Get Updates
Get notified of breaking news, exclusive insights, and must-see stories!

ಬಲೂಚಿಸ್ತಾನ ಬಂಡುಕೋರರಿಗೆ ಹೆದರಿ ಹೆಲಿಕಾಪ್ಟರ್, ಡ್ರೋನ್ ನಿಯೋಜಿಸಿದ ಪಾಕ್ ಸರ್ಕಾರ | Baloch Rebels

ಪಾಕಿಸ್ತಾನ ತಾನು ಕೂಡ ನೆಮ್ಮದಿಯಾಗಿ ಇರಲ್ಲ, ಅಕ್ಕಪಕ್ಕದ ದೇಶಗಳನ್ನು ಕೂಡ ನೆಮ್ಮದಿಯಾಗಿ ಬದಕಲು ಬಿಡಲ್ಲ. ಯಾಕಂದ್ರೆ ಉಗ್ರರ ಪೋಷಕ ಪಾಕಿಸ್ತಾನಕ್ಕೆ ನೆಮ್ಮದಿ ಅನ್ನೋ ಪದವೇ ಇಷ್ಟ ಇಲ್ಲ ಅಂತಾ ಕಾಣುತ್ತದೆ. ಹೀಗೆ ತಾನೇ ಹಾವುಗಳ ರೀತಿ ಸಾಕಿಕೊಂಡ ಉಗ್ರರು ಪಾಕಿಸ್ತಾನ ನೆಲವನ್ನೇ ನಲುಗಿಸುತ್ತಾ, ಅಮಾಯಕ ಪಾಕಿಸ್ತಾನ ಪ್ರಜೆಗಳ ಜೀವ ತೆಗೆಯುತ್ತಿದ್ದಾರೆ. ಅದರಲ್ಲೂ ಗಡಿಯಲ್ಲಿ ಪಾಕಿಸ್ತಾನ ಸರ್ಕಾರದ ವಿರುದ್ಧ ಪದೇ ಪದೇ ಹಿಂಸಾತ್ಮಕ ಗಲಭೆಗಳು ನಡೆಯುತ್ತಿದ್ದು, ಇದರಿಂದ ದೊಡ್ಡ ನಷ್ಟ ಕೂಡ ಉಂಟಾಗುತ್ತಿದೆ. ಇದೇ ರೀತಿಯಾಗಿ ಬಲೂಚಿಸ್ತಾನ ಭಾಗದಲ್ಲಿ ಕೂಡ ಈಗ ಬೆಂಕಿ ಹೊತ್ತಿಕೊಂಡಿದ್ದು, ಭ್ರಷ್ಟ ಪಾಕ್ ಸರ್ಕಾರ ನಲುಗಿ ಹೋಗಿದೆ.

ಬಲೂಚಿಸ್ತಾನ ಭಾಗದಲ್ಲಿ ಸರಿಯಾದ ಅಭಿವೃದ್ಧಿ ಆಗದೇ ಅನ್ಯಾಯ ಮಾಡಲಾಗುತ್ತಿದೆ, ಈ ಬಗ್ಗೆ ಪ್ರಶ್ನೆ ಮಾಡಿದರೆ ದೌರ್ಜನ್ಯ ನಡೆಸುತ್ತಿದೆ ಪಾಕಿಸ್ತಾನ ಸರ್ಕಾರ ಹಾಗೂ ಪಾಕಿಸ್ತಾನ ಸೇನೆ ಎನ್ನುವ ಗಂಭೀರ ಆರೋಪ ಮಾಡಲಾಗುತ್ತಿದೆ. ಬಲೂಚಿಸ್ತಾನ ಭಾಗದ ಜನರು ಮುಕ್ಕಾಲು ಶತಮಾನ ಇದೇ ರೀತಿಯ ಅನ್ಯಾಯ ಎದುರಿಸಿಕೊಂಡು ಬರುತ್ತಿದ್ದು, ಪಾಕಿಸ್ತಾನದ ಭ್ರಷ್ಟ ರಾಜಕಾರಣಿಗಳು ಮಾತ್ರ ಇದಕ್ಕೆ ಕೇರ್ ಮಾಡದೆ ತಮ್ಮ ಪಾಡಿಗೆ ತಾವು ಉಗ್ರರನ್ನು ಬೆಳೆಸುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಭರ್ಜರಿಯಾಗಿ ರೊಚ್ಚಿಗೆದ್ದು ಕೂತಿರುವ ಬಲೂಚಿಸ್ತಾನ ಬಂಡುಕೋರರ ಪಡೆ ಇಡೀ ಪಾಕಿಸ್ತಾನ ಸೇನೆಯನ್ನು ನಲುಗಿಸಿಬಿಟ್ಟಿದೆ. ಹೀಗಾಗಿ ಹೆದರಿ ಹೋಗಿರುವ ಪಾಕಿಸ್ತಾನದ ಸರ್ಕಾರ, ಹೆಲಿಕಾಪ್ಟರ್ & ಡ್ರೋನ್ ನಿಯೋಜನೆ ಮಾಡಿದೆ.

Baloch Rebels

ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ

ಬಲೂಚ್ ಲಿಬರೇಶನ್ ಆರ್ಮಿ ಬಂಡುಕೋರರು ದೊಡ್ಡ ತಲೆನೋವನ್ನ ತಂದಿದ್ದಾರೆ ಪಾಕಿಸ್ತಾನಕ್ಕೆ. ಪಾಕಿಸ್ತಾನ ಸೇನೆ ಈಗಾಗಲೇ ಬಲೂಚಿಸ್ತಾನಕ್ಕೆ ನುಗ್ಗಿ ಹಲವು ದಿನಗಳೇ ಕಳೆದಿದ್ದರೂ ಪರಿಸ್ಥಿತಿಯನ್ನ ಮಾತ್ರ ನಿಯಂತ್ರಣಕ್ಕೆ ತರಲು ಆಗುತ್ತಿಲ್ಲ. ಈಗಾಗಲೇ ಸುಮಾರು 200ಕ್ಕೂ ಹೆಚ್ಚು ಬಂಡುಕೋರರ ಹತ್ಯೆ ಮಾಡಿರುವ ಬಗ್ಗೆ ಪಾಕ್ ಸೇನೆ ಮಾಹಿತಿ ನೀಡಿದ್ದು, ಪಾಕಿಸ್ತಾನ ಸೇನೆಯಲ್ಲಿ ಕೂಡ ಸಾವು & ನೋವು ಉಂಟಾಗಿದೆ.

ಹೀಗಿದ್ದಾಗ, ಬಲೂಚಿಸ್ತಾನದಲ್ಲಿ ಬಂಡುಕೋರರು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಹೋರಾಡಲು ಸಜ್ಜಾಗಿದ್ದಾರೆ. ಇದು ಪಾಕಿಸ್ತಾನ ಸೇನೆ ಮತ್ತು ಬಂಡುಕೋರರ ನಡುವೆ ತಿಕ್ಕಾಟ ಹೆಚ್ಚು ಮಾಡಿದೆ. ಹೀಗಾಗಿ ಪಾಕಿಸ್ತಾನ ಸರ್ಕಾರ ಹೇಗಾದರೂ ಮಾಡಿ ಈ ಪರಿಸ್ಥಿತಿ ಹಿಡಿತಕ್ಕೆ ತರಬೇಕು ಎಂದು ಇದೀಗ ಹೆಲಿಕಾಪ್ಟರ್ & ಡ್ರೋನ್ ನಿಯೋಜಿಸಿ ಅದೇಶ ಹೊರಡಿಸಿದೆ. ಆದರೆ ಇದು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೆ ಎಂಬುದನ್ನ ಕಾದು ನೋಡಬೇಕಿದೆ.

ಸಾಮಾನ್ಯರಿಗೆ ಶುರುವಾಯ್ತು ತೀವ್ರ ಆತಂಕ

ಪಾಕಿಸ್ತಾನ ಸೇನೆ ಮತ್ತು ಬಲೂಚ್ ಲಿಬರೇಶನ್ ಆರ್ಮಿ ಬಂಡುಕೋರರು ಒಂದು ಕಡೆ ಹೀಗೆಲ್ಲಾ ಬಡಿದಾಡುತ್ತಿದ್ದರೆ, ಇನ್ನೊಂದು ಕಡೆ ಬಲೂಚಿಸ್ತಾನದ ಸಾಮಾನ್ಯ ಜನರಿಗೆ ಭಯ ಹೆಚ್ಚಾಗುತ್ತಿದೆ. ಈಗಾಗಲೇ 20ಕ್ಕೂ ಹೆಚ್ಚು ಸಾಮಾನ್ಯ ಜನರು ಈ ತಿಕ್ಕಾಟದಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಇದ್ದು, ಮನೆ ಸೇರಿದಂತೆ ನೂರಾರು ವಾಹನಗಳು ಬೆಂಕಿಗೆ ಆಹುತಿ ಆಗಿವೆ. ಹೀಗಾಗಿಯೇ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ ಪಾಕಿಸ್ತಾನದ ಬಲೂಚಿಸ್ತಾನ ಪ್ರದೇಶದಲ್ಲಿ ಇದೀಗ.

ಆರ್ಥಿಕವಾಗಿ ಒದ್ದಾಡುತ್ತಿರುವ ಪಾಕಿಸ್ತಾನ

ಉಗ್ರರನ್ನು ಬೆಳೆಸುತ್ತಾ ತನ್ನ ಗುಂಡಿ ತಾನೇ ತೋಡಿಕೊಂಡಿರುವ ಪಾಕಿಸ್ತಾನ ಎಂಬ ದೇಶವನ್ನು ಈ ಜಗತ್ತಿನಲ್ಲಿ ಯಾರು ಕೂಡ ನಂಬಲು ಸಿದ್ಧವಿಲ್ಲ. ಅದರಲ್ಲೂ ಪಾಕಿಸ್ತಾನ ಈಗಾಗಲೇ ಸಾಲ ಬೇಕು ಎಂದು ದೊಡ್ಡ ದೊಡ್ಡ ದೇಶಗಳ ಬಳಿ ಭಿಕ್ಷೆ ಬೇಡಿ ಬಂದಿದ್ದು, ಸರ್ಕಾರ ನಡೆಸಲು ಕೂಡ ಈ ದೇಶಕ್ಕೆ ಸಾಲ ಬೇಕಾಗಿದೆ. ಪರಿಸ್ಥಿತಿ ಹೀಗಿದ್ದರೂ ತನ್ನ ನೆರೆಯ ದೇಶಗಳ ಜೊತೆಗೆ ಕಿರಿಕ್ ಮಾತ್ರ ನಿಲ್ಲಿಸುತ್ತಿಲ್ಲ ಪಾಕಿಸ್ತಾನ. ಈ ವಿಚಾರವನ್ನು ಕೆಲವು ದಿನಗಳ ಹಿಂದಷ್ಟೇ ಪಾಕಿಸ್ತಾನ ಪ್ರಧಾನಿಯೇ ಒಪ್ಪಿಕೊಂಡು, ನಾವು ಸಾಲಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದಿದ್ದು ನಗೆಪಾಟಲಿಗೆ ಈಡಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+