• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಶುವನ್ನೇ ಮರೆತು ವಿಮಾನ ಏರಿದ ತಾಯಿ, ವಿಮಾನ ಸಿಬ್ಬಂದಿ ಮಾಡಿದ್ದೇನು?

|

ಜೆಡ್ಡಾ, ಮಾರ್ಚ್ 12: ವಿಮಾನ ಏರುವ ಆತುರದಲ್ಲಿ ಯಾವುದೋ ಬ್ಯಾಗ್‌ನ್ನು ಅಥವಾ ಯಾವುದೇ ವಸ್ತುವನ್ನು ಬಿಟ್ಟುಬಂದಿದ್ದು ನೋಡಿದ್ದೇವೆ ಆದರೆ ತನ್ನ ಮಗುವನ್ನೇ ಬಿಟ್ಟು ಬಂದು ವಿಮಾನ ಏರಿದ ಅಪರೂಪದ ಘಟನೆ ನಡೆದಿದೆ.

ಇದನ್ನು ತಿಳಿದ ಸಿಬ್ಬಂದಿ ತಕ್ಷಣವೇ ಎಟಿಸಿಗೆ ಮಾಹಿತಿ ನೀಡಿ, ತಾಯಿ ಹಾಗೂ ಮಗುವಿನ ವಿಚಾರವಾದ ಹಿನ್ನೆಲೆಯಲ್ಲಿ ವಿಮಾನವನ್ನು ಮತ್ತೆ ಜೆಡ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲಾಗಿದೆ. ಮಗುವಿನ ಜತೆ ತಾಯಿ ಮತ್ತೆ ಪ್ರಯಾಣ ಮುಂದುವರಿಸಿದ್ದರು.

ವಿಮಾನ ಪತನ: ಬೋಯಿಂಗ್ ವಿಮಾನ ಚಾಲನೆಗೆ ಮಾರ್ಗಸೂಚಿ ಹೊರಡಿಸಿದ ಕೇಂದ್ರ

ಆಕೆ ವಿಮಾನ ಏರಿ ಕೆಲವು ನಿಮಿಷಗಳವರೆಗೂ ಆಕೆಗೆ ಮಗುವಿನ ನೆನಪೇ ಆಗಲಿಲ್ಲ ಎನ್ನುವುದು ಆಶ್ಚರ್ಯದ ಸಂಗತಿಯೇ ಸರಿ. ಬಳಿಕ ಸಿಬ್ಬಂದಿಗೆ ತಿಳಿಸಿ ಆತಂಕ ವ್ಯಕ್ತಪಡಿಸಿದ್ದರು.

ತಕ್ಷಣ ಕಿಂಗ್ ಅಬ್ದುಲ್ಲಾಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ಕರೆದೊಯ್ಯಲಾಯಿತು. ಎಸ್‌ವಿ832 ವಿಮಾನವು ಜೆಡ್ಡಾದಿಂದ ಕೌಲಾಲಂಪುರಕ್ಕೆ ತೆರಳುತ್ತಿತ್ತು. ಈ ಕುರಿತು ಗಲ್ಫ್ ನ್ಯೂಸ್ ವರದಿ ಮಾಡಿದೆ.

English summary
It’s not unusual for a traveler to forget a small bag or a hand-baggage at an airport. In such cases, flights are generally not cleared to return to airports to collect the forgotten article, unless there is a major emergency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X