ತಂದೆ ರಾಯಪ್ಪ ಚಾಮರಾಜಪೇಟೆಯಲ್ಲಿ ವ್ಯಾಪಾರ ಮಾಡಿಕೊಂಡಿದ್ದಾರೆ.

ಸಚಿನ್ ಜೋಸೆಫ್ ಸಾವು ಆತ್ಮಹತ್ಯೆಯೋ ಅಥವಾ ಅಪಘಾತದಲ್ಲಿ ಸಾವನ್ನಪ್ಪಿದ್ದೋ ತನಿಖೆಯಿಂದ ಇನ್ನಷ್ಟೇ ಬೆಳಕಿಗೆ ಬರಬೇಕಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 'ಸಚಿನ್ ಕಳೆದ ಮಂಗಳವಾರದಿಂದ ನಾಪತ್ತೆಯಾಗಿರುವ ಬಗ್ಗೆ ದೂರವಾಣಿ ಮೂಲಕ ತಿಳಿದುಬಂದಿತ್ತು. ಆದರೆ ಶನಿವಾರ ನದಿ ತಟದಲ್ಲಿ ಆತನ ಶವ ಪತ್ತೆಯಾಗಿರುವುದಾಗಿ ತಿಳಿದುಬಂದಿತು' ಎಂದು ರಾಯಪ್ಪ ಹೇಳಿದ್ದಾರೆ. (ಪಾವಗಡ ಟೆಕ್ಕಿ ಪವನ್ ಅಮೆರಿಕದಲ್ಲಿ ನಿಗೂಢ ಸಾವು)

Chamarajpet BCom graduate Sachin Joseph Rayappa found dead in US Mississippi

'ಸಚಿನ್ ಒಳ್ಳೆಯ ಹುಡುಗ. ಸ್ನೇಹಮಯಿಯಾಗಿದ್ದ. ಆತ್ಮಹತ್ಯೆ ಮಾಡಿಕೊಳ್ಳವಂತಹವನಲ್ಲ. ಆದರೆ ನನ್ನ ಮಗನಿಗೆ ಏನಾಯಿತು ಎಂಬುದನ್ನು ಸರಿಯಾಗಿ ತನಿಖೆ ನಡೆಸಿ, ಪೊಲೀಸರೇ ಹೇಳಬೇಕಿದೆ' ಎಂದು ರಾಯಪ್ಪ ತಿಳಿಸಿದ್ದಾರೆ. ಸಚಿನ್, ಶವಪರೀಕ್ಷೆ ವರದಿ ಇನ್ನಷ್ಟೇ ಬರಬೇಕಿದೆ.

'ಸಚಿನ್ ಕೆಲಸದಲ್ಲಿದ್ದ ಅರ್ನೆಸ್ಟ್ ಅಂಡ್ ಯಂಗ್ ಕಂಪನಿ ನಮ್ಮೊಂದಿಗೆ ಸಂಪರ್ಕದಲ್ಲಿದೆ. ನಾವು ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ್ದು, ಶೀಘ್ರವೇ ಶವವನ್ನು ಬೆಂಗಳೂರಿಗೆ ಕರೆತರುವ ಏರ್ಪಾಡು ಮಾಡಬೇಕೆಂದು ಕೋರಿದ್ದೇವೆ. ಸಚಿನ್ ಅಂತ್ಯಕ್ರಿಯೆ ಬೆಂಗಳೂರಿನಲ್ಲಿಯೇ ಮಾಡಬೇಕೆಂಬುದು ನಮ್ಮ ಇಚ್ಛೆಯಾಗಿದೆ' ಎಂದು ದುಃಖತಪ್ತ ರಾಯಪ್ಪ ಹೇಳಿದ್ದಾರೆ.

'ಸಚಿನ್ ಸೋಮವಾರ ನಮ್ಮೊಂದಿಗೆ ಮಾತನಾಡಿದ್ದ. ಮಂಗಳವಾರ ಬೆಳಗ್ಗೆ ಆತ ಕೆಲಸಕ್ಕೆ ಬಂದಿದ್ದ ಎಂದು ಕಂಪನಿಯವರು ಹೇಳುತ್ತಾರೆ. ಮಧ್ಯೆ ಹೊರಗೆ ಹೋದವನು ನಾಪತ್ತೆಯಾದ. ಈಗ ನೋಡಿದರೆ ಸಾವಿನ ಸುದ್ದಿ ಬಂದಿದೆ. ಸಚಿನ್ ತನ್ನ ಮೊಬೈಲ್, ಪರ್ಸ್, ಲ್ಯಾಪ್ ಟಾಪ್ ಗಳನ್ನು ಕಚೇರಿಯಲ್ಲಿಯೇ ಬಿಟ್ಟುಹೋಗಿದ್ದಾನೆ' ಎಂದು ಸಚಿನ್ ತಮ್ಮ ಶಶಾಂಕ್ ಹೇಳುತ್ತಾರೆ. ಶಶಾಂಕ್, ಇಂಜಿನಿಯರಿಂಗ್ ವಿದ್ಯಾರ್ಥಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+