ನಿಜವಾಗಲಿದೆಯೇ ಕಣ್ಣು ಕಾಣದ ಮುದುಕಿ ನುಡಿದಿರುವ 2018ರ ಭವಿಷ್ಯ?

Posted By:
Subscribe to Oneindia Kannada
   2018ರ 2 ಪ್ರಮುಖ ಘಟನೆಗಳ ಭವಿಷ್ಯ ನುಡಿದ ಕಣ್ಣಿಲ್ಲದ ಮುದುಕಿ ಬಲ್ಗೇರಿಯಾದ ಬಾಬಾ ವಂಗಾ | Oneindia Kannada

   ಕಣ್ಣು ಇಲ್ಲದಿದ್ದರೂ ಜಗತ್ತಿನ ಭವಿಷ್ಯ ನೋಡುವ ಒಳಗಣ್ಣು ಇದ್ದ ಅಜ್ಜಿ ಬಲ್ಗೇರಿಯಾ ಮೂಲದ ಬಾಬಾ ವಂಗಾ 2018ರಲ್ಲಿ ಸಂಭವಿಸುವ ಎರಡು ಪ್ರಮುಖ ಘಟನಾವಳಿಗಳ ಬಗ್ಗೆ ತಾವು ಬರೆದಿರುವ ಭವಿಷ್ಯದಲ್ಲಿ ನಮೂದಿಸಿದ್ದಾರೆ.

   ಭಾರಿ ಬಿರುಗಾಳಿ ಕಾರಣದಿಂದಾಗಿ ಕಣ್ಣು ಕಳೆದುಕೊಂಡ ಬಲ್ಗೇರಿಯಾದ ಬಾಬಾ ವಂಗಾ ಆ ನಂತರ ಜನರ ಭವಿಷ್ಯ ಕಾಣಲು ಪ್ರಾರಂಭಿಸಿದರು. 1966 ರಲ್ಲಿ ಮರಣ ಹೊಂದಿದ ಬಾಬಾ ವಂಗಾ ಅವರು 51ನೇ ಶತಮಾನದ ವರೆಗೆ ಭೂಮಿಯ ಮೇಲೆ ಘಟಿಸಲಿರುವ ಪ್ರಮುಖ ಬದಲಾವಣೆಗಳ ಬಗ್ಗೆ ಭವಿಷ್ಯವಾಣಿಯನ್ನು ದಾಖಲು ಮಾಡಿ ಹೋಗಿದ್ದಾರೆ.

   ಕಣ್ಣು ಕಾಣದ ಅಜ್ಜಿ ವಂಗಾ ಹೇಳಿದ ಭವಿಷ್ಯ ಸುಳ್ಳಾಗಿದೆ

   ಸುನಾಮಿ, ಅಮೆರಿಕ ಮೇಲೆ ಉಗ್ರರ ದಾಳಿ, ಜಪಾನ್ ಪ್ರವಾಹ ಮುಂತಾದ ಪ್ರಮುಖ ಘಟನಾವಳಿಗಳನ್ನು ಮುಂಚೆಯೇ ಊಹಿಸಿದ್ದ ಬಾಬಾ ವಂಗಾ 2018ರ ಬಗ್ಗೆ ಕೆಲವು ಕುತೂಹಲಕಾರಿ ಅಂಶಗಳನ್ನು ತಮ್ಮ ಭವಿಷ್ಯವಾಣಿಯಲ್ಲಿ ನುಡಿದಿದ್ದಾರೆ.

   ಶುಕ್ರ ಗ್ರಹದಲ್ಲಿ ಶಕ್ತಿ ಸಂಪನ್ಮೂಲ

   ಶುಕ್ರ ಗ್ರಹದಲ್ಲಿ ಶಕ್ತಿ ಸಂಪನ್ಮೂಲ

   ಬಾಬಾ ವಂಗಾ ಅವರ ಭವಿಷ್ಯವಾಣಿ ಪ್ರಕಾರ ಜಗತ್ತಿನ ದೊಡ್ಡಣ ಎಂಬ ವಿಶೇಷಣವನ್ನು ಅಮೆರಿಕ ಕಳೆದುಕೊಳ್ಳಲಿದೆ, ದೊಡ್ಡ ದೇಶ ಚೀನಾ ಅಮೆರಿಕವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಹಿಂದಿಕ್ಕಿ ಜಗತ್ತಿನ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಬಾಬಾ ವಂಗಾ ಅವರು ಭವಿಷ್ಯವಾಣಿಯಲ್ಲಿ ತಿಳಿಸಿದ್ದಾರೆ. ಇದಲ್ಲದೆ ಶುಕ್ರ ಗ್ರಹದಲ್ಲಿ ಹೊಸ ನೈಸರ್ಗಿಕ ಶಕ್ತಿ ಸಂಪನ್ಮೂಲವೊಂದನ್ನು ವಿಜ್ಞಾನಿಗಳು ಗುರುತಿಸಲಿದ್ದಾರೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

   ಭವಿಷ್ಯಕ್ಕೆ ಪುಷ್ಠಿ ನೀಡುತ್ತಿವೆ ಈ ಬೆಳವಣಿಗೆಗಳು

   ಭವಿಷ್ಯಕ್ಕೆ ಪುಷ್ಠಿ ನೀಡುತ್ತಿವೆ ಈ ಬೆಳವಣಿಗೆಗಳು

   ಬಾಬಾ ವಂಗಾ ಭವಿಷ್ಯವಾಣಿಗೆ ತಕ್ಕಂತೆ ಕೆಲವು ಬೆಳವಣಿಗೆಗಳೂ ಸಂಭವಿಸುತ್ತಿರುವುದು ಅವರ ಭವಿಷ್ಯವಾಣಿಯನ್ನು ನಂಬುವಂತೆ ಮಾಡುತ್ತಿವೆ. ಚೀನಾ ಆರ್ಥಿಕವಾಗಿ ಸ್ಥಿರ ಪ್ರಗತಿಯನ್ನು ಸಾಧಿಸುತ್ತಿದೆ ಹಾಗೂ ಅಮೆರಿಕದ ಆರ್ಥಿಕ ಬೆಳವಣಿಗೆಯಲ್ಲಿ ಅಲ್ಪಮಟ್ಟಿನ ಕುಸಿತ ಕಂಡುಬರುತ್ತಿದೆ. ಅದಲ್ಲದೆ ಅಮೆರಿಕದ ಹೊಸ ಅಧ್ಯಕ್ಷರ ಕೆಲವು ನೀತಿಯಿಂದಾಗಿ ಹಲವು ವಿರೋಧಿ ದೇಶಗಳನ್ನು ಹುಟ್ಟುಹಾಕಿಕೊಳ್ಳುತ್ತಿದೆ ಇದರಿಂದಾಗಿ ಅಮೆರಿಕ ಈ ಹಿಂದಿನ ತನ್ನ ಪ್ರಭೆಯನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ.

   ಬಾಹ್ಯಾಕಾಶ ಯಂತ್ರ ಹಾರಾಟಕ್ಕೆ ಮುಹೂರ್ತ ಫಿಕ್ಸ್

   ಬಾಹ್ಯಾಕಾಶ ಯಂತ್ರ ಹಾರಾಟಕ್ಕೆ ಮುಹೂರ್ತ ಫಿಕ್ಸ್

   ನಿರ್ದಿಷ್ಟವಾಗಿ ಶುಕ್ರ ಗ್ರಹದ ಸಂಶೋಧನೆಗೆ ಯಾವುದೇ ಯೋಜನೆಗಳನ್ನು ವಿಜ್ಞಾನಿಗಳು ಹಮ್ಮಿಕೊಂಡಿಲ್ಲವಾದರೂ, ಸೂರ್ಯನ ಹೊರಮೈ ಕರೋನಾ ದ ಅಧ್ಯಯಯನಕ್ಕೆ 2018ರ ಜುಲೈ 'ಪಾರ್ಕರ್ ಸೋಲಾರ್ ಪ್ರೋಬ್' ಬಾಹ್ಯಾಕಾಶ ಯಂತ್ರವನ್ನು ನಾಸಾ ಉಡಾಯಿಸಲಿದೆ. ಇದು ಶುಕ್ರ ಗ್ರಹದ ಹತ್ತಿರದಿಂದ ಹಾದು ಹೋಗಿ ಶುಕ್ರ ಗ್ರಹದ ವಾತಾವರಣದ ಬಗ್ಗೆಯೂ ಮಾಹಿತಿ ಕಲೆ ಹಾಕಲಿದೆ ಹಾಗೂ ಶುಕ್ರ ಗ್ರಹದ ಗುರುತ್ವಾಕರ್ಷಣ ಶಕ್ತಿಯನ್ನು ಬಳಸಿ ತನ್ನ ಕಾರ್ಯಾಚರಣೆ ಮಾಡಲಿದೆ.

   ಶೇ.85 ಸಕ್ಸಸ್ ರೇಟ್

   ಶೇ.85 ಸಕ್ಸಸ್ ರೇಟ್

   ಅಮೆರಿಕದ ವಾಣಿಜ್ಯ ಕೇಂದ್ರಗಳ ಮೇಲೆ ಉಗ್ರರ ವೈಮಾನಿಕ ದಾಳಿ, ಸುನಾಮಿ, ಬ್ರಿಕ್ಸೆಟ್, ಬರಾಕ್ ಒಬಾಮಾ ಅಧ್ಯಕ್ಷರಾಗುವುದು, ಉಗ್ರ ಸಂಘಟನೆಗಳು ಶಕ್ತಿ ಹೆಚ್ಚಿಸಿಕೊಳ್ಳುವುದು ಸೇರಿದಂತೆ ಹಲವು ಬಾಬಾ ವಂಗಾ ಅವರು ಹೇಳಿರುವ ಭವಿಷ್ಯವಾಣಿಗಳು ನಿಜವಾಗಿವೆ. ಬಾಬಾ ವಂಗಾರ ಭವಿಷ್ಯವಾಣಿಗಳು ಶೇ 85 ಪ್ರತಿಶತ ಸತ್ಯವಾಗುತ್ತವೆ ಎನ್ನಲಾಗಿದೆ.

   ಮೂರನೇ ವಿಶ್ವಯುದ್ಧ ಆಗಿಲ್ಲ

   ಮೂರನೇ ವಿಶ್ವಯುದ್ಧ ಆಗಿಲ್ಲ

   ಬಾಬಾ ವಂಗಾರ ಕೆಲವು ಭವಿಷ್ಯವಾಣಿಗಳು ಸುಳ್ಳು ಕೂಡಾ ಆಗಿವೆ. ಬರಾಕ್ ಒಬಾಮಾ ಅಮೆರಿಕದ ಕೊನೆಯ ಅಧ್ಯಕ್ಷರಾಗಲಿದ್ದಾರೆ ಎಂದು ಬಾಬಾ ವಂಗಾ ಹೇಳಿದ್ದರು ಆದರೆ ಒಬಾಮಾ ನಂತರ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಯೂರೋಪ್ ಮೇಲೆ ಮುಸ್ಲಿಮರು ಆಕ್ರಮಣ ಮಾಡುತ್ತಾರೆ ಹಾಗೂ ಅದು ಮೂರನೇ ವಿಶ್ವಯುದ್ಧವೆಂದು ಕರೆಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದರು.

   2341ರ ವೇಳೆಗೆ ಮನುಷ್ಯ ಭೂಮಿ ತ್ಯಜಿಸಬೇಕು

   2341ರ ವೇಳೆಗೆ ಮನುಷ್ಯ ಭೂಮಿ ತ್ಯಜಿಸಬೇಕು

   2028ರ ವೇಳೆಗೆ ಜಗತ್ತಿನಲ್ಲಿ ಹಸಿವು ನಿರ್ಣಾಮವಾಗಲಿದೆ. ಅಲ್ಲದೆ ಮಂಗಳ ಗ್ರಹದ ಮೇಲೆ ವಸಹಾತುಗಳು ನಿರ್ಮಾಣವಾಗಿ ಅವು 2256ರ ವೇಳೆಗೆ ಪರಮಾಣು ಶಸ್ತ್ರಾಸ್ತ ಹೊಂದಲಿವೆ. ಹಾಗೂ ಕೊನೆಗೆ 2341ರ ವೇಳೆಗೆ ಭೂಮಿ ಮನುಷ್ಯ ವಾಸಿಸಲು ಯೋಗ್ಯವಲ್ಲದ ಹಾಗೆ ಕಲುಷಿತವಾಗಿ ಹೋಗುತ್ತದೆ ಎಂದು ಬಾಬಾ ವಂಗಾ ಹೇಳಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Blind women Baba Vanga famous predictor has been predicted 2018s two major events. as per Baba Vanga America is going to loose its 'Super Power nation' fame and China will be next 'Super power' nation. and on Venus scientist will invent a new form of energy.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ